ಕ್ಷಮೆಯಾಚಿಸಿದ ಬೇಳೂರು ಗೋಪಾಲಕೃಷ್ಣ

Public TV
2 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಗೌರವವಿದೆ. ಅವರನ್ನು ಉದ್ದೇಶಿಸಿ ನಾನು ಗುಂಡಿಕ್ಕಿ ಕೊಲ್ಲಿ ಅಂತ ಹೇಳಲಿಲ್ಲ. ಪೂಜಾ ಪಾಂಡೆಯವರ ವಿಚಾರ ಮಾತನಾಡುವಾಗ ಮೋದಿ ಅವರ ಹೆಸರನ್ನು ಹೇಳಿದೆ ಅಷ್ಟೆ. ನನ್ನ ಹೇಳಿಕೆ ಪ್ರಧಾನಿ ಅವರ ಗೌರವಕ್ಕೆ ಧಕ್ಕೆ ತಂದಿದ್ದರೆ ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ತಿಂಗಳ ಹಿಂದೆ ಹೇಳಿದ ವಿಚಾರವಿದು. ನಮ್ಮ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ನಾನು ಈ ಮಾತನ್ನು ಹೇಳಿದ್ದೆ. ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡುವಾಗ ಅಲ್ಲಿ ಎಲ್ಲಾ ಮೀಡಿಯಾ ಹಾಗೂ ಪತ್ರಿಕೆಗಳು ಇತ್ತು. ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಪಾಂಡೆ ಎನ್ನುವವರು ಗಾಂಧಿ ಭಾವಚಿತ್ರವನ್ನು ಸುಟ್ಟುಹಾಕಿ, ಗಾಂಧೀಜಿ ಇಂದು ಬದುಕಿದ್ದರೆ ಅವರನ್ನು ನಾನೇ ಗುಂಡು ಹೋಡೆದು ಕೊಲ್ಲುತ್ತಿದ್ದೆ ಅಂತ ಹೇಳಿದ್ದರು. ಗೋಡ್ಸೆಗೆ ಜೈಕಾರ ಹಾಕಿ ದೇಶದಲ್ಲಿ ಅಶಾಂತಿ ತಂದಿದ್ದರು. ಹೀಗೆ ರಾಷ್ಟ್ರಪಿತರಿಗೆ ಗನ್ ತೋರಿಸಿ ಕೊಲ್ಲುತ್ತಿದ್ದೆ ಎನ್ನುವವರಿಗೆ ನಿಮ್ಮ ಪಕ್ಷದ ನಾಯಕ ಮೋದಿಯವರಿಗೆ ಗುಂಡಿಕ್ಕಿ ಕೊಲ್ಲುವ ತಾಖತ್ ಇದೆಯಾ? ಅಂತ ನಾನು ಕೇಳಿದ್ದು ಅಷ್ಟೇ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.ಇದನ್ನೂ ಓದಿ:‘ಮೋದಿಯನ್ನು ಗುಂಡಿಟ್ಟು ಕೊಲ್ಲಿ’ – ವಿವಾದ ಸೃಷ್ಟಿಸಿದ ಬೇಳೂರು ಗೋಪಾಲಕೃಷ್ಣ

ನಾನು ಯಾವತ್ತು ಮೋದಿಗೆ ಗುಂಡಿಕ್ಕಿ ಕೊಲೆ ಮಾಡುತ್ತೇನೆ ಅಂದಿಲ್ಲ. ಪ್ರಧಾನಿಗಳ ಮೇಲೆ ನನಗೆ ಗೌರವವಿದೆ. ನಾನು ಮೋದಿಯನ್ನ ಕೊಲ್ಲಿ ಎಂಬ ಉದ್ದೇಶದಿಂದ ಆ ಮಾತನ್ನು ಹೇಳಿಲ್ಲ. ಹಾಗೇ ಮಾತಿನ ಭರದಲ್ಲಿ ರಾಷ್ಟ್ರಪಿತರ ಬಗ್ಗೆ ಮಾತನಾಡೋ ನಿಮಗೆ ನಿಮ್ಮ ಪಕ್ಷದ ನಾಯಕನಿಗೆ ಗುಂಡು ಹೊಡೆಯುವ ತಾಖತ್ ಇದಿಯಾ ಅಂತ ಪ್ರಶ್ನಿಸಿದೆ ಅಷ್ಟೇ. ನಾನು ಮಾತಿನ ಅರ್ಥ ಮೋದಿಯನ್ನ ಕೊಲ್ಲಿ ಅನ್ನೋದು ಆಗಿರಲಿಲ್ಲ ಎಂದು ತಮ್ಮ ಮಾತಿನ ಅರ್ಥವನ್ನು ವಿವರಿಸಿದ್ದಾರೆ.

ಈ ಹೇಳಿಕೆ ನೀಡಿದಾಗ ಬಿಜೆಪಿ ಅವರು ಎಲ್ಲಿದ್ದರು? ಈಗ ಈ ಮಾತನ್ನು ಕೆದಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಬಿಜೆಪಿ ಅವರು ನನ್ನ ಮೇಲೆ ಕಂಪ್ಲೇಂಟ್ ಕೋಡೋದಾದ್ರೆ ಕೊಡಲಿ. ನಾನು ಮುಂದೆ ಈ ವಿಚಾರವನ್ನು ನಮ್ಮ ವಕೀಲರ ಮುಖಾಂತರ ನೋಡಿಕೊಳ್ಳುತ್ತೇನೆ. ರಾಷ್ಟ್ರಪಿತರಿಗೆ ಅವಮಾನ ಮಾಡಿದ್ದು ನನಗೆ ನೋವಾಯ್ತು ಅದಕ್ಕೆ ನಾನು ಈ ಹೇಳಿಕೆ ನೀಡಿದ್ದು, ಪ್ರಧಾನಿ ಬಗ್ಗೆ ನನಗೆ ಗೌರವವಿದೆ. ನನ್ನ ಹೇಳಿಕೆ ತಪ್ಪಾಗಿದ್ರೆ ನಾನು ಅದನ್ನು ವಾಪಾಸ್ ಪಡೆಯುತ್ತೇನೆ. ಪ್ರಧಾನಿಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಯಾರಿಗೂ ಪ್ರಚೋದನೆ ಮಾಡಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಕ್ಷಮೆಯಾಚಿಸಿದ್ದಾರೆ.

https://www.youtube.com/watch?v=cI5Jed7sDwc

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *