Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್‌ ಪ್ರೇಮಿ

Public TV
2 Min Read

– ಆಂಟಿ ಸಿಗದೇ ತಲೆ ಕೆಡಿಸಿಕೊಂಡು ಹುಚ್ಚನಂತಾಗಿದ್ದ ಪ್ರೇಮಿ
– ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಬಿದ್ದು ವಿವಾಹಿತ ಮಹಿಳೆಯೊಬ್ಬಳು (Married Women) ಭೀಕರ ಹತ್ಯೆಗೀಡಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಆರೋಪಿ ಸಹ ಬಂಧನವಾಗಿದ್ದು, ಪೊಲೀಸ್‌ ತನಿಖೆ ವೇಳೆ ಆರೋಪಿಯ ವಿಕೃತಿ, ಕ್ರೌರ್ಯ ಬಯಲಾಗಿದೆ.

ಹರಿಣಿ (36) ಕೊಲೆಯಾದ ಪ್ರಿಯತಮೆ, ಟೆಕ್ಕಿ ಯಶಸ್ (25) ಕೊಲೆ ಆರೋಪಿ. ಬಹಳ ದಿನಗಳಿಂದ ಪ್ರಿಯತಮೆಯನ್ನ (Lovers) ಮೀಟ್‌ ಮಾಡದೇ ತಲೆ ಕೆಡಿಸಿಕೊಂಡಿದ್ದ ಟೆಕ್ಕಿ ಆಕೆ ಸಿಗುತ್ತಿದ್ದಂತೆ ಮುಗಿಸಿಬಿಡಬೇಕೆಂದು ಪ್ಲ್ಯಾನ್‌ ಮಾಡಿಕೊಂಡಿದ್ದ. ಅದರಂತೆ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿಗೆ (Oyo Room) ಕರೆದೊಯ್ದು, ಹರಿಣಿಗೆ ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆಕೆಯ ದೇಹವನ್ನ ಬೆತ್ತಲೆಗೊಳಿಸಿ ಹರಿಣಿಯ ಕತ್ತು, ಎದೆ ಭಾಗ, ಹೊಟ್ಟೆ ಸೇರಿ ದೇಹದ ಹಲವು ಭಾಗಗಳಿಗೆ ಇರಿದಿದ್ದಾನೆ.

ತಾನೂ ಆತ್ಮಹತ್ಯೆಗೆ ಯತ್ನ
ಹರಿಣಿಯನ್ನ ಬೆತ್ತಲೆಗೊಳಿಸಿ ಭೀಕರವಾಗಿ ಹತ್ಯೆಗೈದಿದ್ದ ಆರೋಪಿ ಯಶಸ್ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ತಾನೇ ಕೆಂಗೇರಿ ಪೊಲೀಸ್‌ (Kengeri Police) ಠಾಣೆಗೆ ಹೋಗಿ ಶರಣಾಗಿದ್ದಾನೆ. ಆದ್ರೆ ಕೆಂಗೇರಿ ಪೊಲೀಸರು ನಮ್ಮ ಠಾಣೆ ವ್ಯಾಪ್ತಿಗೆ ಬರಲ್ಲ ಅಂತ ಹೇಳಿ, ಆರೋಪಿಯನ್ನ ಕರೆತಂದು ಸುಬ್ರಮಣ್ಯಪುರ ಪೊಲೀಸರಿಗೆ (Subramanyapura Police) ಒಪ್ಪಿಸಿದ್ದಾರೆ.

ಆಂಟಿ-ಯುವಕನ ಲವ್‌ಸ್ಟೋರಿ – ಕೊಲೆಯಲ್ಲಿ ಅಂತ್ಯ
ಕೆಂಗೇರಿ ಮೂಲದ ಹರಿಣಿ, ದಾಸೇಗೌಡ ಎಂಬವರ ಪತ್ನಿ. ಕೆಲ ತಿಂಗಳ ಹಿಂದೆ ಏರಿಯಾದಲ್ಲಿ ಜಾತ್ರೆ ಇತ್ತು, ಗೃಹಿಣಿ ಹರಿಣಿ ಇದ್ದ ಏರಿಯಾಗೆ ಜಾತ್ರೆಗೆ ಹೋಗಿದ್ದ ಟೆಕ್ಕಿ ಯಶಸ್, ಅಲ್ಲದೇ ಆಕೆಯನ್ನ ಪರಿಚಯ ಮಾಡಿಕೊಂಡಿದ್ದ. ಕೊನೆಗೆ ಇಬ್ಬರು ಫೋನ್‌ ನಂಬರ್‌ ಕೂಡ ಪರಸ್ಪರ ಪಡೆದುಕೊಂಡಿದ್ರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಚಾಟಿಂಗ್‌, ಡೇಟಿಂಗ್‌ ಶುರು ಮಾಡಿಕೊಂಡಿದ್ರು. ಹೀಗಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತಂತೆ.

ಕ್ರಮೇಣ ಹರಿಣಿ ಗಂಡ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧದ ಗೊತ್ತಾಗಿತ್ತು. ನಂತರ ಹೆಂಡ್ತಿಯ ಫೋನ್ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ. ಕೆಲ ತಿಂಗಳ ಬಳಿಕ ಮತ್ತೆ ಹೊರ ಬಂದಿದ್ದ ಹರಿಣಿ, ತನ್ನ ಬಾಯ್ ಫ್ರೆಂಡ್ ಯಶಸ್‌ನ ಸಂಪರ್ಕಿಸಿದ್ಲು. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಯಶಸ್, ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದ. ಹೀಗಾಗಿ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಮತ್ತೆ ಹರಿಣಿಯನ್ನು ಮೀಟ್ ಮಾಡಿ ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಕರೆದೊಯ್ದ ಯಶಸ್‌, ಅವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಇರಿದು ಕೊಂಡಿದ್ದಾನೆ.

ಯಶಸ್‌ ಶುಕ್ರವಾರ ಕೊಲೆ ಮಾಡಿ ಪರಾರಿಯಾಗಿದ್ದ. ನಂತರ ಸುಬ್ರಹ್ಮಣ್ಯಪುರ ಇನ್ಸ್‌ಪೆಕ್ಟರ್‌ ರಾಜು ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಬಳಿಕ ಎಫ್‌ಎಸ್‌ಎಲ್‌ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ನನಗೂ ಆಕೆಗೂ ಅನೈತಿಕ ಸಂಬಂಧ ಇತ್ತು. ನನ್ನನ್ನ ಅವಾಯ್ಡ್‌ ಮಾಡ್ತಾ ಇದ್ಲು, ಹೀಗಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ .

Share This Article