ರಾಜಾಹುಲಿ ಮಹಾ ಹೋಮದ ಹಿಂದಿದೆ ಸೀಕ್ರೆಟ್!

Public TV
2 Min Read

ಬೆಂಗಳೂರು: ದೊಡ್ಡ ಗೌಡ್ರ ಮಹಾಪೂಜೆಯ ಮಾದರಿಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸುದರ್ಶನ ನರಸಿಂಹ ಹೋಮ ನಡೆಸಿದ್ದಾರೆ.

ಗೌಡ್ರು ಹಾಗೂ ರೇವಣ್ಣ ಈ ಹಿಂದೆ ಮಹಾ ಹೋಮ ನಡೆಸಿದ್ದರು. ವಿಶೇಷ ಅಂದರೆ ಗೌಡ್ರು ದೇಗುಲದಲ್ಲಿ ಈ ಪೂಜೆ ನಡೆಸಿದ್ರೆ, ಬಿಎಸ್‍ವೈ ತಮ್ಮ ಮನೆಯೊಳಗೆ ಅಗೋಚರಿತ ಪೂಜೆ ನಡೆಸುತ್ತಿದ್ದಾರೆ. ಇದು ಅತ್ಯಂತ ಶಕ್ತಿಶಾಲಿಯಾಗಿ ರಾಜಕೀಯದ ಶತ್ರುಗಳ ಶಕ್ತಿಯನ್ನು ಉಡುಗಿಸುವ ಪವರ್ ಫುಲ್ ಹೋಮ ಇದಾಗಿದೆ.

ಕೇವಲ ರಾಜಕೀಯದ ಹೊರಗಡೆಯ ಶತ್ರು ಮಾತ್ರವಲ್ಲ, ಪಕ್ಷದೊಳಗೆ ಇದ್ದು ತಮಗೆ ಕೇಡು ಬಯಸುವ ಶಕ್ತಿಯ ಬಾಧೆಯೂ ತಮಗೆ ತಟ್ಟದಿರಲಿ ಅಂತ ಈ ಪೂಜೆ ಮಾಡಿದ್ದಾರೆ.

ಎರಡು ವರ್ಷದ ಹಿಂದೆ ಬಿಎಸ್‍ವೈ ರಾಜಕೀಯ ವಾಗಿ ಹಿಂದೆ ಸರಿದಾಗ ಅಪರೇಷನ್ ಕಮಲ ಕೈಕೊಟ್ಟಾಗ ಈ ಪೂಜೆಯನ್ನು ಮಾಡಿದ್ದರು. ಅಂದಿನಿಂದ ಬಿಎಸ್ ವೈ ಬದುಕಿನಲ್ಲಿ ಸಣ್ಣ ಬದಲಾಗಿತ್ತು. ಎರಡು ವರ್ಷದಲ್ಲಿ ಬಿಎಎಸ್ ವೈ ಎದುರಾಳಿಗಳ ರೆಕ್ಕೆ-ಪುಕ್ಕ ಮುರಿದು ಹಾಕಿ ಸಿಎಂ ಕುರ್ಚಿಯನ್ನು ಭದ್ರಪಡಿಸಿದರ ಹಿಂದೆ ಈ ಹೋಮದ ಶಕ್ತಿಯಿತ್ತು ಎನ್ನಲಾಗಿದೆ.

ಅಲ್ಲಿಂದ ಬಿಎಸ್ ವೈ ತಮಗೆ ರಾಜಕೀಯದಲ್ಲಿ ಎಡರು-ತೊಡರುಗಳು ಶುರುವಾಗುತ್ತದೆ. ಬಾಹ್ಯ-ಅಂತರ್ ಶತ್ರುಗಳ ಕಾಟ ಶುರುವಾಗುತ್ತೆ ಅಂದಾಗೆಲ್ಲ ಈ ಪೂಜೆ ಮಾಡುತ್ತಿದ್ದಾರೆ. ಇದು ಎರಡನೇ ಬಾರಿ ಈ ವಿಶೇಷ ಹೋಮ ನಡೆಸಿರೋದು ವಿಶೇಷವಾಗಿದೆ. ಪಕ್ಷದೊಳಗೆ ಕಾಲೆಳೆಯುವ, ತಮ್ಮ ಪುತ್ರನ ಏಳ್ಗೆಯನ್ನು ಸಹಿಸದ ಕೆಲ ಶಕ್ತಿಗಳು ಪಕ್ಷದೊಳಗೆ ಕೆಲಸ ಮಾಡುತ್ತಿರೋದು ಈ ಪೂಜೆಗೆ ಮುಖ್ಯ ಕಾರಣ ಎನ್ನಲಾಗಿದ್ದರೂ. ಹೊರಗಡೆಯ ಶತ್ರುಗಳನ್ನು ಮಣಿಸಲು ಈ ಪೂಜೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸುದರ್ಶನ ನರಸಿಂಹ ಹೋಮದ ವೈಶಿಷ್ಟ್ಯವೇನು?
ಪುರಾಣದಲ್ಲಿ ಶತ್ರು ಸಂಹಾರಕ್ಕಾಗಿ ದೇವತೆಗಳು ಹೋಮ ಪೂಜೆಯ ಮೂಲಕ ವಿಷ್ಣುವನ್ನು ಸುದರ್ಶನ ಚಕ್ರ ಪ್ರಯೋಗಿಸುವಂತೆ ಮಾಡಿ ಶತ್ರುಸಂಹಾರ ಮಾಡುತ್ತಿದ್ದರು. ಪ್ರಹ್ಲಾದನನ್ನು ರಕ್ಷಿಸಲು ಹರಿ ನರಸಿಂಹನ ಅವಾತರವೆತ್ತುವಂತೆ ಇದು ಮಹಾ ವಿಷ್ಣುವನ್ನು ಶತ್ರು ಸಂಚಾರಕ್ಕಾಗಿ ಒಲಿಸಿ ಕೊಳ್ಳುವ ಪರಿ. ಸುದರ್ಶನ ಜಪದಿಂದ ಜೊತೆಯಲ್ಲಿದ್ದು ಕೆಡುಕು ಬಯಸುವವರು ನಾಶವಾದರೆ ಅವರ ಶಕ್ತಿ ಕುಂದಿದರೆ ನರಸಿಂಹನ ಜಪದಿಂದ ಶತ್ರು ಸಂಹಾರವೇ ಆಗಲಿದೆ. ಎದುರಾಳಿ ಸಂಪೂರ್ಣ ಶಕ್ತಿ ಕಳೆದುಕೊಳ್ಳುತ್ತಾನೆ.

ಒಟ್ಟು 12 ಸಾವಿರ ಜಪವನ್ನು ಮಾಡಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗೆ ಒಂದೊಂದು ಅವತಾರ ವೆತ್ತಯತ್ತಾಳೋ ಅದೇ ರೀತಿ ಈ ಹೋಮದಿಂದ ವಿಷ್ಣು ನಾನಾ ಅವತಾರವೆತ್ತಿ ಶತ್ರುಸಂಹಾರ ಮಾಡುತ್ತಾನೆ ಅನ್ನುವ ನಂಬಿಕೆ ಇದೆ.

Share This Article
Leave a Comment

Leave a Reply

Your email address will not be published. Required fields are marked *