ಬೆಳ್ಳಂದೂರು ಕೆರೆ ಈಗ ಕಾಂಗ್ರೆಸ್ ಕೆರೆ: ನಾಮಕರಣ ಪ್ರೋಗ್ರಾಂನಲ್ಲಿ ಸಿಎಂ, ಜಾರ್ಜ್!

Public TV
2 Min Read

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬೆಳ್ಳಂದೂರು ಕೆರೆಗೆ ನವ ಭಾರತ ಪ್ರಜಾ ಸತ್ತಾತ್ಮಕ ಪಕ್ಷ ಮಂಗಳವಾರ ‘ಕಾಂಗ್ರೆಸ್ ಕೆರೆ’ ಎಂದು ನಾಮಕರಣ ಮಾಡಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಬೆಳ್ಳಂದೂರು ಕೆರೆಯಲ್ಲಿ ನೊರೆ ಸಮಸ್ಯೆ ತಾಂಡವವಾಡುತ್ತಿದ್ದರೂ ಮುಕ್ತಿ ಕಲ್ಪಿಸದ ಕಾರಣ ಕಾಂಗ್ರೆಸ್ ಸರ್ಕಾರ ಕೆರೆ ಎಂದು ನಾಮಕರಣ ಮಾಡಲಾಗಿದೆ. ನಾಮಕರಣ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಂಸದ ಪಿ.ಸಿ. ಮೋಹನ್, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರ ವೇಷ ತೊಟ್ಟ ಮುಸುಕುದಾರಿ ಅತಿಥಿಗಳು ಭಾಗಿಯಾಗಿದ್ದಾರೆ.

ಪಕ್ಷದ ವತಿಯಿಂದ ಬೆಳ್ಳಂದೂರು ಕೊಡಿಯಿಂದ ಯಮಲೂರು ಕೋಡಿವರೆಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಸರ್ಕಾರ, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬೆಳ್ಳಂದೂರು ಕೆರೆ ಅಭಿವೃದ್ಧಿ ವಿಚಾರದಲ್ಲಿ ಹಸಿರು ನ್ಯಾಯ ಪೀಠಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧವೂ ಜಾಥಾದಲ್ಲಿ ಕಿಡಿಕಾರಿದ್ರು.

 

ನ್ಯಾಯಾಧಿಕರಣದಲ್ಲಿ ಇಂದು ಏನಾಯ್ತು?: ಬೆಳ್ಳಂದೂರು ಕೆರೆಯ ಅಭಿವೃದ್ಧಿ ವಿಚಾರವಾಗಿ ಕ್ರಿಯಾವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರವಾಗಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದಲ್ಲಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದೆ. ಬಿಬಿಎಂಪಿ, ಬಿಡಬ್ಲ್ಯು ಎಸ್‍ಎಸ್‍ಬಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒಟ್ಟಾಗಿ 10 ದಿನದಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು.

ವರದಿಯಲ್ಲಿ ಘನ ತಾಜ್ಯ ನಿರ್ವಹಣೆ, ಕೊಳಚೆ ನೀರು ಸಂಸ್ಕರಣೆ, ಚರಂಡಿ ನೀರು ತಡೆ ಸೇರಿದಂತೆ ಒಂದೇ ಬಾರಿ ಹೂಳು ತೆಗೆದು ಸ್ವಚ್ಛ ಮಾಡಲು ತೆಗೆದುಕೊಳ್ಳಬಹುದು ಕ್ರಮಗಳ ಕುರಿತು ಪ್ಲಾನ್ ರೂಪಿಸಿ ಅಂತ ನ್ಯಾ. ಸ್ವತಂತ್ರ ಕುಮಾರ್ ನೇತೃತ್ವದ ಪೀಠ ಅಧಿಕಾರಿಗಳಿಗೆ ಸೂಚನೆ ನೀಡಿದೆ. ವಿಚಾರಣೆ ಆರಂಭದಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ನ್ಯಾಯಾಧಿಕರಣ ಇದುವರೆಗೂ ಏನೆಲ್ಲ ಕೆಲಸ ಮಾಡಲಾಗಿದೆ ಅಂತಾ ಪ್ರಶ್ನಿಸಿತು.

ಈ ವೇಳೆ ಅಧಿಕಾರಿಗಳು ನ್ಯಾಯಾಧಿಕರಣ ನೀಡಿದ ಎಲ್ಲ ಕಾರ್ಯ ಮಾಡಲಾಗಿದೆ ಅಂತ ಉತ್ತರಿಸಿದ್ರು. ಇದಕ್ಕೆ ಗರಂ ಆದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಒಂದು ಕೆಜಿ ಕಸ ಇಲ್ಲವಾದ್ರೆ ನಮ್ಮ ಅಧಿಕಾರಿಗಳನ್ನು ಕಳುಹಿಸಿ ವಾಸ್ತವ ವರದಿ ತರಿಸಲಾಗುತ್ತೆ ಎಂದ್ರು. ಈ ವೇಳೆ ಅಧಿಕಾರಿಗಳು ಕೆಲಸ ಪ್ರಗತಿಯಲ್ಲಿದೆ ಅಂತಾ ಪರಿಸ್ಥಿತಿ ನಿಭಾಯಿಸಿದ್ರು.

 

ಇನ್ನು ಅಫಿಡವಿಟ್ ಸಲ್ಲಿಸುವುದು ಬಿಟ್ಟು ಕಾರ್ಯನ್ಮುಕರಾಗಿ ಕೆಲಸ ಮಾಡಿ. ಅಧಿಕಾರಿಗಳ ವರದಿ ತಯಾರಿಸಿ ಅವುಗಳನ್ನು ಪ್ರತಿವಾದಿಗಳಿಗೆ ನೀಡಿ. 10 ದಿನಗಳಲ್ಲಿ ಸುದೀರ್ಘ ವರದಿ ನ್ಯಾಯಧಿಕರಣ ಕ್ಕೆ ಸಲ್ಲಿಸಬೇಕು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಅಧಿಕಾರಿಗಳಿಗೆ ನ್ಯಾಯಾಧಿಕರಣ ಸೂಚಿಸಿದೆ. ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ 8 ಮುಂದೂಡಿದ ನ್ಯಾಯಾಧಿಕರಣ, ಮುಂದಿನ ವಿಚಾರಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥ ಲಕ್ಷ್ಮಣ್ ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ.

ಕೆರೆ ವ್ಯಾಪ್ತಿಯಲ್ಲಿನ ಅಪಾರ್ಟ್ ಮೆಂಟ್ ಗಳಿಗೆ, ಕೆರೆಗೆ ಕೊಳಚೆ ನೀರು ಹರಿ ಬಿಡಲಾಗುವ ಅಪಾರ್ಟ್ ಮೆಂಟ್ ಗಳಿಗೆ, ಘನತಾಜ್ಯ ಸಂಸ್ಕರಣಾ ಘಟಕ ಅಳವಡಿಸದ ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ಜಾರಿ ಅಂತ ಅಧಿಕಾರಿಗಳಿಗೆ ನ್ಯಾಯಾಧಿಕರಣದ ಖಡಕ್ ಸೂಚನೆ ನೀಡಿದೆ.

ಒಂದು ತಿಂಗಳೊಳಗೆ ಸಂಸ್ಕರಣಾ ಘಟಕ ಅಳವಡಿಸಿಕೊಳ್ಳಬೇಕು. ಅಳವಡಿಸಿಕೊಂಡಿರುವ ಸಂಸ್ಕರಣಾ ಘಟಕ ಚಾಲನೆಯಲ್ಲಿರಬೇಕು. ನಿಯಮ ಪಾಲಿಸದ ಅಪಾಟ್ರ್ಮೆಂಟ್‍ಗಳಿಗೆ ನೀರು ವಿದ್ಯುತ್ ಕಟ್ ಮಾಡಿ ಅಂತ ಮೌಖಿಕವಾಗಿ ಅಧಿಕಾರಿಗಳಿಗೆ ನ್ಯಾಯಾಧಿಕರಣ ಸೂಚಿಸಿದೆ.

https://www.youtube.com/watch?v=syYAEeLN9wc

https://www.youtube.com/watch?v=SxvNEB7nWI0

https://www.youtube.com/watch?v=NF8nmES0nO4

https://www.youtube.com/watch?v=uapgPEwN7oY

 

Share This Article
Leave a Comment

Leave a Reply

Your email address will not be published. Required fields are marked *