ದೇಶದ ಹಿಂದುಳಿದ ವರ್ಗಗಳನ್ನು ರಾಹುಲ್ ಗಾಂಧಿ ಚೋರ್ ಅಂದ್ರು: ಮೋದಿ ಕೌಂಟರ್

Public TV
2 Min Read

– ನಾನು ಹಿಂದುಳಿದ ವರ್ಗದವನು

ಮುಂಬೈ: ಮೂರು ಜನ ಕಳ್ಳರ ಹೆಸರಿನ ಕೊನೆಯಲ್ಲಿ ಮೋದಿ ಇದೆ ಎಂದು ಹೇಳಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ಮಧಾ ನಗರದಲ್ಲಿ ನಡೆದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ನನ್ನ ಜಾತಿ, ವೈಯಕ್ತಿಕ ವಿಚಾರವಾಗಿ ವಾಗ್ದಾಳಿ ನಡೆಸುತ್ತಿವೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಹುಲ್ ಗಾಂಧಿ ಅವರು ದೇಶದ ಎಲ್ಲ ಸಮುದಾಯವನ್ನು ಚೋರ್ ಎಂದು ಹೇಳಿದ್ದಾರೆ. ಚಾಯ್ ಮಾರುವವ, ಚೌಕಿದಾರ್, ಮೋದಿ, ದಲಿತ್, ಹಿಂದುಳಿತ ವರ್ಗವನ್ನು ಚೋರ್ ಅಂತ ಕರೆದರೆ ನಾನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ: ಎಲ್ಲ ಮೋದಿಗಳು ಕಳ್ಳರು ಎಂದ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕ್ತೀನಿ: ಸುಶೀಲ್ ಮೋದಿ

ಸಮಾವೇಶದಲ್ಲಿ ಕೇಸರಿ ಜನ ಸಾಗರವೇ ಸೇರಿದೆ. ಇದನ್ನು ನೋಡಿದರೆ ಶರದ್ ರಾವ್ ಯಾಕೆ ಇಲ್ಲಿಂದ ಓಡಿ ಹೋದರು ಅಂತ ಈಗ ಅರ್ಥವಾಗುತ್ತಿದೆ. ಅವರು ಹೋಗಿ 9 ವರ್ಷಗಳೇ ಕಳೆದವು ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಮುಖಂಡ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದರು.  ಇದನ್ನು ಓದಿ: ಪತ್ನಿ, ಮಕ್ಕಳಿಲ್ಲದ ಮೋದಿಗೆ ಪರಿವಾರದ ಮಹತ್ವ ಹೇಗೆ ಅರ್ಥವಾಗುತ್ತೆ: ಶರದ್ ಪವಾರ್

ಸದೃಢ ದೇಶಕ್ಕೆ ಬಲಿಷ್ಠ ನಾಯಕ ಬೇಕು. 2014ರ ಚುನಾವಣೆಯಲ್ಲಿ ಬಹುಮತ ನೀಡಿ ನನ್ನನ್ನು ಆಯ್ಕೆ ಮಾಡಿದವರು ನೀವು. ಇದರಿಂದಾಗಿ ದೇಶದಲ್ಲಿ ಅನೇಕ ನಿರ್ಣಯ, ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು. ಬಡವರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. 5 ವರ್ಷಗಳ ನನ್ನ ಆಡಳಿತವನ್ನು ನೋಡಿದ್ದೀರಿ. ಈ ಬಾರಿಯೂ ಬಹುಮತ ನೀಡಿ ದೇಶದ ಅಭಿವೃದ್ಧಿಗೆ ನಾನು ಶ್ರಮಿಸಲು ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ರಾಹುಲ್ ಗಾಂಧಿ ಹೇಳಿದ್ದೇನು?:
ಮಹಾರಾಷ್ಟ್ರದ ನಾಂದೇಡ್‍ನಲ್ಲಿ ನಡೆದಿದ್ದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ವಜ್ರ ವ್ಯಾಪಾರಿ ನೀರವ್ ಮೋದಿ, ಉದ್ಯಮಿ ಲಲಿತ್ ಮೋದಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಎಲ್ಲರ ಕೊನೆಯಲ್ಲಿ ಮೋದಿ ಅಂತ ಇದೆ. ಎಲ್ಲ ಕಳ್ಳರ ಹೆಸರಿನಲ್ಲಿ ಮೋದಿ ಸಾಮಾನ್ಯ ಹೆಸರಾಗಿರುವುದು ಹೇಗೆ? ನನಗೆ ಒಂದು ಸಂಗತಿಯ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *