ಯತ್ನಾಳ್, ರೇಣುಕಾಚಾರ್ಯರನ್ನು ಕೂಡ್ಲೇ ಬಂಧಿಸಿ: ಸಿದ್ದು ಆಗ್ರಹ

Public TV
2 Min Read

ಬೆಂಗಳೂರು: ಬಿಜೆಪಿ ಶಾಸಕರಾರ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ರೇಣುಚಾರ್ಯರನ್ನು ಬಂಧಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರೇಣುಕಾಚಾರ್ಯ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕೋಮುಗಲಭೆಗೆ ಪ್ರಚೋದನೆ ನೀಡುವಂತಿದೆ. ಈ ಇಬ್ಬರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತಕ್ಷಣ ಬಂಧಿಸಬೇಕು. ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿ ಧರ್ಮರಾಜಕಾರಣ ಮಾಡುವುದು ಅಮಾನವೀಯ ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ 1: ಜನ ದುಡಿಮೆಯಿಲ್ಲದೆ ಮನೆಯಲ್ಲಿದ್ದಾರೆ, ಇಂತಹ ಸಂದರ್ಭದಲ್ಲಿ ವ್ಯಾಪಾರಸ್ಥರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮಾರಾಟ ಮಾಡುತ್ತಿರುವುದರಿಂದ ಬಡ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೆ ಮಧ್ಯಪ್ರವೇಶಿಸಿ ಪರಿಸ್ಥಿತಿಯ ದುರ್ಬಳಕೆಯನ್ನು ತಪ್ಪಿಸಬೇಕು.

ಟ್ವೀಟ್ 2: ಹಲವೆಡೆ ರೈತರ ಬೆಳೆಗಳಿಗೆ ಮಾರುಕಟ್ಟೆ ಸಿಗದೆ, ಹಣ್ಣು ತರಕಾರಿಗಳು ಕೊಳೆತು ಹೋಗುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು. ನಿನ್ನೆ ಮೊನ್ನೆ ಕೆಲವೆಡೆ ಆಲಿಕಲ್ಲು ಮಳೆ ಸುರಿದು ಬೆಳೆ ನಷ್ಟವಾಗಿದೆ, ಆದಷ್ಟು ಬೇಗ ಸರ್ವೇ ಮಾಡಿ, ವರದಿ ತರಿಸಿಕೊಂಡು ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು.

ಟ್ವೀಟ್ 3: ನಿನ್ನೆ ಮುಖ್ಯಮಂತ್ರಿ ಅವರು ಕರೆಮಾಡಿ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಸಂಬಳ ಕಡಿತ ಮಾಡುವ ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದರು. ನೀವು ಸಂಬಳ ಕಡಿತ ಮಾಡಿ, ನಿಮ್ಮ ನಿರ್ಧಾರ ಸರಿಯಾಗಿದೆ, ನಮ್ಮ ಪಕ್ಷದ ಎಲ್ಲ ಶಾಸಕರು ಇದಕ್ಕೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದೇನೆ.

ಟ್ವೀಟ್ 4: ರೇಣುಕಾಚಾರ್ಯ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕೋಮುಗಲಭೆಗೆ ಪ್ರಚೋದನೆ ನೀಡುವಂತಿದೆ. ಈ ಇಬ್ಬರ ಮೇಲು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತಕ್ಷಣ ಬಂಧಿಸಬೇಕು. ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿ ಧರ್ಮರಾಜಕಾರಣ ಮಾಡುವುದು ಅಮಾನವೀಯ. ಇದನ್ನೂ ಓದಿ: ತಬ್ಲಿಘಿಗೆ ಹೋಗಿ ಆಸ್ಪತ್ರೆಗೆ ದಾಖಲಾಗದವರು ದೇಶದ್ರೋಹಿಗಳು, ಗುಂಡಿಟ್ಟು ಕೊಲ್ಲಿ – ರೇಣುಕಾಚಾರ್ಯ

ಟ್ವೀಟ್ 5: ರೇಣುಕಾಚಾರ್ಯ ಅವರು ಬರೀ ಶಾಸಕರಲ್ಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ. ಅವರು ನೀಡುವ ಪ್ರತಿ ಹೇಳಿಕೆ ಮುಖ್ಯಮಂತ್ರಿಗಳ ಹೇಳಿಕೆಯಷ್ಟೇ ಮಹತ್ವ ಹೊಂದಿರುತ್ತೆ. ಹಾಗಾಗಿ ಕೀಳು ಮಟ್ಟದ ಹೇಳಿಕೆ ನೀಡುವವರು ಅಂತಹ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ. ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು.

ಟ್ವೀಟ್ 6: ಲಾಕ್‍ಡೌನ್ ಉಲ್ಲಂಘಿಸುವವರ ಮತ್ತು ವೈದ್ಯರಿಗೆ ಸಹಕಾರ ನೀಡದವರ ವಿರುದ್ಧ ಕಠಿಣಕ್ರಮ ಕೈಗೊಳ್ಳಿ. ಆದರೆ ಪ್ರತಿಬಾರಿ ಒಂದು ಧರ್ಮದ ವಿರುದ್ಧ ಸುಳ್ಳು ಸುದ್ದಿ, ಅಪಪ್ರಚಾರದ ಮೂಲಕ ಕೋಮುದ್ವೇಷ ಹರಡುವ ರಾಜಕಾರಣವನ್ನು ಸಹಿಸಲು ಸಾಧ್ಯ ಇಲ್ಲ. ಇಂತಹವರ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದ ಬಿಎಸ್‍ವೈ ತಮ್ಮ ಮಾತನ್ನು ಉಳಿಸಿಕೊಳ್ಳಬೇಕು.

ಟ್ವೀಟ್ 7: ಶಾಸಕರು, ಸಂಸದರ ಸಂಬಳ ಕಡಿತ ಮಾಡಲಿ, ಸಂತೋಷ. ಆದರೆ ಸರ್ಕಾರಿ ನೌಕರರ ಸಂಬಳ ಕಡಿತ ಮಾಡುವುದು ಬೇಡ. ಈಗಾಗಲೆ ಒಂದು ದಿನದ ವೇತನವನ್ನು ಅವರು ಬಿಟ್ಟುಕೊಟ್ಟಿದ್ದಾರೆ, ಅಷ್ಟು ಸಾಕು. ಸರ್ಕಾರಿ ನೌಕರರಿಗೂ ಲಾಕ್‍ಡೌನ್ ಇಂದ ಕಷ್ಟನಷ್ಟಗಳಾಗಿದೆ, ಅದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು.

Share This Article
Leave a Comment

Leave a Reply

Your email address will not be published. Required fields are marked *