ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ- ವ್ಯಕ್ತಿಯೊಬ್ಬನ ವಿಚಾರಣೆ

By
2 Min Read

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ (Dharmasthala Temple) ಬಗ್ಗೆ ತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ. ಡಿ. ಸಮೀರ್ (Youtuber Sameer MD) ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಇಂದು ಬೆಳ್ತಂಗಡಿ ಪೊಲೀಸರು ((Belthangady Police) ಸಮೀರ್ ಮನೆ ಶೋಧ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹುಲ್ಲಹಳ್ಳಿ ಸಮೀಪದ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿನ ಸಮೀರ್ ಬಾಡಿಗೆ ಮನೆಯಲ್ಲಿ ಇಡೀ ದಿನ ಸ್ಥಳ ಮಹಜರು ನಡೆಸಿದರು. ಇದನ್ನೂ ಓದಿ: ಯೂಟ್ಯೂಬರ್‌ ಅಭಿಷೇಕ್‌ಗೆ SIT ಫುಲ್‌ ಗ್ರಿಲ್‌ ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

  

ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಿಂದ ಸರ್ಚ್ ವಾರಂಟ್ ತಂದಿದ್ದ ಬೆಳ್ತಂಗಡಿ ಗ್ರಾಮಾಂತರ ಠಾಣೆ ಸರ್ಕಲ್ ‌ಇನ್ಸ್ಪೆಕ್ಟರ್ ನಾಗೇಶ್ ಪಕ್ಕಾ ತಯಾರಿ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದರು. ಐವರು ಸಿಬ್ಬಂದಿ ಇಬ್ಬರು ಪಂಚರ ಜೊತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಸಮೀರ್ ಮನೆ ಬಡಿದಿದ್ದಾರೆ. ಯಾವುದೇ ರಿಪ್ಲೆ ಇಲ್ಲದಿದ್ದಾಗ ಸಮೀರ್‌ಗೆ ಕರೆ ಮಾಡಿ ಕೋರ್ಟ್ ಸರ್ಚ್ ವಾರಂಟ್ ಇದ್ದು, ಸಹಕಾರಕ್ಕೆ ಸೂಚಿಸಿದ್ದಾರೆ.

ಕೆಲ ಹೊತ್ತಿನಲ್ಲಿಯೇ ಹಾಜರಾದ ಸಮೀರ್ ಮನೆಯಲ್ಲಿ ಪೊಲೀಸರು ಮತ್ತು ಸೋಕೋ ಟೀಮ್ ಸ್ಪಾಟ್ ಮಹಜರ್ ನಡೆಸಿದ್ದಾರೆ. ಧರ್ಮಸ್ಥಳ AI ಆಡಿಯೋ ಕ್ರಿಯೇಟ್ ಮಾಡಿದ ಸ್ಥಳ, ಬಳಸಿದ ಎಲೆಕ್ಟ್ರಾನಿಕ್ ಸಾಧನಗಳು, ಆ್ಯಪ್ ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್ ಸೇರಿದಂತೆ ಇನ್ನೂ ಅನೇಕ ಸಾಕ್ಷ್ಯಗಳನ್ನು ಸೋಕೋ ಪತ್ತೆ ಮಾಡಿದ್ದು, ಪಂಚರ ಸಮ್ಮುಖದಲ್ಲಿ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

ಧರ್ಮಸ್ಥಳ ಸಂಬಂಧ AI ವಿಡಿಯೋ ಸೃಷ್ಟಿಗೆ ಮಾಹಿತಿ ನೀಡಿ ಸಹಕರಿಸಿ ವ್ಯಕ್ತಿಗಳು, ಅವರು ನೀಡಿದ ವಿಡಿಯೋ, ಆಡಿಯೋ, ಪೋಟೋ ಸೇರಿದಂತೆ ದಾಖಲೆಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಇದೆಲ್ಲದಕ್ಕೂ ಮುಖ್ಯವಾಗಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿ, ವಿಡಿಯೋ ಸೃಷ್ಟಿಗೆ ಕೆಲಸ ಮಾಡಿದವರ ಸಂಬಳದ ಮೂಲ ಸೇರಿದಂತೆ ಅಕ್ಕಪಕ್ಕದ ಮನೆಯವರ ಬಳಿಯು ಪೊಲೀಸರು ಯೂಟ್ಯೂಬರ್ ಸಮೀರ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಾಲದಕ್ಕೆ ವ್ಯಕ್ತಿಯೊಬ್ಬನನ್ನು ಕರೆತಂದು ವಿಚಾರಣೆ ಕೂಡ ನಡೆಸಿದ್ದಾರೆ.

Share This Article