ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ ವೈದ್ಯ ಸೈಯದ್‌ ದೋಷಿ -‌ NIA ವಿಶೇಷ ನ್ಯಾಯಾಲಯ ಆದೇಶ

By
1 Min Read

– ಪ್ರಕರಣದಲ್ಲಿ ಮೂವರು ದೋಷಿಗಳು ಎಂದು ಕೋರ್ಟ್‌ ತೀರ್ಪು

ಬೆಂಗಳೂರು: ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ ಹೋಮಿಯೋಪತಿ ವೈದ್ಯ ಸೇರಿ ಮೂವರನ್ನು ದೋಷಿಗಳು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಇಂಡಿಯನ್ ಮುಜಾಹಿದ್ದೀನ್‌ನ ಮೂವರು ದೋಷಿಗಳು ಎಂದು ಕೋರ್ಟ್‌ ತೀರ್ಪು ನೀಡಿದೆ. ಭಟ್ಕಳದ ಹೋಮಿಯೋಪತಿ ವೈದ್ಯ ಡಾ. ಸೈಯದ್ ಇಸ್ಮಾಯಿಲ್, ಸದ್ದಾ ಹುಸೇನ್, ಅಬ್ದುಲ್ ದೋಷಿಗಳೆಂದು ತೀರ್ಪಿತ್ತಿದೆ.

2014ರ ಡಿ.30 ರ ಚರ್ಚ್ ಸ್ಟ್ರೀಟ್ ಬ್ಲಾಸ್ಟ್‌ಗೆ ವೈದ್ಯ ಸೈಯದ್‌ ಇಸ್ಮಾಯಿಲ್ ಜಿಲೆಟಿನ್ ಕಡ್ಡಿ ನೀಡಿದ್ದ.‌ ಚರ್ಚ್ ಸ್ಟ್ರೀಟ್ ಸ್ಫೋಟದಲ್ಲಿ ತಮಿಳುನಾಡಿನ ಮಹಿಳೆ ಸಾವನ್ನಪ್ಪಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಪುಲಕೇಶಿ ನಗರ ಮತ್ತು ಭಟ್ಕಳದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

2015ರ ಜ.9 ರಂದು ಆರೋಪಿಗಳನ್ನು ಸಿಸಿಬಿ ಬಂಧಿಸಿತ್ತು. 2015ರ ಜ.26 ರಂದು ಬರಾಕ್ ಒಬಾಮ ಕಾರ್ಯಕ್ರಮದಲ್ಲಿ ಸ್ಫೋಟಕ್ಕೆ ಸಂಚು ಮಾಡಲಾಗಿತ್ತು. ಪ್ರಕರಣದಲ್ಲಿ ಮೂವರನ್ನು ದೋಷಿಗಳು ಎಂದು ಕೋರ್ಟ್‌ ಆದೇಶ ಹೊರಡಿಸಿದೆ. ನಾಳೆ ಮೂವರು ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟ ಆಗಲಿದೆ.

Share This Article