ಡಿಕೆಶಿ ವಾರ್ನಿಂಗ್‍ಗೂ ಡೋಂಟ್‍ಕೇರ್- ಸಚಿವ ಆಕಾಂಕ್ಷಿಗಳಿಂದ ಬದಲಾವಣೆ ಚರ್ಚೆ

By
1 Min Read

ಬೆಂಗಳೂರು: ಪಕ್ಷದ ಕುರಿತಾಗಿ ಯಾರು ಕೂಡ ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಹುಕುಂ ರಾಜ್ಯ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿದೆ.

 

ಒಳಗೊಳಗೆ ಈ ಬಗ್ಗೆ ಅಸಮಾಧಾನ ವ್ಯಕ್ತವಾಗ್ತಿದ್ರೂ ಬಹಿರಂಗವಾಗಿ ಯಾರು ಕೂಡ ಇದರ ವಿರುದ್ಧ ಮಾತಾಡ್ತಿಲ್ಲ. ಬದಲಿಗೆ ಡಿಕೆ ಶಿವಕುಮಾರ್ ಸೂಚನೆ ಸರಿಯಾಗಿಯೇ ಇದೆ ಎಂದು ಹೇಳುತ್ತಲೇ, ಅವರ ಸೂಚನೆಯನ್ನು ಉಲ್ಲಂಘಿಸತೊಡಗಿದ್ದಾರೆ. ಪಕ್ಷದ ವಿಚಾರ ಬಹಿರಂಗವಾಗಿ ಮಾತಾಡಬೇಡಿ ಅಂದ್ರೂ ಕೇಳದ ಶಾಸಕರು, ಸಚಿವ ಸಂಪುಟ ಪುನಾರಚನೆಗೆ ಪಟ್ಟು ಹಿಡಿದಿರುವ ಲಕ್ಷಣಗಳು ಕಾಣ್ತಿವೆ. ಇದನ್ನೂ ಓದಿ: ಪಕ್ಷದ ಬಗ್ಗೆ ಬಹಿರಂಗ ಹೇಳಿಕೆ ನೀಡುವಂತಿಲ್ಲ: ನಾಯಕರಿಗೆ ಡಿಕೆಶಿ ಸೂಚನೆ

135 ಶಾಸಕರಲ್ಲಿ ಸಾಕಷ್ಟು ಜನ ಮಂತ್ರಿ ಸ್ಥಾನದ ಆಕಾಂಕ್ಷಿ ಇದ್ದಾರೆ. ಇದನ್ನ ಬ್ಯಾಲೆನ್ಸ್ ಮಾಡಲು ಸಚಿವರನ್ನ ಬದಲಾವಣೆ ಮಾಡಲೇ ಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ. ನಾವು ನಮ್ಮ ಅನಿಸಿಕೆ ಹೈಕಮಾಂಡಗೂ ಹೇಳ್ತೆವೆ, ಸಿಎಂಗೂ ಹಾಗೂ ಡಿ.ಕೆ ಶಿವಕುಮಾರ ಅವರಿಗೆ ಕೂಡಾ ಹೇಳ್ತೆವೆ ಎಂದಿದ್ದಾರೆ. ಈ ಮೂಲಕ ಹೈಕಮಾಂಡ್ ಕದ ತಟ್ಟುವ ಮುನ್ಸೂಚನೆ ಕೂಡ ನೀಡಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್