ಸೆಣಬಿನ ಬೀಜದ ಎಣ್ಣೆ ಬಗ್ಗೆ ತಿಳಿದಿದ್ದೀರಾ? ಇದರಲ್ಲಿದೆ ತ್ವಚೆ ಸೌಂದರ್ಯದ ಗುಟ್ಟು

Public TV
1 Min Read

ಸೌಂದರ್ಯ ಪ್ರಜ್ಞೆ ಯಾರಿಗೆ ಇಲ್ಲ ಹೇಳಿ? ತಾನು ಚೆನ್ನಾಗಿ ಕಾಣಬೇಕು ಅಂತಾ ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಬ್ಯೂಟಿ ಪಾರ್ಲರ್‌ಗೆ ಹೋಗುವುದು, ಅದು ಇದು ಅಂತಾ ಏನೆಲ್ಲಾ ಮಾಡ್ತಾರೆ. ನೈಸರ್ಗಿಕ ವಿಧಾನಗಳ ಮೂಲಕ ಸೌಂದರ್ಯ ವೃದ್ಧಿಸಿಕೊಳ್ಳಲು ಬಯಸುವವರೇ ಹೆಚ್ಚು. ಅಂತಹವರಿಗೆ ಸೆಣಬಿನ ಬೀಜದ ಎಣ್ಣೆ ತುಂಬಾ ಪ್ರಯೋಜನಕಾರಿ. ತ್ವಚೆಗೆ ಸೆಣಬಿನ ಬೀಜದ ಎಣ್ಣೆಯಿಂದ (Hemp Seed Oil) ಉಪಯೋಗಗಳಿವೆ.

ಚರ್ಮದ ಆರೈಕೆಗೆ ಸಹಕಾರಿ
ಸೆಣಬಿನ ಬೀಜದ ಎಣ್ಣೆ ಹೇರಳವಾದ ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಆರೋಗ್ಯಕರ ಕೂದಲು ಮತ್ತು ಚರ್ಮಕ್ಕೆ (Skin) ಇದು ಅತ್ಯುತ್ತಮ ಆಯ್ಕೆ. ಸೆಣಬಿನ ಬೀಜಗಳು ಬಹುಅಪರ್ಯಾಪ್ತ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದನ್ನೂ ಓದಿ: ಮುಖದಲ್ಲಿನ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಿ ಅಂದ ಹೆಚ್ಚಿಸಿಕೊಳ್ಳಿ

ಚರ್ಮ ಆರೋಗ್ಯದಲ್ಲಿ ಇದರ ಪ್ರಯೋಜನವೇನು?
ಸೆಣಬಿನ ಬೀಜದ ಎಣ್ಣೆಯು ಚರ್ಮವನ್ನು ತೇವಗೊಳಿಸುತ್ತದೆ. ಇದು ಚರ್ಮದ ರಂಧ್ರಗಳನ್ನು ಮುಚ್ಚುವುದಿಲ್ಲ. ತೇವಾಂಶ ಕಾಪಾಡುವುದರಿಂದ ಚರ್ಮದ ಶುಷ್ಕತೆಯ ವಿರುದ್ಧ ಹೋರಾಡುತ್ತೆ. ಚರ್ಮದ ತೇವಾಂಶವನ್ನು ದೀರ್ಘಗೊಳಿಸಿ ಶಕ್ತಗೊಳಿಸುತ್ತದೆ.

ಮೊಡವೆ ನಿವಾರಿಸುತ್ತೆ
ಸೆಣಬಿನ ಬೀಜದ ಎಣ್ಣೆಯು ಮೊಡವೆ (Acne), ಎಸ್ಜಿಮಾ ಮತ್ತು ಸೋರಿಯಾಸಿಸ್‌ನಂತಹ ಉರಿಯೂತದ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡುತ್ತದೆ. ಉರಿಯೂತವನ್ನು ಶಮನಗೊಳಿಸಿ ಚರ್ಮದ ಆರೋಗ್ಯಕ್ಕೆ ಜನಪ್ರಿಯ ನೈಸರ್ಗಿಕ ಪರ್ಯಾಯವಾಗಿದೆ. ಇದನ್ನೂ ಓದಿ: ಚರ್ಮದ ಆರೋಗ್ಯಕ್ಕಾಗಿ ಈ ಆಹಾರವನ್ನು ಸೇವಿಸಿ

ಸುಕ್ಕುಗಟ್ಟಿದ ಚರ್ಮಕ್ಕೆ ರಾಮಬಾಣ
ವಯಸ್ಸಾದ ಚಿಹ್ನೆಯ ಚರ್ಮ ಸುಕ್ಕುಗಟ್ಟುವಿಕೆ ವಿರುದ್ಧ ಹೋರಾಡಲು ಸೆಣಬಿನ ಎಣ್ಣೆಯು ತುಂಬಾ ಪ್ರಯೋಜನಕಾರಿ. ಇದು ಸುಕ್ಕುಗಳು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯೌವನ ಮತ್ತು ಕಾಂತಿಯುತ ಚರ್ಮಕ್ಕೆ ಸಹಕಾರಿಯಾಗಿದೆ.

ಚರ್ಮದ ಎಣ್ಣೆಯ ಅಂಶ ನಿಯಂತ್ರಿಸುತ್ತೆ
ಸೆಣಬಿನ ಬೀಜದ ಎಣ್ಣೆಯು ಚರ್ಮದ ಎಣ್ಣೆ ಅಂಶ ನಿಯಂತ್ರಿಸಲು ಪರಿಣಾಮಕಾರಿಯಾಗಿದೆ. ಇದರಿಂದ ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಗರ್ಭಿಣಿಯರಿಗೆ ಈ ಎಣ್ಣೆ ಉತ್ತಮ ಆಯ್ಕೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *