ಬೇಲೆಕೇರಿ ಅದಿರು ಲೂಟಿಯಾಗಿದ್ದು ಬಿಜೆಪಿ ಟೈಂನಲ್ಲಿ: ಹೊಸ ಬಾಂಬ್‌ ಸಿಡಿಸಿದ ಹೆಚ್‌.ಕೆ.ಪಾಟೀಲ್‌

Public TV
1 Min Read

– ಕೇಸ್‌ನಲ್ಲಿ ಭಾಗಿಯಾಗಿದ್ದ 23 ಅಧಿಕಾರಿಗಳನ್ನ ಬಿಜೆಪಿ ದೋಷಮುಕ್ತ ಮಾಡಿದೆ ಎಂದು ಆರೋಪ

ಬೀದರ್‌: ಬೇಲೆಕೇರಿ ಅದಿರು ಲೂಟಿಯಾಗಿದ್ದು ಬಿಜೆಪಿ ಟೈಂನಲ್ಲಿ. ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದ 23 ಅಧಿಕಾರಿಗಳನ್ನು ಬಿಜೆಪಿ ದೋಷಮುಕ್ತ ಮಾಡಿದೆ ಎಂದು ಬೀದರ್‌ನಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಬಾಂಬ್ ಸಿಡಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಹ್ಲಾದ್‌ ಜೋಶಿ, ಆರ್.ಅಶೋಕ್ ಸೇರಿದಂತೆ ಎಲ್ಲರೂ ಕ್ಷಮೆ ಕೇಳಬೇಕು. ಸೈಲ್‌ಗೆ ಲೂಟಿ ಮಾಡಲು ಅನುಕೂಲ ಮಾಡಿದ 23 ಅಧಿಕಾರಿಗಳನ್ನು ದೋಷಮುಕ್ತ ಮಾಡಿದ್ದರು. ಹೀಗಾಗಿ, ಇಂಥಾ ತೀರ್ಪು ಬಂದಾಗ ಬಿಜೆಪಿ ನಾಯಕರು ಮುಖ ಕೆಳಗಡೆ ಹಾಕಬೇಕು ಎಂದು ಕಿಡಿಕಾರಿದರು.

ಈ ಪ್ರಕರಣದಲ್ಲಿ ಇದ್ದವರನ್ನು ನೀವು ಕೈಬಿಟ್ಟಿದ್ದೀರಿ. ಆದರೆ, ನಾಚಿಗೆ ಪಟ್ಟುಕೊಳ್ಳದೇ ಹೇಳಿಕೆ ನೀಡಲು ಬರುತ್ತೀರಲ್ಲ? ಸಮಾಜಕ್ಕೆ ಮುಖ ತೋರಿಸಲು ನಿಮಗೆ ಮುಜುಗರ ಅನಿಸೋದಿಲ್ವಾ? ಸೈಲ್‌ಗೆ ಸಹಕಾರ ನೀಡಿದ ಅಧಿಕಾರಿಗಳನ್ನು ದೋಷಮುಕ್ತ ಮಾಡಿದ್ದಕ್ಕೆ ನೀವು ಕ್ಷಮೆ ಕೇಳಬೇಕು. ಜೊತೆಗೆ ನೀವು ಪಶ್ಚಾತ್ತಾಪ ಏನು ಮಾಡಬೇಕು ಎಂದು ಆತ್ಮಾವಲೋಕ ಮಾಡಿಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ತೀರುಗೇಟು ನೀಡಿದರು.

ಬೇಲೆಕೇರಿ ಅದಿರು ಪ್ರಕರಣದಲ್ಲಿ ಸತೀಶ್ ಸೈಲ್‌ಗೆ ಜೈಲು ಶಿಕ್ಷೆ ಕುರಿತು ಮಾತನಾಡಿ, ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡಿಯಲೇಬೇಕು. ಅವರಿಗೆ ಶಿಕ್ಷೆಯಾಗಬೇಕು ಅಂತಾ ನಾವೇ ತನಿಖೆ ಮಾಡಿಸಿದ್ದು. ಹೀಗಾಗಿ ಇಂದು ಕೋರ್ಟ್ ಸೈಲ್‌ಗೆ ಶಿಕ್ಷೆ ನೀಡಿದ್ದು. ಲೂಟಿ ಮಾಡಿದವರಿಗೆ ಈ ಮಟ್ಟದ ಶಿಕ್ಷೆ ನೀಡಬಹುದು ಎಂದು ಕೋರ್ಟ್ ತೀರ್ಪು ನೀಡಿ ತೋರಿಸಿದೆ ಎಂದು ಸೈಲ್‌ ವಿರುದ್ಧವೇ ಸಚಿವರು ಗುಡುಗಿದ್ದಾರೆ.

Share This Article