– ಜಾರಕಿಹೊಳಿ ಬ್ರದರ್ಸ್ ವಿರುದ್ಧ ಲಿಂಗಾಯತ ನಾಯಕರ ಬಹಿರಂಗ ರಣಕಹಳೆ
ಬೆಳಗಾವಿ: ಸಹಕಾರ ಬ್ಯಾಂಕ್ ಗದ್ದುಗೆಗಾಗಿ ಇಂದು ಚುನಾವಣೆ (DCC Bank Election) ನಡೆಯಲಿದ್ದು ಜಾರಕಿಹೊಳಿ ಬ್ರದರ್ಸ್ (Jarkiholi Brothers) ಹಾಗೂ ಸವದಿ ಮತ್ತು ಕತ್ತಿ ಟೀಂ ಜೊತೆಗೆ ತೀವ್ರ ಕಾದಾಟಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಜಾರಕಿಹೊಳಿ ಸಹೋದರರ ವಿರುದ್ಧ ಹಿಂಬದಿಯಿಂದ ಗೇಮ್ ಪ್ಲಾನ್ ಸಿದ್ಧಪಡಿಸುತ್ತಿದ್ದ ಲಿಂಗಾಯತ ನಾಯಕರು (Lingayth Leaders) ಈಗ ಬಹಿರಂಗವಾಗಿಯೇ ರಣಕಹಳೆ ಮೊಳಗಿಸಿದ್ದಾರೆ.
ಜಾರಕಿಹೊಳಿ ಸಹೋದರರ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ (Ramesh Katti) ಹಾಗೂ ಶಾಸಕ ಲಕ್ಷ್ಮಣ ಸವದಿ (Lakashman Savadi) ತೊಡೆ ತಟ್ಟಿ ನಾವು ಯುದ್ಧಕ್ಕೆ ಸಿದ್ಧ ಎನ್ನುವ ಸಂದೇಶ ಸಾರಿದ್ದಾರೆ. ಇಂದು ನಡೆಯಲಿರುವ ಡಿಸಿಸಿ ಬ್ಯಾಂಕ್ ಚುನಾವಣೆ ತೀವ್ರ ಕೂತಹಲ ಮೂಡಿಸಿದ್ದು ಯಾರ ಪರ ಪಿಕೆಪಿಎಸ್ ಡೆಲಿಗೇಟರ್ಸ್ ನಿಲ್ಲಲ್ಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
15 ತಾಲೂಕು ಸೇರಿ ಒಂದು ಇತರ ವಿಭಾಗದಲ್ಲಿ ನಡೆಯಲಿರುವ ಚುನಾವಣೆಯಲ್ಲಿ 8 ತಾಲೂಕು ಹಾಗೂ 1 ಅದರ್ಸ್ ವಿಭಾಗದಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದು 7 ತಾಲೂಕುಗಳ ಚುನಾವಣೆ ನಡೆಯಲಿದೆ. ಆಯ್ಕೆ ಆಗಿರುವ 9 ಅವಿರೋಧ ಅಭ್ಯರ್ಥಿಗಳು ನಮ್ಮ ಪರವಾಗಿ ಇದ್ದು ನಮಗೆ ಡಿಸಿಸಿ ಬ್ಯಾಂಕ್ ಬಹುಮತ ಎಂದು ಜಾರಕಿಹೊಳಿ ಸಹೋದರರು ವಿಶ್ವಾಸದಲ್ಲಿದ್ದರೆ ಯಾರು ಯಾರ ಪರ ಇರಲಿದ್ದಾರೆ ಎನ್ನುವದನ್ನು ಫಲಿತಾಂಶದ ಬಳಿಕ ನೋಡೋಣ ಎಂದು ಶಾಸಕ ಲಕ್ಷ್ಮಣ ಸವದಿ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ – ಕ್ರಮವಹಿಸದೇ ಅಹಿತಕರ ಘಟನೆಯಾದ್ರೆ ನಮ್ಮ ಇಲಾಖೆ ಜವಾಬ್ದಾರಿಯಲ್ಲ ಡಿಸಿಗೆ ಎಸ್‌ಪಿ ಪತ್ರ
ಒಂದಾದ ಲಿಂಗಾಯತ ನಾಯಕರು
ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಸಭೆ ನಡೆಸಿ ಡಿಸಿಸಿ ಬ್ಯಾಂಕ್ ಅಧಿಕಾರ ತಮ್ಮ ಬಳಿ ಸೆಳೆಯುವ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಥಣಿಯಿಂದ ಲಕ್ಷ್ಮಣ ಸವದಿ, ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ, ಹುಕ್ಕೇರಿಯಿಂದ ರಮೇಶ ಕತ್ತಿ, ರಾಮದುರ್ಗದಿಂದ ಮಲ್ಲಣ್ಣ ಯಾದವಾಡ, ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸೋಲಿಸಿ ಉತ್ತಮ ಪಾಟೀಲ ಆಯ್ಕೆಯಾಗುತ್ತಾರೆ.
ಖಾನಾಪೂರದಿಂದ ಅವಿರೋಧ ಆಯ್ಕೆಯಾಗಿರುವ ಅರವಿಂದ ಪಾಟೀಲ, ಕಾಗವಾಡದಿಂದ ಆಯ್ಕೆಯಾಗಿರುವ ರಾಜು ಕಾಗೆ, ಬೈಲಹೊಂಗಲದಿಂದ ಆಯ್ಕೆಯಾಗುವ ಯಾವುದೇ ಅಭ್ಯರ್ಥಿ, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಮಗೆ ಬೆಂಬಲ ಸೂಚಿಸಲಿದ್ದು ಲಿಂಗಾಯತ ಟ್ರಂಪ್ ಕಾರ್ಡ್ ಮೂಲಕ ನಮಗೆ ಅಧಿಕಾರ ಬರುತ್ತೆ ಎನ್ನುವ ವಿಶ್ವಾಸದಲ್ಲಿ ಲಿಂಗಾಯತ ನಾಯಕರಿದ್ದಾರೆ.
ಒಟ್ಟಿನಲ್ಲಿ ಇಂದು ನಡೆಯಲಿರುವ ಚುನಾವಣೆ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿದೆ. ಈಗಾಗಲೇ ನೆರೆ ರಾಜ್ಯಗಳ ರೆಸಾರ್ಟ್‌ನಲ್ಲಿರುವ ಮತದಾರರನ್ನ ಬೆಳಗಾವಿಗೆ ಕರೆತರಲಾಗುತ್ತಿದೆ. ನಿಪ್ಪಾಣಿ ತಾಲೂಕಿನ ಅಣ್ಣಾಸಾಹೇಬ ಜೊಲ್ಲೆ ಹಾಗೂ ಉತ್ತಮ ಪಾಟೀಲ, ಕಿತ್ತೂರು, ಬೈಲಹೊಂಗಲ ತಾಲೂಕುಗಳ ಚುನಾವಣೆ ಸಾಕಷ್ಟು ರೋಮಾಂಚನಕಾರಿಯಾಗಿದ್ದು ಕ್ರಾಸ್ ವೋಟ್ ಆಗುವ ಆತಂಕದಲ್ಲಿ ಅಭ್ಯರ್ಥಿಗಳಿದ್ದಾರೆ.