ಕೋಲ್ಕತ್ತಾ: ಕಾಳಿಘಾಟ್ ದೇವಾಲಯದ ಬಳಿ ಸ್ಕೈವಾಕ್ ನಿರ್ಮಿಸಲು ನಮ್ಮ ಸರ್ಕಾರ 300 ಕೋಟಿ ಖರ್ಚು ಮಾಡಲಿದೆ ಮತ್ತು ಆ ಪ್ರದೇಶದ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವುದಿಲ್ಲ, ಆದರೆ ಸದ್ಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸದ್ಯಕ್ಕೆ ವ್ಯಾಪಾರಿಗಳನ್ನು ಹಜ್ರಾ ಪಾರ್ಕ್‍ಗೆ ಸ್ಥಳಾಂತರಿಸಲಾಗುವುದು. ಆದರೆ ಸ್ಕೈವಾಕ್ ನಿರ್ಮಾಣ ಪೂರ್ಣಗೊಂಡ ಬಳಿಕ ಕಾಳಿಘಾಟ್ ದೇವಾಲಯದ ಪ್ರದೇಶಕ್ಕೆ ಮತ್ತೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಘಾಲಯದಲ್ಲಿ ಚಂಡಮಾರುತ – 1,000ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಸ್ಕೈವಾಕ್ ನಿರ್ಮಿಸಲು 300 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದೇವೆ. ಒಟ್ಟಾರೆ ದೇವಸ್ಥಾನದ ಪ್ರದೇಶವನ್ನು ಪುನರುಜ್ಜೀವನಗೊಳಿಸಲಾಗುವುದು. ಆದರೆ, ನಮ್ಮ ಬೀದಿ ಬದಿ ವ್ಯಾಪಾರಿ ಸಹೋದರರನ್ನು ತೆರವು ಮಾಡುವುದಿಲ್ಲ. ಸ್ಕೈವಾಕ್ ಸಿದ್ಧವಾದ ನಂತರ, ಅವರು ದಕ್ಷಿಣೇಶ್ವರದ ವ್ಯವಸ್ಥೆಯಂತೆ ಅದರೊಳಗೆ ಮಳಿಗೆಗಳನ್ನು ಹಾಕಿ ತಮ್ಮ ವ್ಯಾಪಾರಗಳನ್ನು ಮುಂದುವರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ
ಪ್ರತಿ ವರ್ಷದಂತೆ ಪೊಯಿಲಾ ಬೋಯಿಸಾಖ್ (ಬಂಗಾಳಿ ಹೊಸ ವರ್ಷ) ಹಿಂದಿನ ದಿನದಂದು ಕಾಳಿಘಾಟ್ ದೇವಾಲಯಕ್ಕೆ ಮಮತಾ ಬ್ಯಾನರ್ಜಿ ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಮಾನವೀಯತೆ ಕಾಪಾಡಲೆಂದು ಕಾಳಿ ದೇವಿಯನ್ನು ಭೇಡಿಕೊಳ್ಳಲು ಬಂದಿದ್ದೇನೆ. ನಮ್ಮೆಲ್ಲರಿಗೂ ಶುಭವಾಗಲಿ ಎಂದು ಹೇಳಿದರು.