ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ – ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು

Public TV
3 Min Read

ಬೆಳಗಾವಿ: ಕುಂದಾನಗರಿ ಬೆಳಗಾವಿ (Belagavi) ಅಂದ್ರೆ ರಾಜಕೀಯ ಮನೆತನಗಳ ಸಮರ. ಅದರಲ್ಲೂ ಕತ್ತಿ- ಜಾರಕಿಹೊಳಿ ಕುಟುಂಬದ ಮಧ್ಯೆ ರಾಜಕೀಯ ಜಿದ್ದಾಜಿದ್ದಿ ತೀರಾ ಸಾಮಾನ್ಯ. ಒಬ್ಬರಿಗೊಬ್ಬರು ಕತ್ತಿ ಮಸಿಯುತ್ತಾ ಆಗಾಗ್ಗೆ ಕದನದಲ್ಲಿ ಕೆಲವರು ಜಾರಿ ಬೀಳುತ್ತಲೇ ಇರ್ತಾರೆ. ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ (DCC Bank Election) ಮತ್ತೊಮ್ಮೆ ಬದ್ಧವೈರಿಗಳ ಕದನಕ್ಕೆ ಅಣಿಯಾಗಿದೆ. ಇಂದು ನಡೆದ ಡಿಸಿಸಿ ಬ್ಯಾಂಕ್ ಚುನಾವಣೆ ಶಾಂತಿಯುತವಾಗಿ ನಡೆಯಿತು.

ಬೆಳಗಾವಿ ಡಿಸಿಸಿ ಬ್ಯಾಂಕ್ ಗದ್ದುಗೆಗಾಗಿ ನಡೆದಿರುವ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಹಾಗೂ ಸವದಿ ಮತ್ತು ಕತ್ತಿ ಟೀಂ ಜೊತೆಗೆ ತೀವ್ರ ಕಾದಾಟಕ್ಕೆ ಸಾಕ್ಷಿಯಾಯಿತು. ಜಾರಕಿಹೊಳಿ ಸಹೋದರರು ಒಂದು ಬಣವಾದರೇ, ಸಂಸದ ರಮೇಶ್ ಕತ್ತಿ ಹಾಗೂ ಶಾಸಕ ಲಕ್ಷ್ಮಣ ಸವದಿ ಜಾರಕಿಹೊಳಿ ಬ್ರದರ್ಸಗೆ ತೊಡೆ ತಟ್ಟಿದ್ದಾರೆ. 7 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಸವದಿ ಬಣ ಗೆಲುವು ಸಾಧಿಸಿದರೆ 1 ಕ್ಷೇತ್ರದಲ್ಲಿ ಜಾರಕಿಹೊಳಿ ಬಣ ಗೆಲುವು ಸಾಧಿಸಿ ಸಂಭ್ರಮಾಚರಣೆ ನಡೆಸಿದರು. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೈಡ್ರಾಮಾ; ಜಾರಕಿಹೊಳಿ v/s ಸವದಿ-ಕತ್ತಿ ಬಣ ಜಟಾಪಟಿ

ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಮತದಾನದ ನಡುವೆ ಜಾರಕಿಹೊಳಿ ಬಣದವರು ಮತ್ತು ಸವದಿ-ಕತ್ತಿ ಬಣದ ಸದಸ್ಯರು ಕೈಕೈ ಮಿಲಾಯಿಸಿದರು. ಮತದಾರರಿಗೆ ಡೆಲಿಗೇಷನ್ ಪಾರ್ಮ್ ಕೊಡುತ್ತಿಲ್ಲ ಎಂದ ಜಾರಕಿಹೊಳಿ ಬಣದ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಭರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರ ಮನವೊಲಿಕೆ ಮಾಡಿದರು. ನಂತರ ಜಾರಕಿಹೊಳಿ ಬಣದ ಕಾರ್ಯಕರ್ತರ ವಿರುದ್ಧ ರಾಯಭಾಗ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಸಗೌಡ ಆಸಂಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಬೆಳೆದವರು ಟೀಕೆ, ಟ್ವೀಟ್ ಮಾಡುತ್ತಿದ್ದಾರೆ: ಡಿಕೆಶಿ

