ಕೆರೆ ಒತ್ತುವರಿ ತೆರವು ಕಾರ್ಯಚರಣೆ ಮಾಡಿದ ಬಿಬಿಎಂಪಿ

Public TV
1 Min Read

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೆರೆ ಒತ್ತುವರಿ ತೆರವು ಕಾರ್ಯಚರಣೆ ಇಂದು ನಡೆಯಿತು. 140 ಎಕರೆ ಪ್ರದೇಶವುಳ್ಳ ಹುಳಿಮಾವು ಕೆರೆ ಪ್ರದೇಶ ಕಮ್ಮನಹಳ್ಳಿ ಸರ್ವೇಯಲ್ಲಿ ಇಂದು ಒಂದೂವರೆ ಗುಂಟೆ ಪ್ರದೇಶದಲ್ಲಿದ್ದ 2 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

ಅದೇ ಸರ್ವೇಯಲ್ಲಿ 13.25 ಗುಂಟೆ ಜಾಗದಲ್ಲಿರುವ 8 ಕಟ್ಟಡಗಳಿಗೆ ನ್ಯಾಯಾಲಯದಲ್ಲಿ ತಡೆ ಇದೆ. ಇನ್ನು 24 ಗುಂಟೆ ದೇವಸ್ಥಾನದ ಜಾಗದಲ್ಲಿರುವ ಉದ್ಯಾನವನ್ನು ಹಾಗೂ 23 ಗುಂಟೆ ಪ್ರದೇಶ ಖಾಲಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆದು ಪೆನ್ಸಿಂಗ್ ಅಳವಡಿಸಲು ಕ್ರಮ ವಹಿಸಲಾಗಿದೆ. ಕಮ್ಮನಹಳ್ಳಿ ಸರ್ವೇಯಲ್ಲಿ 15 ಎಕರೆ 32 ಗುಂಟೆ ಪ್ರದೇಶವಿದ್ದು, ಅದರಲ್ಲಿ 27 ಗುಂಟೆ ರಸ್ತೆ ನಿರ್ಮಿಸಿದ್ದು, ಖಾಸಗಿಯವರು 1 ಎಕರೆ 30 ಗುಂಟೆ ಒತ್ತುವರಿ ಮಾಡಿಕೊಂಡಿರುವ ಮಾಹಿತಿಯೂ ಇದೆ.

ಹುಳಿಮಾವು ಸರ್ವೇಯಲ್ಲಿ 124 ಎಕರೆ 25 ಗುಂಟೆ ಪ್ರದೇಶವಿದೆ. 17.33 ಎಕರೆ ಪ್ರದೇಶ ಒತ್ತುವರಿಯಾಗಿದ್ದು, 6 ಎಕರೆ 13 ಗುಂಟೆ ರಸ್ತೆ, 11 ಎಕರೆ 20 ಗುಂಟೆ ಬಿಡಿಎ ಬಡಾವಣೆ ಇದೆ. ಅದರಲ್ಲಿ 12 ಗುಂಟೆ ಉದ್ಯಾನ, 15 ಗುಂಟೆ ಅಂಗನವಾಡಿ ಕೇಂದ್ರ, 6.45 ಗುಂಟೆ ಸರ್ಕಾರಿ ಶಾಲೆ, 4 ಗುಂಟೆ ಬ್ಯಾಡ್ಮಿಂಟನ್ ಕೋರ್ಟ್, 5.50 ಗುಂಟೆ ಸಾಯಿಮಂದಿರ, 4 ಗುಂಟೆ ಪ್ರವಚನ ಮಂದಿರ, 1.45 ಗುಂಟೆ ಚೌಡೇಶ್ವರಿ ದೇವಸ್ಥಾನ, 3.45 ಗುಂಟೆ ವೈಷ್ಣವಿ ದೇವಿ ದೇವಸ್ಥಾನ ಇದ್ದು, ಅದಕ್ಕೆಲ್ಲಾ ನೋಟಿಸ್ ಜಾರಿಗೊಳಿಸಿ ತೆರವುಗೊಳಿಸುವ ಸೂಚನೆ ಸಹ ಇಂದು ನೀಡಲಾಗಿದೆ.

ಕೆರೆ ವಿಭಾಗದ ಮುಖ್ಯ ಅಭಿಯಂತರರು ಮೋಹನ್ ಕೃಷ್ಣ, ತಹಶೀಲ್ದಾರ್ ಶಿವಪ್ಪ ಹೆಚ್ ಲಮಾಣಿ ಅವರ ನೇತೃತ್ವದಲ್ಲಿ ಇಂದು 6 ಜೆ.ಸಿ.ಬಿ, 2 ಇಟಾಚಿ ಹಾಗೂ 70 ಪೊಲೀಸ್ ಸಿಬ್ಬಂದಿ ಸಹಯೋಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *