ಬಾಲ್‌ ಅಂತ ನಾಡಬಾಂಬ್‌ ಎಸೆದ ಬಾಲಕ – ಬ್ಯಾಟ್‌ ಬೀಸಿದಾಗ ಸ್ಫೋಟ, ಒಬ್ಬನಿಗೆ ಗಾಯ!

1 Min Read

ಮಂಗಳೂರು: ಬೆಳ್ತಂಗಡಿ (Belthangady) ತಾಲೂಕಿನ ಬಂದಾರು ಗ್ರಾಮದಲ್ಲಿ ಕಾಡುಹಂದಿ ಬೇಟೆಗೆ ಆಡಲು ಇಟ್ಟಿದ್ದ ನಾಡಬಾಂಬ್‌ನ್ನು ಬಾಲ್‌ ಎಂದು ತಿಳಿದು ಬಾಲಕರಿಬ್ಬರು ಅದರಲ್ಲಿ ಕ್ರಿಕೆಟ್‌ ಆಡಿದ್ದು, ಈ ವೇಳೆ ಬಾಂಬ್‌ ಸ್ಫೋಟಗೊಂಡಿದೆ.

ಸ್ಪೋಟದಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಳಕನನ್ನು ಅಭೀಶ್ ಎಂದು ಗುರುತಿಸಲಾಗಿದೆ. ಬಾಲಕನಿಗೆ ಸರ್ಕಾರಿ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು ಮಾಡ್ತಿರೋದನ್ನ ತಡೆದಿದ್ದಕ್ಕೆ ವಿದ್ಯಾರ್ಥಿಯಿಂದ ಪ್ರಾಧ್ಯಾಪಕರ ಮೇಲೆ ಹಲ್ಲೆ

ಮನೆಯ ಮುಂಭಾಗದಲ್ಲಿ ಅಭೀಶ್ ಹಾಗೂ ಮತ್ತೊಬ್ಬ ಬಾಲಕ ಕ್ರಿಕೆಟ್ ಆಡುವ ವೇಳೆ ಕಾಡುಹಂದಿಗೆ ಇಟ್ಟಿದ್ದ ಬಾಲ್‌ ತರಹದ ಸ್ಫೋಟಕ ಸಿಕ್ಕಿದೆ. ಅದನ್ನು ಅಭೀಶ್ ಗಳೆಯ ಚೆಂಡೆಂದು ತಿಳಿದು ಹಾಕಿದ್ದಾನೆ. ಬ್ಯಾಟ್‌ನಿಂದ ಅದಕ್ಕೆ ಹೊಡೆದಾಗ ಅದು ಸ್ಫೋಟವಾಗಿದೆ. ಸ್ಟೋಟದ ಅಷ್ಟೊಂದು ತೀವ್ರತೆ ಇಲ್ಲದ ಕಾರಣ, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

ಧರ್ಮಸ್ಥಳ (Dharmasthala) ಪೊಲೀಸ್‌ (Police) ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಭೇಟೆ ಆಡಲು ಬಾಂಬ್ ಇಟ್ಟಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಮುಡಾ ಪ್ರಕರಣದ ರುವಾರಿ ಸ್ನೇಹಮಯಿ ಕೃಷ್ಣ ಅರೆಸ್ಟ್‌

Share This Article