ಮನೆ ಶುಚಿಗೊಳಿಸುವಾಗ ಕಾಲು ಜಾರಿ ಬಿದ್ದು ಮಹಿಳಾ ಟೆಕ್ಕಿ ಸಾವು

Public TV
1 Min Read

ಬೆಂಗಳೂರು: ಮನೆ ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಅಪಾರ್ಟ್‍ಮೆಂಟ್‍ನಿಂದ ಕೆಳಗೆ ಬಿದ್ದು ಮಹಿಳಾ ಟೆಕ್ಕಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಖುಷ್ಬು ಅಶೀಷ್ ತ್ರಿವೇದಿ (31) ಸಾವನ್ನಪ್ಪಿರುವ ಮಹಿಳೆ. ಈ ಘಟನೆ ಬೆಂಗಳೂರಿನ ಕಾಡುಗೋಡಿ (Kadugodi) ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟಮೆಂಟ್ ನಲ್ಲಿ ನಡೆದಿದೆ. ಇದನ್ನೂ ಓದಿ: ಕಾರು ಅಡ್ಡಗಟ್ಟಿ 50 ಲಕ್ಷ ರೂ. ಹಣ ದೋಚಿದ ಕಿಡಿಗೇಡಿಗಳು

ತ್ರಿವೇದಿಯವರು ಎಂದಿನಂತೆ ಅಪಾರ್ಟ್ ಮೆಂಟ್‍ನ 5ನೇ ಮಹಡಿಯಲ್ಲಿರುವ ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಅಂತೆಯೇ ಮನೆಯ ಹೊರಗಡೆ ಕ್ಲೀನ್ ಮಾಡುತ್ತಿದ್ದ ವೇಳೆ ಕಾಲು ಜಾರಿ ಆಯತಪ್ಪಿ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡು ತ್ರಿವೇದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article