ಕಳಿಸಿದ ಲೊಕೇಷನ್‍ಗೆ ಬರಲಿಲ್ಲ ಎಂದು ಕೊರಿಯರ್ ಬಾಯ್‍ಗೆ ಚಾಕು ಇರಿದ ದುಷ್ಕರ್ಮಿ!

Public TV
1 Min Read

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕೊರಿಯರ್ ಬಾಯ್‍ಗೆ (Courier boy) ಚಾಕು ಇರಿದ ಪ್ರಕರಣ ಅಶೋಕನಗರದಲ್ಲಿ ನಡೆದಿದೆ.

ಚಾಕು ಇರಿತಕ್ಕೊಳಗಾದ ಯುವಕನನ್ನು ಮಹಮ್ಮದ್ ಶಫಿ ಎಂದು ಗುರುತಿಸಲಾಗಿದೆ. ಕೊರಿಯರ್ ಮಾಡಲು ಕಳಿಸಿದ ಲೊಕೇಷನ್‍ಗೆ ಬರದೇ, ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ದುಷ್ಕರ್ಮಿ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಕೊರಿಯರ್ ಬಾಯ್‍ಗೆ ದುಷ್ಕರ್ಮಿ ಚಾಕು ಇರಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮೆರಾದಲ್ಲಿ ದುಷ್ಕರ್ಮಿ ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಕುತ್ತಿಗೆಗೆ ಚಾಕು ಇರಿದಿರುವುದು ದಾಖಲಾಗಿದೆ.

ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share This Article