ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

Public TV
2 Min Read

ಬೇಸಿಗೆ ರಜೆ ಬಂದರೆ ಸೆಲೆಬ್ರೆಟಿಗಳು ದೇಶ ಸುತ್ತುವುದು ಕಾಮನ್. ಅದರಲ್ಲೂ ನಟಿ ಕಾರುಣ್ಯ ರಾಮ್ ವರ್ಷಕ್ಕೆ ಎರಡು ಬಾರಿಯಾದರೂ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ಬಾರಿ ಅವರು ಟರ್ಕಿ ದೇಶಕ್ಕೆ ಸಹೋದರಿಯ ಜತೆ ಪ್ರಯಾಣ ಬೆಳೆಸಿದ್ದಾರೆ. ಟರ್ಕಿಯಿಂದಲೇ ಪಬ್ಲಿಕ್ ಟವಿ ಡಿಜಿಟಲ್ ಜತೆ ಮಾತನಾಡಿರುವ ಅವರು ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೋದರೂ, ವಾರದ ಪ್ರವಾಸ ಆಗಿರುತ್ತದೆ. ಈ ಬಾರಿ ನಾವು ದೀರ್ಘ ಪ್ರವಾಸವನ್ನು ಟರ್ಕಿಯಲ್ಲಿ ಮಾಡುತ್ತಿದ್ದೇವೆ. ಈಗಾಗಲೇ ಟರ್ಕಿಯ ಏಳೆಂಟು ಸಿಟಿಯನ್ನು ನೋಡಿಕೊಂಡು, ಮತ್ತಷ್ಟು ಸ್ಥಳಗಳಿಗೆ ಗೊತ್ತು ಮಾಡಿದ್ದೇವೆ. ಟರ್ಕಿ ಶೇ.60ರಷ್ಟು ಪ್ರದೇಶವನ್ನು ನಾವು ನೋಡಿದ್ದೇವೆ. ಅದೊಂದು ಸುಂದರ ದೇಶ ಎಂದಿದ್ದಾರೆ ಕಾರುಣ್ಯ ರಾಮ್. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

ಸಹೋದರಿ ಜತೆ ಟರ್ಕಿಯ ಇಸ್ತಾನ್ ಬುಲ್, ಇಜ್ಮಿರ್, ಅಂತಲ್ಯಾ, ಅಂಕಾರಾ, ಬುರ್ಸಾ, ಕೈಸೆರಿ, ಕಪ್ಪಡೋಕಿಯಾ ಹೀಗೆ ನಾನಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಒಂದಕ್ಕೊಂದು ಸುಂದರವಾದ ಸಿಟಿಗಳಿವು ಎಂದು ಪ್ರವಾಸ ಕಥನವನ್ನು ಬಿಚ್ಚಿಡುತ್ತಾರೆ ಕಾರುಣ್ಯ. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

ಟರ್ಕಿಯ ಇತಿಹಾಸ ಭವ್ಯವಾಗಿದೆ. ಅತೀ ಸುಂದರ ದೇಶಗಳಲ್ಲಿ ಇದು ಒಂದು. ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ. ಊಟ, ಉಪಚಾರ ಎಲ್ಲವೂ ಅಚ್ಚುಕಟ್ಟು. ಒಂದು ರೀತಿಯಲ್ಲಿ ದಣಿವರಿಯದ ಸ್ಥಳಗಳು ಇಲ್ಲಿವೆ. ಪ್ರವಾಸಿಗರು ಯಾವುದೇ ರೀತಿಯಲ್ಲಿ ತೊಂದರೆ ಆಗದಂತಹ ವ್ಯವಸ್ಥೆಯನ್ನು ಅಲ್ಲಿನ ಸರಕಾರ ಮಾಡಿದೆ. ನಿರಾತಂಕವಾಗಿ ಟರ್ಕಿಯಲ್ಲಿ ಒಬ್ಬರೇ ಸುತ್ತಬಹುದು ಎನ್ನುವುದು ಕಾರುಣ್ಯ ಮಾತು. ಇದನ್ನೂ ಓದಿ:ಬಾಲಿವುಡ್‌ನಲ್ಲೂ `ಕೆಜಿಎಫ್ ಚಾಪ್ಟರ್ 2′ ಹವಾ: ಹಿಂದಿಯಲ್ಲೂ ನಂಬರ್ ಒನ್

ಸದ್ಯ ಕಾರುಣ್ಯ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನೀನಾಸಂ ಸತೀಶ್ ಜತೆ ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಜಯ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಹರಿಪ್ರಿಯಾ, ಅರುಣ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *