ಬೆಂಗಳೂರು: ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ (Bengaluru Business Corridor) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಟೆಂಡರ್ ಆಹ್ವಾನಿಸಿದೆ.
ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಂಡ ಹಿನ್ನೆಲೆ ಬ್ಯುಸಿನೆಸ್ ಕಾರಿಡಾರ್ ಯೋಜನೆಯ 19.8 ಕಿ.ಮೀ ಉದ್ದದ ಮೊದಲನೇ ಹಂತಕ್ಕೆ ಬಿಡಿಎ ಟೆಂಡರ್ ಆಹ್ವಾನಿಸಿದೆ. ಇದರಡಿಯಲ್ಲಿ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆವರೆಗಿನ ಕಾಮಗಾರಿ ನಡೆಯಲಿದ್ದು, ಇದರ ಮೊತ್ತ ಒಟ್ಟು 3,348 ಕೋಟಿ ರೂ. ಆಗಿದೆ. ಟೆಂಡರ್ ಅಂತಿಮಗೊಂಡ ನಂತರ ಕಾಮಗಾರಿ ಪೂರ್ಣಗೊಳಿಸಲು 30 ತಿಂಗಳ ಸಮಯ ನೀಡಲಾಗಿದೆ. ಇದನ್ನೂ ಓದಿ: 2027 ರ ಜನಗಣತಿ ಪ್ರಯುಕ್ತ ರಾಜ್ಯದಲ್ಲಿ ಏ.1 ರಿಂದ ಮನೆ ಗಣತಿ
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯ ಕಾಮಾಗಾರಿಯನ್ನು ಒಟ್ಟು ಮೂರು ಹಂತದಲ್ಲಿ ವಿಂಗಡಿಸಲಾಗಿದೆ. ಈ ಯೋಜನೆ ಸುಮಾರು 7,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಸದ್ಯ ಮೊದಲ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಯಾವುದೇ ಸಿಗ್ನಲ್‌ಗಳು ಇಲ್ಲದೇ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ನಲ್ಲಿ ಸಂಚಾರ ಮಾಡಬಹುದು. ಈ ಯೋಜನೆಯು ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆಗಳನ್ನು ಸಂಪರ್ಕಿಸುತ್ತದೆ.ಇದನ್ನೂ ಓದಿ: ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಹಾಕದ್ದಕ್ಕೆ ಆಕ್ರೋಶ – ಚಿಕ್ಕಬಳ್ಳಾಪುರದಲ್ಲಿ ಬಂಕ್ ಕ್ಲೋಸ್ ಮಾಡಿಸಿದ ರೈತರು
ಮೂರು ಹಂತದ ಕಾಮಗಾರಿಗಳು ಎಲ್ಲಿಂದ ಎಲ್ಲಿಗೆ?
ಪ್ಯಾಕೇಜ್ 1: ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗೆ (19.37 ಕಿ.ಮೀ)
ಪ್ಯಾಕೇಜ್ 2: ಬಳ್ಳಾರಿ ರಸ್ತೆಯಿಂದ ಓಲ್ಡ್ ಮದ್ರಾಸ್ ರಸ್ತೆಯವರೆಗೆ (18 ಕಿ.ಮೀ)
ಪ್ಯಾಕೇಜ್ 3: ಓಲ್ಡ್ ಮದ್ರಾಸ್ ರಸ್ತೆಯಿಂದ ಹೊಸೂರು ರಸ್ತೆಯವರೆಗೆ (27.75 ಕಿ.ಮೀ)

