ಕ್ರಿಕೆಟ್ ಆಡಿ ಯುವಕರನ್ನು ಪ್ರೋತ್ಸಾಹಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್

Public TV
1 Min Read

ಖಾನಾಪುರ(ಬೆಳಗಾವಿ): ತಂತ್ರಜ್ಞಾನದ ಈ ಯುಗದಲ್ಲಿ ಯುವ ಜನತೆ ಮೊಬೈಲ್‍ನಲ್ಲಿ ಗೇಮ್, ಚಾಟಿಂಗ್ ಇನ್ನಿತರ ಚಟುವಟಿಕೆಗಳನ್ನು ಮಾಡುವುದನ್ನು ಬಿಟ್ಟು ಹೊರಾಂಗಣದಲ್ಲಿ ಶರೀರವನ್ನು ವ್ಯಾಯಾಮ ಮತ್ತು ಆಟ ಆಡುವ ಮೂಲಕ ಸದೃಢವಾಗಿಟ್ಟುಕೊಂಡರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು.

ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಶನಿವಾರದಂದು ಯುವಕರು ಹಮ್ಮಿಕೊಂಡಂತಹ ಓಪನ್ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಆರೋಗ್ಯವಾಗಿರಬೇಕು ಎಂದು ಊಹಿಸುತ್ತಾರೆ. ಆದರೆ ಶರೀರಕ್ಕೆ ಯಾವುದೇ ತರಹದ ಕೆಲಸ ನೀಡದ ಕಾರಣ ಇತ್ತೀಚಿನ ದಿನಗಳಲ್ಲಿ ಶುಗರ್, ಬಿಪಿ ಹೀಗೆ ಹತ್ತು ಹಲವಾರು ರೋಗಗಳಿಗೆ ಬಲಿಯಾಗಿ ತಮ್ಮ ಜೀವ ಬೆಲೆಯಿಲ್ಲದ ಹಾಗೇ ಬೇಜವಾಬ್ದಾರಿ ತೋರುತ್ತಿದ್ದಾರೆ. ಆದ್ದರಿಂದ ಯುವಜನತೆಗೆ ಮದ್ಯಪಾನ, ಧೂಮಪಾನ ಹಾಗೂ ಅಕ್ರಮ ಚಟುವಟಿಕೆಗಳಿಂದ ದೂರವಿದ್ದು ಹೊರಾಂಗಣ ಆಟ ಆಡಿ, ವ್ಯಾಯಾಮ ಮಾಡಿ ತಮ್ಮ ಆರೋಗ್ಯ ಸದೃಢವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಪಂದ್ಯಾವಳಿಯನ್ನು ಶಾಸಕಿ ಅಂಜಲಿಯವರು ಬ್ಯಾಟ್ ಹಿಡಿದು ಚೆಂಡನ್ನು ಹೊಡೆದು ಉದ್ಘಾಟಿಸಿ ಅಲ್ಲಿದ್ದ ಪ್ರೇಕ್ಷಕರ ಮನರಂಜಿಸಿದರು. ಇದರ ಜೊತೆಗೆ ಈ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವೀತಿಯ ಬಹುಮಾನದ 50,000 ನಗದು ಮೊತ್ತವನ್ನು ನೀಡಿ ಪ್ರೋತ್ಸಾಹಿಸಿದರು.

ಈ ಸಂಧರ್ಭದಲ್ಲಿ ಕ್ರಿಕೇಟ್ ಟೂರ್ನಮೆಂಟ್ ಆಯೋಜಿತ ಯುವಕರು, ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಕ್ರೀಡಾ ಪ್ರೇಮಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *