– ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಬೆಂಗಳೂರು: ಶುಕ್ರವಾರ ಮಧ್ಯಾಹ್ನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟ (Bengaluru Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಗಾಯಾಳು ಒಬ್ಬರ ಕೆನ್ನೆಯಲ್ಲಿ ಸಿಲುಕಿಕೊಂಡ ಗಾಜಿನ ಚೂರನ್ನು ಬ್ರೂಕ್ ಫೀಲ್ಡ್ ಆಸ್ಫತ್ರೆಯ ವೈದ್ಯರು ಯಶಸ್ವಿಯಾಗಿ ತೆಗೆದಿದ್ದಾರೆ.
ಗಾಯಾಳು ಸ್ವರ್ಣಾಂಭ ಅವರಿಗೆ 35 ರಿಂದ 40% ಗಾಯಗಳಾಗಿದ್ದು ಸುಟ್ಟ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕೆನ್ನೆಯಲ್ಲಿ ಗಾಜಿನ ಚೂರು ಸೇರಿಕೊಂಡಿದ್ದು ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯರು ತೆಗೆದಿದ್ದಾರೆ. ಕೈ , ಕಾಲುಗಳ ಬಳಿ ಆಗಿದ್ದ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಓರ್ವ ವಶಕ್ಕೆ
ಸದ್ಯ ಸ್ವರ್ಣಾಂಭ ಅವರು ಔಟ್ ಆಫ್ ಡೇಂಜರ್ ಆಗಿದ್ದು ಚೇತರಿಸಿಕೊಳ್ಳುತ್ತಾ ಇದ್ದಾರೆ. ಒಂದೆರಡು ದಿನ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದು ಬಳಿಕ ವಾರ್ಡ್ ಗೆ ಶಿಫ್ಟ್ ಮಾಡಲಿದ್ದಾರೆ. ಒಟ್ಟು ನಾಲ್ಕು ಜನ ತಜ್ಞರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ – ಗಾಯಗೊಂಡವರ ಪೂರ್ಣ ವಿವರ ಓದಿ
ಘಟನೆಯಲ್ಲಿ ಗಾಯಗೊಂಡ ಫಾರೂಕ್ ಮತ್ತು ದೀಪಾಂಶು ಔಟ್ ಆಫ್ ಡೇಂಜರ್ ಆಗಿದ್ದು, ಜನರಲ್ ವಾರ್ಡ್ ನಲ್ಲಿ ಫಾರೂಕ್ ಮತ್ತು ದೀಪಾಂಶುಗೆ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸದ್ಯ ಮೂವರೂ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಆಸ್ಪತ್ರೆ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.