ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ (Bengaluru City University) 5ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆಯಿತು. ಘಟಿಕೋತ್ಸವಕ್ಕೆ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಚಾಲನೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಬಿನಯ್ ಕುಮಾರ್ ದಾಸ್, DRDO ಮಹಾ ನಿರ್ದೇಶಕರು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಸಿಸ್ಟಮ್ಸ್ ಭಾಗಿಯಾಗಿದ್ದರು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆರ್‌ಸಿಬಿ ಆಟಗಾರರು
ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 6 ಜನ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಂಗೀತ ನಿರ್ದೇಶಕ ಅರ್ಜುನ ಜನ್ಯ (Arjun Janya), ಕ್ರಿಕೆಟರ್ ವೆಂಕಟೇಶ್ ಪ್ರಸಾದ್. ಶಿಕ್ಷಣ ತಜ್ಞ, ಮಾಜಿ ಡಿಸಿಎಂ ಅಶ್ವಥ್ ನಾರಾಯಣ ತಂದೆ T.K.ನಾರಾಯಣಪ್ಪ, MLC ಡಾ. ಕೆ.ಗೋವಿಂದ್ ರಾಜ್, ಶಿಕ್ಷಣ ಕ್ಷೇತ್ರ ಮೋಹನ್ ಆಳ್ವಾ. ಕೈಗಾರಿಕೋದ್ಯಮಿ- ಮಾಜಿ MLC ಬಾವಾ ಮೊಹಮ್ಮದ್ ಫಾರೂಕ್‌ಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನೀಡ ಗೌರವಿಸಿದರು. ಉಪ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಘಟಿಕೋತ್ಸವಕ್ಕೆ ಗೈರಾಗಿದ್ದರು.
ಘಟಿಕೋತ್ಸವದಲ್ಲಿ 73 ಪ್ರಥಮ ರ‍್ಯಾಂಕ್ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಸರ್ಟಿಫಿಕೇಟ್, ಚಿನ್ನದ ಪದಕ ಮತ್ತು ನಗದು ಬಹುಮಾನ ವಿತರಣೆ ಮಾಡಲಾಯಿತು. ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ 37,370 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, 23 Ph.D ವಿದ್ಯಾರ್ಥಿಗಳಿಗೆ Ph.D ಪ್ರದಾನ ಮಾಡಲಾಯಿತು.
ಅತಿ ಹೆಚ್ಚು 4 ಚಿನ್ನದ ಪದಕವನ್ನ ಸ್ನೇಹಾ.ಟಿ. ಎಂ.ಎಸ್ಸಿ. ರಸಾಯನಶಾಸ್ತ್ರ ವಿಭಾಗ, ಬಿಸಿಯು, ಅಭಿಷೇಕ್ ಶ್ರೀರಾಮ್ 3 ಚಿನ್ನದ ಪದಕ, ಬಿ.ಕಾಂ, ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಶೇಷಾದ್ರಿಪುರಂ, ದಿವ್ಯಶ್ರೀ. ಎಸ್ 3 ಚಿನ್ನದ ಪದಕ ಬಿ.ಬಿ.ಎ, ಕೃಪಾನಿಧಿ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್, ಚಿಕ್ಕ ಬೆಳ್ಳಂದೂರು ಪಡೆದರು. ಗೌರವ ಡಾಕ್ಟರೇಟ್ ಪಡೆದ ಅರ್ಜುನ ಜನ್ಯ ಮಾತಾಡಿ ಬೆಂಗಳೂರು ನಗರ ವಿವಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ತಿಂದ ಮನೆಗೆ ಕನ್ನ ಹಾಕಬೇಡಿ, ಗಂಟುಮೂಟೆ ಕಟ್ಟಿ ಹೊರಡಿ: ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ

