ಕುಸಿದ ಮನೆ ಮೇಲ್ಛಾವಣಿ – ಮಗು ಸೇರಿ ಮೂವರ ದುರ್ಮರಣ

Public TV
1 Min Read

ಬಳ್ಳಾರಿ: ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ತಡರಾತ್ರಿ ನಡೆದಿದ್ದು, ಮೃತ ದುರ್ದೈವಿಗಳನ್ನು ಇಮಾಮ್ ಬೀ (45) ಹಸೀನಾ (25) ಮತ್ತು ಮೂರು ವರ್ಷದ ಮಗು ಇಮ್ರಾನ್ ಎಂದು ಗುರುತಿಸಲಾಗಿದೆ. ಈ ಮನೆ ಖಾದರ್ ಬಾಷಾ ಎಂಬವರಿಗೆ ಸೇರಿದೆ.

ಈ ಮನೆಯಲ್ಲಿ ಒಟ್ಟು ಐದು ಜನ ವಾಸವಿದ್ದು, ಘಟನೆ ನಡೆದ ಸಮಯದಲ್ಲಿ ಮೂವರು ಮಾತ್ರ ಮನೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದ ಪರಿಣಾಮ ಈ ಅವಘಢ ಸಂಭವಿಸಿದ್ದು, ಸ್ಥಳಕ್ಕೆ ಬಳ್ಳಾರಿ ಎಸ್‍ಪಿ ಸಿಕೆ.ಬಾಬಾ ಮತ್ತು ಜಿ.ಪಂ ಸಿಇಓ ನಿತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *