ಮಹಾರಾಷ್ಟ್ರದ ಶಿರೋಡಾ ಬೀಚ್‍ನಲ್ಲಿ ಅಲೆಯಬ್ಬರಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ

Public TV
1 Min Read

– ಐವರ ಶವ ಪತ್ತೆ, ಇಬ್ಬರಿಗಾಗಿ ಶೋಧ

ಬೆಳಗಾವಿ: ಮಹಾರಾಷ್ಟ್ರದ ಶಿರೋಡಾ ಬೀಚ್‍ಗೆ ಪ್ರವಾಸಕ್ಕೆ ಹೋಗಿದ್ದ ಖಾನಾಪೂರದ ಲೋಂಡಾದ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ.

ಮೃತರನ್ನು ಇರ್ಫಾನ್ (37), ಫರೀನ್ (34), ಇಬಾದ (13), ಇಕ್ವಾನ್ (15), ಧಾರವಾಡ ಮೂಲದ ಅತ್ತಾರ (16), ಮಹಾರಾಷ್ಟ್ರದ ಫರಾನ್ (34), ಜಾಕೀರ್ (13) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಇಜನಾ ಕಿತ್ತೂರು (10), ಇಮ್ರಾನ್ (42), ಜಬೀನ್ (38) ಸೇಫ್ ಇಸ್ರಾ (16) ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿರೊ ಇಸ್ರೇಲ್ ರಾಯಭಾರ ಕಚೇರಿ, ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಬೆದರಿಕೆ

ಕಳೆದ ಎರಡು ದಿನಗಳ ಹಿಂದೆ 11 ಜನ ಸೇರಿ ಪ್ರವಾಸಕ್ಕೆಂದು ಮಹಾರಾಷ್ಟ್ರಕ್ಕೆ ಹೋಗಿದ್ದರು. ಆಗ ಬೀಚ್‍ನಲ್ಲಿ ಸಮುದ್ರಕ್ಕೆ ಇಳಿದಾಗ ಅಲೆಗಳಿಗೆ ಸಿಲುಕಿ 7 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಬಚಾವ್‌ ಆಗಿದ್ದಾರೆ. ಇದರಿಂದ ಲೋಂಡಾ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಇಲ್ಲಿಯ ವರೆಗೂ ಐವರ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗೆ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ

Share This Article