ಇನ್ನು ಮತದಾನದ ಹಕ್ಕಿಗಾಗಿ ಪಿಕೆಪಿಎಸ್ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಇದರಿಂದ ನಾಲ್ಕು ತಾಲೂಕಿನ ಫಲಿತಾಂಶದ ಕುರಿತು ಚುನಾವಣಾ ಫಲಿತಾಂಶವನ್ನು ಪ್ರಕಟಿಸದಂತೆ ಚುನಾವಣಾಧಿಕಾರಿಗಳಿಗೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 4 ಕ್ಷೇತ್ರಗಳಾದ ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ, ಹುಕ್ಕೇರಿ ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ನ್ಯಾಯಾಲಯದಲ್ಲಿ ಚುನಾವಣಾ ಫಲಿತಾಂಶ ಘೋಷಣೆ ಮಾಡದಂತೆ ಆದೇಶ ಬರುತ್ತಿದ್ದಂತೆ ನಾಲ್ಕು ತಾಲೂಕಿನ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದರು. ಇದನ್ನೂ ಓದಿ: ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ- ಆರ್‌ಎಸ್‌ಎಸ್‌ಗೆ ಪ್ರಿಯಾಂಕ್‌ ಪ್ರಶ್ನೆ

ರಾಮದುರ್ಗ ತಾಲೂಕಿನ ಫಲಿತಾಂಶ:
ಮಲಣ್ಣಾ ಯಾದವಾಡ – 19 ಮತಗಳು
ಶ್ರೀಕಾಂತ್ ಧವನ – 16 ಮತಗಳು
ಮಲ್ಲಣ್ಣಾ ಯಾದವಾಡ 3 ಮತಗಳಿಂದ ಗೆಲುವು

ಅಥಣಿ ತಾಲೂಕಿನ ಫಲಿತಾಂಶ:
ಲಕ್ಷ್ಮಣ ಸವದಿ- 122 ಮತಗಳು
ಮಹೇಶ್ ಕುಮಟಳ್ಳಿ – 3 ಮತಗಳು
ಲಕ್ಷ್ಮಣ ಸವದಿ 119 ಮತಗಳಿಂದ ಗೆಲುವು

ರಾಯಭಾಗ ತಾಲೂಕಿನ ಫಲಿತಾಂಶ:
ಅಪ್ಪಾಸಾಹೇಬ್ ಕುಲಗೋಡೆ – 120 ಮತಗಳು
ಬಸನಗೌಡ ಆಸಂಗಿ – 64 ಮತಗಳು
ಅಪ್ಪಾಸಾಹೇಬ್ ಕುಲಗೋಡೆ 56 ಮತಗಳಿಂದ ಗೆಲುವು

ಇನ್ನೂ 7 ಕ್ಷೇತ್ರಗಳಲ್ಲಿ ಅಥಣಿ, ರಾಯಬಾಗ, ರಾಮದುರ್ಗ 3 ಕ್ಷೇತ್ರಗಳ ಚುನಾವಣೆ ಫಲಿತಾಂಶ ಅಧಿಕೃತ ಘೋಷಣೆಯಾಗಿದ್ದು ಉಳಿದ ಹುಕ್ಕೇರಿ, ನಿಪ್ಪಾಣಿ, ಬೈಲಹೊಂಗಲ, ಕಿತ್ತೂರು ಕ್ಷೇತ್ರಗಳ 4ರ ಫಲಿತಾಂಶ ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಅಧಿಕೃತವಾಗಿ ಪ್ರಕಟ ಮಾಡುವಂತಿಲ್ಲ. ಹೀಗಾಗಿ ಬೆಳಗಾವಿ ಪೊಲೀಸರು ಬಿ.ಕೆ ಮಾಡಲ್ ಕಾಲೇಜು ಸುತ್ತಮುತ್ತ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಕಳೆದ ಅಕ್ಟೋಬರ್‌ನಿಂದಲೇ ಹತ್ಯೆಗೆ ಸ್ಕೆಚ್‌, ಮರಣೋತ್ತರ ಪರೀಕ್ಷೆಯನ್ನ ನಾನು ನೋಡಬೇಕು ಎಂದಿದ್ದ ಮಹೇಂದ್ರ ರೆಡ್ಡಿ

ಒಟ್ಟಿನಲ್ಲಿ ಮತದಾನ ಶಾಂತಿಯುತವಾಗಿ ಜರುಗಿ 7 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಸವದಿ ಬಣ ಗೆಲುವು ಸಾಧಿಸಿದರೆ, 1 ಕ್ಷೇತ್ರದಲ್ಲಿ ಜಾರಕಿಹೊಳಿ ಬಣ ಗೆಲುವು ಸಾಧಿಸಿದೆ. ಇದನ್ನೂ ಓದಿ: ಮಳೆಯಾಟದಲ್ಲಿ ಗೆದ್ದ ಆಸ್ಟ್ರೇಲಿಯಾ – ಭಾರತದ ವಿರುದ್ಧ 7 ವಿಕೆಟ್‌ಗಳ ಗೆಲುವು

Share This Article