ತಜ್ಞರ ಅಭಿಪ್ರಾಯ ಕೇಳದೆ ಬಿಬಿಎಂಪಿಯಿಂದ ಬೋರ್ ಕೊರೆತ – 25 ಬೋರ್ ಫೇಲ್ಯೂರ್

By
1 Min Read

ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದಲ್ಲಿ (Bengaluru) ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಕೊರತೆ ನಡುವೆ ಬಿಬಿಎಂಪಿ (BBMP) ಯಡವಟ್ಟಿನಿಂದ 10 ರಿಂದ 25 ಬೋರ್‌ವೆಲ್‌ಗಳು (Borwell) ಫೇಲ್ಯೂರ್ ಆಗಿವೆ. ತಜ್ಞರ ಅಭಿಪ್ರಾಯ ಪಡೆಯದೇ ಬಿಬಿಎಂಪಿ ಬೋರ್‌ವೆಲ್‌ಗಳು ಕೊರೆಯುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಹೊಸದಾಗಿ ರಚನೆಯಾದ 110 ಹಳ್ಳಿಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ಕೆಲಸವನ್ನ ಬಿಬಿಎಂಪಿ ಮಾಡುತ್ತಿದೆ. 110 ಹಳ್ಳಿಗಳಲ್ಲಿ 125 ಕಡೆ ಬೋರ್‌ವೆಲ್‌ಗಳು ಕೊರೆಸೊದಕ್ಕೆ ಬಿಬಿಎಂಪಿ ಮುಂದಾಗಿದ್ದು, ತಜ್ಞರ ಅಭಿಪ್ರಾಯ ಸಂಗ್ರಹಿಸದೇ ಬೋರ್ ಕೊರೆಯಲಾಗುತ್ತಿದ್ದು ಬೋರ್‌ಗಳು ಫೇಲ್ಯೂರ್ ಆಗುತ್ತಿವೆ. ಮಹಾದೇವಪುರ ವಲಯದ ವರ್ತೂರು ಸುತ್ತಮುತ್ತ 10 ರಿಂದ 15 ಬೋರ್‌ಗಳು ಫೇಲ್ಯೂರ್ ಆಗಿವೆ. ಇದನ್ನೂ ಓದಿ: ಸರ್ಕಾರದ ವಿರುದ್ದ ಸಮರ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

ಬೋರ್ ಫೇಲ್ಯೂರ್ ಆಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಬೋರ್ ಕೊರೆಯುವ ಟೆಂಡರ್‍ದಾರರಿಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಬೋರ್ ಕೊರೆಯುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಹಾಗೂ ಭೂಗರ್ಭ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಜಾಗ ಗುರುತು ಮಾಡಿಕೊಳ್ಳಿ. ಇಲ್ಲವಾದಲ್ಲಿ ಬೋರ್ ಕೊರೆದು ಫೇಲ್ಯೂರ್ ಆದರೆ ಹಣ ಕೊಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಅಧಿಕಾರಿಗಳು ರವಾನಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಮತ್ತೆ ಒಕ್ಕಲಿಗ ಕಾರ್ಡ್, ಎರಡೂವರೆ ವರ್ಷ ನಂತರ ಡಿಕೆ ಸಿಎಂ ಸಾಧ್ಯತೆ – ಒಕ್ಕಲಿಗ ನಾಯಕರ ಸಭೆಯ ಇನ್‌ಸೈಡ್‌ ಸುದ್ದಿ

Share This Article