ಜೋಯಿಡಾದ ಪಟ್ಟೇಗಾಳಿಯಲ್ಲಿ ಹಾಡಹಗಲೇ ಮನೆಯೊಳಗೆ ನುಗ್ಗಿದ ಕರಡಿ

Public TV
1 Min Read

ಕಾರವಾರ: ಹಾಡಹಗಲೇ‌ ಮನೆಯೊಳಗೆ ಕರಡಿಯೊಂದು ನುಗ್ಗಿ ದಾಂಧಲೆ ಎಬ್ಬಿಸಿದ ಘಟನೆ ಜೋಯಿಡಾದ ಪಟ್ಟೇಗಾಳಿಯಲ್ಲಿ ನಡೆದಿದೆ.

ಪಟ್ಟೇಗಾಳಿಯ ನಿವಾಸಿ ಸಂತೋಷ ಸದಾನಂದ ಗಾವಡೆ ಎಂಬವರ ಮನೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಕರಡಿಯೊಂದು ಹಾಡಹಗಲೇ ಮನೆಯ ಒಳಗಡೆ ನುಗ್ಗಿದೆ. ಈ ಸಮಯದಲ್ಲಿ ಸಂತೋಷ ಸದಾನಂದ ಗಾವಡೆ ಹಾಗೂ ಅವರ ಮನೆಯವರೆಲ್ಲರೂ ಹೊಲಕ್ಕೆ ಹೋಗಿದ್ದರಿಂದ ಆಗಬಹುದಾದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಹೊಲದಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಕರಡಿ ದಾಂಧಲೆ ಮಾಡಿತ್ತು. ಕರಡಿ ಮನೆ ಒಳಗಡೆ ನುಗ್ಗಿರುವುದರ ಜೊತೆಗೆ ಮಲವಿಸರ್ಜನೆ ಮಾಡಿ ಮನೆಯ ಸಿಮೆಂಟ್ ಶೀಟನ್ನು ಒಡೆದಿತ್ತು. ಪದೇ ಪದೆ ಈ ಭಾಗದಲ್ಲಿ ಕರಡಿ ದಾಳಿ ನಡೆಸುತ್ತಿದ್ದು, ಜನ ಭಯದಲ್ಲಿ ದಿನ ಕಳೆಯುವಂತಾಗಿದೆ.

Share This Article