ಬೆಳಗಾವಿಯಲ್ಲಿ ತಹಶೀಲ್ದಾರ್‌ ಅನುಮಾನಾಸ್ಪದ ಸಾವು – ಪತ್ನಿ, ಆಕೆ ಸಹೋದರನ ವಿರುದ್ಧ ಕೊಲೆ ಆರೋಪ

By
2 Min Read

ಬೆಳಗಾವಿ: ಬೆಳಗಾವಿಯ ಗ್ರೇಡ್ 2 ತಹಶೀಲ್ದಾರ್ (Belagavi Tahsildar) ಸಾವು ಪ್ರಕರಣಕ್ಕೆ ಅಶೋಕ್ ಮಣ್ಣೀಕೇರಿ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಸಂಬಂಧ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬೆಳಗಾವಿ ಎಸಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ‌ಅಶೋಕ್ ಮಣ್ಣಿಕೇರಿ ಅನುಮಾನಾಸ್ಪದ ಸಾವನ್ನಪ್ಪಿದ್ದು, ಅಶೋಕ್ ಮಣ್ಣಿಕೇರಿ ಪತ್ನಿ ಭೂಮಿ, ಸಹೋದರ ಸ್ಯಾಮ್ಯುಯೆಲ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಬೆಳಗಾವಿಯ ಕಾಳಿ ಅಂಬ್ರಾಯದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಅಶೋಕ್ ಮಣ್ಣಿಕೇರಿ ಕುಟುಂಬಸ್ಥರು ವಾಸವಿದ್ದರು. ತಡರಾತ್ರಿ ಹೃದಯಾಘಾತವಾಗಿದೆ ಎಂದು ಆತನ ಪತ್ನಿ‌ ಮತ್ತು ಸಹೋದರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅಶೋಕ್ ಮಣ್ಣಿಕೇರಿ ಮೃತಪಟ್ಟಿದ್ದರು. ಅಶೋಕ್ ಮಣ್ಣಿಕೇರಿ ಸಾವಿನ ಬಗ್ಗೆ‌ ಕುಟುಂಬಸ್ಥರು ತನಿಖೆಗೆ ಒತ್ತಾಯಿಸಿದರು. ಇದನ್ನೂ ಓದಿ: ಪ್ರೇಮವೈಫಲ್ಯ – ಮನನೊಂದ ಯುವತಿ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ!

ಬೆಳಗಾವಿಯ ಕ್ಯಾಂಪ್ ಠಾಣೆಗೆ ಅಶೋಕ್ ಮಣ್ಣಿಕೇರಿ ಸಹೋದರಿ ದೂರು ನೀಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಠಾಣೆ ಎದುರು ಸ್ನೇಹಿತರು ಸಂಬಂಧಿಕರ ಜಮಾವಣೆ ಆಗಿದ್ದಾರೆ. ಇದೇ ವೇಳೆ ಪೊಲೀಸ್ ಠಾಣೆಗೆ ಬಂದಿದ್ದ ಮೃತ ಅಶೋಕ್ ಪತ್ನಿ ಭೂಮಿ, ಅಶೋಕ್ ಪತ್ನಿಯ ಸಹೋದರ ಸ್ಯಾಮ್ಯುಯಲ್ ಮೇಲೆ ಹಲ್ಲೆಗೆ ಯತ್ನಿಸಿದರು. ತಕ್ಷಣ ಅಶೋಕ್ ಪತ್ನಿ ಭೂಮಿ, ಸ್ಯಾಮ್ಯುಯಲ್‌‌‌ನನ್ನು ಪೊಲೀಸರು ರಕ್ಷಿಸಿ ಕರೆದೊಯ್ದರು.

ತಮ್ಮನ ಸಾವಿನ ಬಗ್ಗೆ ತನಿಖೆ ಆಗಬೇಕು ಎಂದು ಅಶೋಕ್ ಮಣ್ಣಿಕೇರಿ ಅಕ್ಕ ಗಿರಿಜಾ ಒತ್ತಾಯಿಸಿದರು. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ಅಶೋಕ್ ಮಣ್ಣೀಕೇರಿ 2018ರ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆದ್ದಾಗ ಅವರ ಆಪ್ತ ಸಹಾಯಕರಾಗಿದ್ದರು. ಅಶೋಕ್ ಮಣ್ಣಿಕೇರಿ ಅಕಾಲಿಕ ನಿಧನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ ವ್ಯಕ್ತಪಡಿಸಿದರು. ಅಶೋಕ ಮಣ್ಣಿಕೇರಿ ನಿಧನ ತೀವ್ರ ನೋವುಂಟು ಮಾಡಿದೆ. ಅಪಾರ ಜ್ಞಾನ, ಅನುಭವವುಳ್ಳ ವ್ಯಕ್ತಿ ಕಳೆದುಕೊಂಡಿದ್ದೇವೆ ಎಂದು ಸಚಿವೆ ಹೆಬ್ಬಾಳ್ಕರ್ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಶಾಂತಿ ಕಾಪಾಡಿ- ಆಸ್ಪತ್ರೆಯಿಂದಲೇ ಬೆಂಬಲಿಗರಿಗೆ ಚಂದ್ರಶೇಖರ್ ಆಜಾದ್ ಸಂದೇಶ

ಬೆಳಗಾವಿಯ ಕೆಎಲ್ಇ ‌ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ‌ಮುಕ್ತಾಯದ ಬೆಳಗಾವಿಯ ವೈಭವ ನಗರದ ಮನೆಗೆ ಅಶೋಕ್ ಮೃತದೇಹ ಆಗಮಿಸಿತು. ಅಂತಿಮ ವಿಧಿವಿಧಾನ ಕಾರ್ಯ ಕುಟುಂಬಸ್ಥರು ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಅಶೋಕ್ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತು.

ಇದಕ್ಕೂ ಮುಂಚೆ ವೈಭವ ‌ನಗರದ ಮನೆಗೆ ಅಶೋಕ್ ಮಣ್ಣಿಕೇರಿ ಮೃತದೇಹ ಆಗಮಿಸಿತು. ‌ಈ ವೇಳೆ ಅಶೋಕ್ ‌ಮಣ್ಣಿಕೇರಿ ಪಾರ್ಥಿವ ಶರೀರ ಅಂತಿಮ ದರ್ಶನವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಡೆದರು. ಪುಷ್ಪ ನಮನ ಸಲ್ಲಿಸಿ ಅಶೋಕ್ ಮಣ್ಣಿಕೇರಿ ‌ಆತ್ಮಕ್ಕೆ ಶಾಂತಿಕೋರಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್