ಬೆಂಗಳೂರು: ನಗರದ ಪ್ರತಿಷ್ಠಿತ ಏರಿಯಾ ಗಾಯಿತ್ರಿನಗರ ವಾರ್ಡಿನಲ್ಲಿ ಕಳೆದ 15 -20 ದಿನಗಳಿಂದ ಕುಡಿಯೋ ನೀರಿನಲ್ಲಿ ಸ್ಯಾನಿಟರಿ ನೀರು ಮಿಕ್ಸ್ ಆಗಿದೆ. ಜನ ಇದನ್ನೇ ಬಳಸಿ ರೋಗಗಳಿಂದ ಬಳಲುತ್ತಿದ್ದಾರೆ.
ಹಲವು ಬಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಸ್ಥಳೀಯ ಶಾಸಕರಾದ ಅಶ್ವಥ್ ನಾರಾಯಣ್ ಅವರಿಗೆ ಕೇಳಿದ್ರೆ ಊರು ಅಂದ್ಮೇಲೆ ಇವೆಲ್ಲ ಇದ್ದದ್ದೇ ಅನ್ನೋ ಹಾರಿಕೆಯ ಉತ್ತರ ಎಂದು ಸ್ಥಳೀಯರು ಆರೋಪ ಮಾಡ್ತಾರೆ.
ಗಾಯಿತ್ರಿನಗರ ವಾರ್ಡಿನ ಕಾರ್ಪೋರೇಟರ್ ಗಿರೀಶ್ ಲಕ್ಕಣ್ಣರನ್ನ ಕೇಳಿದ್ರೆ ಕಳೆದ 15 ದಿನಗಳಿಂದ ಜನಕ್ಕೆ ಈ ನೀರು ಕುಡಿಯದಂತೆ ಅರಿವನ್ನ ಮೂಡಿಸಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಡಾಕ್ಟರ್ ಗಳನ್ನ ಕರೆಸಿ ನೀರಿನ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿ ನೀರನ್ನು ಕುಡಿಬಾರದು ಎಂದು ಹೇಳಲಾಗಿದೆ ಅಂತ ಹೇಳುತ್ತಿದ್ದಾರೆ.
ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ತುಂಬಾ ಬೇಜಾವ್ದಾರಿಯಾಗಿ ವರ್ತಿಸಿದ್ದಾರೆ. ಮಲ್ಲೇಶ್ವರಂನ ಜಲಮಂಡಳಿಯ ಎಇಇ ಸ್ನೇಹ ಸ್ಥಳಕ್ಕೇ ಬಂದಿಲ್ಲ, ಮೀಟಿಂಗ್‍ನಲ್ಲೂ ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಸ್ಥಳೀಯ ಕಾರ್ಪೋರೇಟರ್ ತಮ್ಮ ವಾದ ಹೇಳ್ತಾರೆ.
ಓಟ್ ಹಾಕೋದ್ ನಾವು, ಟ್ಯಾಕ್ಸ್ ಕಟ್ಟೋದು ನಾವು, ಮೂತ್ರ ಮಿಶ್ರಿತ ನೀರು ಕುಡಿಯೋದು ನಾವು. ಓಟ್ ಪಡೆದ ಜನಪ್ರತಿನಿದಿಗಳು ಅಧಿಕಾರಿಗಳ ಮೇಲೆ ಹೇಳ್ತಾರೆ. ಜನರು ಜನಪ್ರತಿನಿಧಿಗಳ ಮೇಲೆ ಆರೋಪ ಮಾಡ್ತಾರೆ. ಇವರಿಬ್ಬರ ನಡುವೆ ಬಲಿಯಾಗುತ್ತಿರೋದು ಮಾತ್ರ ಸಮಾನ್ಯ ಜನ. ಇನ್ನಾದ್ರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನಕ್ಕೆ ಮೂಲಭೂತ ಸೌಕರ್ಯಗಳನ್ನ ಒದಗಿಸಿದ್ರೆ ಸಾಕು ಎಂಬುದೇ ಜನಸಾಮಾನ್ಯರ ಆಶಯವಾಗಿದೆ.