ಬೆಂಗಳೂರು: ಜಿಹಾದಿ ಗ್ಯಾಂಗ್ ನ ಶಂಕಿತ ಉಗ್ರರು ಬಂಧನವಾಗುತ್ತಿದ್ದಂತೆ ಪ್ರಮುಖ ಆರೋಪಿ ಬೇಟೆಗಾಗಿ ಸಿಸಿಬಿ ಪೊಲೀಸರು ದೆಹಲಿಗೆ ತೆರಳಿದ್ದಾರೆ.
ಶಂಕಿತ ಉಗ್ರರ ಪ್ರಾಥಮಿಕ ತನಿಖೆಯ ವೇಳೆ ಬೆಂಗಳೂರಿನಲ್ಲೂ ವಿಧ್ವಂಸಕ ಕೃತ್ಯ ಎಸಗಲು ಸಂಚು ಹಾಕಿದ್ರು ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಉಗ್ರರ ವಿಚಾರಣೆ ವೇಳೆ ಆಲ್ ಹಿಂದ್ ಸಂಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಸಂಘಟನೆಯ ಪ್ರಮುಖ ಮುಖಂಡನನ್ನ ಬಂಧಿಸಲು ದೆಹಲಿಗೆ ಹೋಗಿದ್ದಾರೆಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಬಂಧಿತವಾಗಿರುವ ಶಂಕಿತ ಉಗ್ರರಾದ ಮೊಹಮ್ಮದ್ ಹನೀಫ್ ಖಾನ್ (29)ಇಮ್ರಾನ್ ಖಾನ್ (32), ಮೊಹಮ್ಮದ್ ಜೈದ್ (24) ರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ. ಬಂಧಿತ ಮೂವರು ಶಂಕಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು ಹಾಗೂ ದೆಹಲಿಯನ್ನ ಒಬ್ಬರನ್ನ ಬಂಧಿಸಲಾಗಿದೆ. ಉಗ್ರರು ಡಿಸೆಂಬರಿನಲ್ಲಿ ತಮಿಳುನಾಡಿನ ಹಿಂದೂ ಸಂಘಟನೆ ಮುಖಂಡನ ಹತ್ಯೆ ಮಾಡಿ ಬಂದು ಆರು ಮಂದಿ ಶಂಕಿತ ಉಗ್ರರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿಕೊಂಡಿದ್ದರು ಎನ್ನಲಾಗಿದೆ. ನಗರದ ಪಿಜಿಯೊಂದರಲ್ಲಿ ತನ್ನ ಸಹಚರರೊಂದಿಗೆ ಸಭೆ ಮಾಡಿದ್ದರ ಬಗ್ಗೆ ತನಿಖೆಯ ವೇಳೆ ಮಾಹಿತಿ ತಿಳಿದು ಬಂದಿದೆ.
ಉಗ್ರರಿಗೆ ಆಶ್ರಯ ಕಲ್ಪಿಸುವಲ್ಲಿ ಸ್ಥಳೀಯ ಸ್ಲೀಪರ್ ಸೆಲ್ ಗಳು ನೆರವು ನೀಡಿದ್ದರ ಹಿನ್ನೆಲೆಯಲ್ಲಿ ನೆರವು ನೀಡಿದ್ದವರ ಬಗ್ಗೆಯೂ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಂಘಟನೆ ಮುಖಂಡ ಖಾಜಾ ಮೊಯಿದೀನ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ತೀರ್ಮಾನ ತೆಗೆದುಕೊಂಡ ಬಳಿಕ ಖ್ವಾಜಾ ಹಾಗೂ ಅತನ ಸಹಚರರು ಪಶ್ಚಿಮ ಬಂಗಾಳಕ್ಕೆ ಒಡಿಹೊಗಿದ್ದರು. ಗ್ಯಾಂಗ್ ಪ್ರಮುಖ ಶಂಕಿತ ಉಗ್ರ ಖ್ವಾಜ ಮೋಯಿನ್ ಉದ್ದಿನನ್ನ ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತರು ಡ್ರೈ ಫ್ರುಟ್ಸ್ ಬಾಕ್ಸಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಪಿಸ್ತೂಲ್ ಗಳನ್ನ ಕಳುಹಿಕೊಡುತ್ತಿದ್ದದ್ದು ತನಿಖೆಯಿಂದ ಬಯಲಾಗಿದೆ.