ನಿಖಿಲ್‌ ಸೋಸಲೆನಾ ಬಿಟ್ಬಿಡಿ – ಪೊಲೀಸ್ರಿಗೆ ಒತ್ತಡ ಹಾಕಿದ್ದಕ್ಕೆ ಗೋವಿಂದರಾಜ್‌ ತಲೆದಂಡ

Public TV
1 Min Read

ಬೆಂಗಳೂರು: ಆರ್‌ಸಿಬಿಯ (RCB) ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆಯವರ (Nikhil Sosale) ಬಂಧನ ಆಗುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜ್‌ (K.Govindaraj) ಅವರು ಬಿಟ್ಟು ಕಳಿಸುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದರು ಎಂಬ ವಿಚಾರ ತಿಳಿದು ಬಂದಿದೆ. ಇದೇ ಕಾರಣಕ್ಕೆ ಗೋವಿಂದರಾಜ್‌ ಅವರನ್ನು ತಮ್ಮ‌ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಸಿಎಂ ತೆಗೆದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಗ್ಗಿನ ಜಾವ ಆರ್‌ಸಿಬಿಯ ನಿಖಿಲ್‌ ಸೋಸಲೆ ಬಂಧನ ಆಗುತ್ತಿದ್ದಂತೆ ಬಿಟ್ಟು ಕಳುಹಿಸುವಂತೆ ಕರೆ ಮಾಡಿ ಒತ್ತಡ ಹೇರಿದ್ದರು. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ ವಿಧಾನಸೌಧಕ್ಕೆ ಬರುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ಗೋವಿಂದರಾಜ್‌ ಅವರ ಮೇಲೆ ಸಿಎಂ ಗರಂ ಆಗಿ, ಸ್ಥಾನದಿಂದ ಬಿಡುಗಡೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Chinnaswamy Stampede| ಕುಮಾರಸ್ವಾಮಿ ಸಿಡಿಸಿದ ಬಾಂಬ್‌ಗೆ ಗೋವಿಂದರಾಜ್ ತಲೆದಂಡ!

ಕಾಲ್ತುಳಿತದ ಘಟನೆ ಬಳಿಕ ಕೆಲವು ಸಚಿವರು ಗೋವಿಂದರಾಜ್ ರಾಜೀನಾಮೆಗೆ ಒತ್ತಾಯಿಸಿದ್ದರು. ಆದರೆ ರಾಜೀನಾಮೆ ಪಡೆಯುವ ಯಾವ ಲೆಕ್ಕಾಚಾರವೂ ಇರಲಿಲ್ಲ ಎನ್ನಲಾಗಿದ್ದು, ಸ್ವತಃ ತಾವೇ ಬಂಧನಕ್ಕೆ ಸೂಚಿಸಿದ್ದ ವ್ಯಕ್ತಿಯ ಬಿಡುಗಡೆಗೆ ಕರೆ ಮಾಡಿ ಒತ್ತಡ ಮಾಡಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ, ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಆದೇಶ ಸಿದ್ಧವಾಗುದ್ದಂತೆ ಗೋವಿಂದರಾಜ್‌ಗೆ ಸಿಎಂ ಕಚೇರಿ ಸಿಬ್ಬಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರನ್ನು ಜೂನ್‌ 1, 2023 ರಿಂದ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಇದನ್ನೂ ಓದಿ: ದಯಾನಂದ್‌ ಅಮಾನತು – ಸರ್ಕಾರದ ನಡೆ ಖಂಡಿಸಿ ಅಂಬೇಡ್ಕರ್‌ ಫೋಟೋ ಹಿಡಿದು ಹೆಡ್ ಕಾನ್‌ಸ್ಟೇಬಲ್‌ ಪ್ರತಿಭಟನೆ

Share This Article