ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಖೆಡ್ಡಾಕ್ಕೆ ಭೀಳಿಸಿ ಅಮಾನತು ಶಿಕ್ಷೆ ಅನುಭವಿಸುವಂತೆ ಮಾಡಿದವರ ವಿರುದ್ಧ ತೊಡೆ ತಟ್ಟಲು ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಚಿಂತನೆ ನಡೆಸಿದ್ದಾರೆ.
ಈ ಬಗ್ಗೆ ನಗರದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅಲೋಕ್ ಕುಮಾರ್, ಬಹುಕೋಟಿ ಹಗರಣ ಒಂದಂಕಿ ಲಾಟರಿ ಪ್ರಕಣರದ ತನಿಖೆಯನ್ನು ಮೊದಲು ಸಿಐಡಿ ಅಧಿಕಾರಿಗಳು ತನಿಖೆ ಮಾಡಿದ್ದರು. ತನಿಖೆಯ ವೇಳೆ ಒಂದಂಕಿ ಲಾಟರಿ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರ ಇರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೊಟ್ಟಿದ್ದರು ಎಂದು ಹೇಳಿದರು.
ನನ್ನ ಮತ್ತು ಒಂದಂಕಿ ಲಾಟರಿ ಕಿಂಗ್ ಪಿನ್ ಪಾರಿರಾಜ್‍ನ ಕೆಲವೊಂದು ದಾಖಲೆ ಸೃಷ್ಟಿ ಮಾಡಿ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಸಂದೇಶವನ್ನು ನೀಡಿದ್ದೆ ನನ್ನನ್ನು ಅಮಾನತು ಮಾಡುವುದಕ್ಕೆ ಕಾರಣವಾಯಿತು. ಒಂದಂಕಿ ಲಾಟರಿ ಪ್ರಕರಣದಲ್ಲಿ ನನ್ನ ಪಾತ್ರ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ: ಒಂದಂಕಿ ಲಾಟರಿ ಪ್ರಕರಣ – ಅಲೋಕ್ ಕುಮಾರ್‌ಗೆ ಕ್ಲೀನ್ ಚಿಟ್
ಇನ್ನೊಂದು ಪ್ರಕರಣದ ದೂರಿನಲ್ಲಿ ಎಲ್ಲಿಯೂ ಕೂಡ ನನ್ನ ಹೆಸರು ಇರಲಿಲ್ಲ. ಅದರು ಕೂಡ ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನ ಮುಗಿಸಲು ಪ್ರಯತ್ನಿಸಿದರು. ದೇವರ ದಯೇ ನಾನು ಪ್ರಕರಣದಲ್ಲಿ ದೋಷ ಮುಕ್ತನಾಗಿದ್ದೇನೆ. ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದರಿಂದ ಒಂದಂಕಿ ಲಾಟರಿ ಪ್ರಕಣರದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂಬುದು ಜಗತ್ತಿಗೆ ತಿಳಿದಿದ್ದು ಖುಷಿಯಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.