ಬೆಂಗಳೂರು| ರಾತ್ರಿ ಸುರಿದ ಮಳೆಗೆ ಅಪಾರ್ಟ್‌ಮೆಂಟ್ ಜಲಾವೃತ – ಟ್ರಾಕ್ಟರ್, ಟೆಂಪೋ ಮೂಲಕ ಜನರ ಸ್ಥಳಾಂತರ

Public TV
1 Min Read

– ಬಿಬಿಎಂಪಿ ವಿರುದ್ಧ ಅಪಾರ್ಟ್‌ಮೆಂಟ್ ನಿವಾಸಿಗಳ ಆಕ್ರೋಶ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಭಾನುವಾರ ರಾತ್ರಿ ಸುರಿದ ಮಳೆಯಿಂದ ನಾನಾ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯ (Rain) ಪರಿಣಾಮ ಯಲಹಂಕದ (Yelahanka) ಕೋಗಿಲು ಕ್ರಾಸ್ ಬಳಿಯ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ (Apartment) ಜಲಾವೃತಗೊಂಡಿದೆ.

ಅಪಾರ್ಟ್‌ಮೆಂಟ್ ಜಲಾವೃತಗೊಂಡ ಹಿನ್ನೆಲೆ ನಿವಾಸಿಗಳು ಪರದಾಡುವಂತಾಗಿದೆ. ಅಪಾರ್ಟ್‌ಮೆಂಟ್‌ಗೆ ಹೊಕ್ಕ ನೀರು ಇನ್ನೂ ಕಡಿಮೆಯಾಗಿಲ್ಲ. ಈ ಹಿನ್ನೆಲೆ ಟ್ರಾಕ್ಟರ್, ಟೆಂಪೋ ಮೂಲಕ ಜನರನ್ನು ಅಪಾರ್ಟ್‌ಮೆಂಟ್‌ನಿಂದ ಸ್ಥಳಾಂತರಿಸಲಾಗಿದೆ. ಬಿಬಿಎಂಪಿ (BBMP) ವಿರುದ್ಧ ಅಪಾರ್ಟ್‌ಮೆಂಟ್ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

ಇನ್ನು ಅಪಾರ್ಟ್‌ಮೆಂಟ್‌ಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೊಂದು ಗಂಟೆಯಲ್ಲಿ ಅಪಾರ್ಟ್‌ಮೆಂಟ್‌ಗೆ ತುಂಬಿದ ನೀರನ್ನು ಸಂಪೂರ್ಣವಾಗಿ ಹೊರಹಾಕಲಾಗುವುದು. ಹಿಂದೆ ಇದು ಯಲಹಂಕ ಕೆರೆ ಅಚ್ಚುಕಟ್ಟು ಪ್ರದೇಶವಾಗಿತ್ತು. ಇಲ್ಲಿ ಡಿಫೆನ್ಸ್‌ನವರು ಅನುಮತಿ ತೆಗೆದುಕೊಂಡು ಈ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ್ದಾರೆ. ಅಪಾರ್ಟ್‌ಮೆಂಟ್ ತಡೆಗೋಡೆ ಕುಸಿದು ಸೀವೇಜ್ ವಾಟರ್ ತುಂಬಿಕೊಂಡಿದೆ.  ಒಂದು ಗಂಟೆಯಲ್ಲಿ ನೀರನ್ನು ತೆರವು ಮಾಡುವ ಕೆಲಸ ಆಗಲಿದೆ. ಅಪಾರ್ಟ್‌ಮೆಂಟ್ ತಡೆಗೋಡೆ ಕುಸಿತದ ಜಾಗದಲ್ಲಿ ಮಣ್ಣಿನ ಚೀಲಗಳನ್ನು ಹಾಕುತ್ತಿದ್ದೇವೆ. ಬಿಬಿಎಂಪಿಯಿಂದ ನೀರು, ಊಟವನ್ನು ಸಪ್ಲೈ ಮಾಡಿದ್ದೇವೆ. ರಾಜಕಾಲುವೆಗೂ ಇದಕ್ಕೂ ಸಂಬಂಧವಿಲ್ಲ. ಅಪಾರ್ಟ್‌ಮೆಂಟ್ ಪಕ್ಕದ ಜಾಗದಲ್ಲಿ ಲೀಡ್ ಆಫ್ ಡ್ರೈನ್ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

Share This Article