ಬಳ್ಳಾರಿಯತ್ತ ತಿರುಗಿ ನೋಡದ ಟ್ರಬಲ್ ಶೂಟರ್- ಕಾಂಗ್ರೆಸ್ ಕಚ್ಚಾಟದಲ್ಲಿ ಏಕಾಂಗಿಯಾದ್ರಾ ಉಗ್ರಪ್ಪ?

Public TV
1 Min Read

ಬಳ್ಳಾರಿ: ಕಾಂಗ್ರೆಸ್‍ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಡಿ.ಕೆ.ಶಿವಕುಮಾರ ಎಲ್ಲಿದ್ದಾರೆ ಎಂಬ ಪ್ರಶ್ನೆ ಬಳ್ಳಾರಿ ಕಾಂಗ್ರೆಸ್ಸಿಗರಲ್ಲಿ ಮೂಡಿದೆ. ಚುನಾವಣಾ ದಿನಾಂಕ ಘೋಷಣೆಯಾದ ನಂತರವೂ ಉಸ್ತುವಾರಿ ಸಚಿವರಾಗಿರುವ ಡಿಕೆಶಿ ಬಳ್ಳಾರಿಯತ್ತ ಇನ್ನೂ ತಿರುಗಿ ನೋಡದಿರೋದು ಕೈ ಕಾರ್ಯಕರ್ತರನ್ನ ಕಂಗೆಡಿಸಿದೆ.

ಇತ್ತೀಚೆಗೆ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಬಳ್ಳಾರಿ ಗೆಲುವಿಗಾಗಿ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದ  ಡಿಕೆಶಿವಕುಮಾರ್ ಅಬ್ಬರದ ಪ್ರಚಾರ ನಡೆಸಿದ್ದರು. ಮಾತ್ರವಲ್ಲದೆ ಜಿಲ್ಲೆಯ ಶಾಸಕರೂ ಕೂಡಾ ಅಷ್ಟೇ ಬೆಂಬಲ ಕೊಟ್ಟು ಉಗ್ರಪ್ಪರನ್ನು ಗೆಲ್ಲಿಸಿದ್ದರು. ಆ ಮೂಲಕ ಕಾಂಗ್ರೆಸ್ ಪ್ರತಿಷ್ಠೆ ಉಳಿಸಿದ್ದರು. ಆದ್ರೆ ಈ ಬಾರಿ ಮಾತ್ರ ದೋಸ್ತಿಗಳ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಆಗ್ಲಿ, ಬೇರಾವುದೇ ಕಾಂಗ್ರೆಸ್ ನಾಯಕರಾಗಲಿ ಬಳ್ಳಾರಿಯತ್ತ ತಲೆ ಹಾಕಿಲ್ಲ ಎನ್ನಲಾಗಿದೆ.

ಕಂಪ್ಲಿಯ ಶಾಸಕ ಗಣೇಶ ಜೈಲಿನಲ್ಲಿದ್ರೆ, ಅತೃಪ್ತರ ಗುಂಪಿನಲ್ಲಿರೋ ಶಾಸಕ ನಾಗೇಂದ್ರ ತಟಸ್ಥರಾಗಿ ಮನೆಯಲ್ಲಿದ್ದಾರೆ. ಅತಂತ್ರ ಸ್ಥಿತಿಯಲ್ಲಿ ಆನಂದ್ ಸಿಂಗ್ ಸಿಲುಕಿದ್ರೆ, ಕೊಪ್ಪಳದಲ್ಲಿ ಸಚಿವ ತುಕಾರಾಂ, ಗದಗದಲ್ಲಿ ಪರಮೇಶ್ವರ ನಾಯ್ಕ್ ಬ್ಯುಸಿಯಾಗಿದ್ದಾರೆ. ಇದ್ರಿಂದ ರಣರಂಗದಲ್ಲಿ ವಿಎಸ್ ಉಗ್ರಪ್ಪ ಫುಲ್ ಏಕಾಂಗಿಯಾಗ್ಬಿಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿ ಕುಂದಾಪುರ ನಾಗರಾಜ್ ತಿಳಿಸಿದ್ದಾರೆ.

ಮತ್ತೊಂದೆಡೆ ಈ ಬಾರಿ ಬಿಜೆಪಿ ಹೊಸ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿ ಕಾಂಗ್ರೆಸ್‍ಗೆ ಟಕ್ಕರ್ ಕೊಡಲು ಸಜ್ಜಾಗಿದೆ. ಅಲ್ಲದೆ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಏನು ಇಲ್ಲ ಎಂದು ಮನೆಮನೆಗೆ ಹೋಗಿ ಬಿರುಸಿನ ಪ್ರಚಾರ ನಡೆಸ್ತಿದ್ದಾರೆಎಂದು ಸ್ಥಳೀಯ ಮುದ್ದನಗೌಡ ಹೇಳುತ್ತಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಪಕ್ಷ ಈವರೆಗೆ 14 ಸಲ ಗೆದ್ದಿದೆ. ಈ ಬಾರಿ ಕಾಂಗ್ರೆಸ್ ಆಂತರಿಕ ಕಚ್ಚಾಟಕ್ಕೆ ಬಳ್ಳಾರಿ ರಣಕಣದಲ್ಲಿ ಉಗ್ರಪ್ಪ ಸೋತು ಹೋಗ್ತಾರಾ ಅನ್ನೋ ಅನುಮಾನ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *