World Cup 2023: ಕ್ರಿಕೆಟ್‌ ಅಭಿಮಾನಿಗಳಿಗೆ ಬಂಪರ್‌ ಆಫರ್‌ – ಇನ್ನೂ 4 ಲಕ್ಷ ಟಿಕೆಟ್‌ ಮಾರಾಟಕ್ಕೆ BCCI ನಿರ್ಧಾರ

Public TV
3 Min Read

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗೆ ಕೆಲವೇ ದಿನಗಳು ಬಾಕಿಯಿದ್ದು, ಪಂದ್ಯಗಳಿಗೆ ಟಿಕೆಟ್ ಸಿಗುತ್ತಿಲ್ಲ ಎಂದು ಅಲವತ್ತುಕೊಂಡು, ಸಾಮಾಜಿಕ ತಾಣಗಳಲ್ಲಿ (Social Media) ಹಿಡಿಶಾಪ ಹಾಕುತ್ತಿದ್ದ ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಬಿಸಿಸಿಐ (BCCI) ಮಣಿದಿದೆ.

ಬಿಸಿಸಿಐ ಕ್ರೀಡಾಂಗಣಗಳ ಕೌಂಟರ್‌ಗಳಲ್ಲಿ ಮಾರಾಟ ಮಾಡಲು ಇರಿಸಿದ್ದ ಟಿಕೆಟ್‌ಗಳ (CWC Tickets) ಪೈಕಿ ಇನ್ನೂ 4 ಲಕ್ಷ ಹೆಚ್ಚುವರಿ ಟಿಕೆಟ್‌ಗಳನ್ನ ಆನ್ ಲೈನ್‌ನಲ್ಲೇ ಅಭಿಮಾನಿಗಳಿಗೆ ಸಿಗುವಂತೆ ಮಾಡಲು ನಿರ್ಧರಿಸಿದೆ. ಶುಕ್ರವಾರ (ಸೆಪ್ಟೆಂಬರ್‌ 8) ರಾತ್ರಿ 8 ಗಂಟೆಯ ನಂತರ ಕ್ರಿಕೆಟ್‌ ಅಭಿಮಾನಿಗಳು https://tickets.cricketworldcup.com ವೆಬ್‌ಸೈಟ್‌ಗೆ ಭೇಟಿ ನೀಡಿ ಖರೀದಿಸಬಹುದಾಗಿದೆ ಎಂದು ಬಿಸಿಸಿಐ ಪ್ರಕಟಣೆ ಮೂಲಕ ತಿಳಿಸಿದೆ. ಇದನ್ನೂ ಓದಿ: World Cup 2023: ವಿಶ್ವಕಪ್‌ ಟೂರ್ನಿಗೆ ಟೀಂ ಇಂಡಿಯಾ ಬಲಿಷ್ಠ ತಂಡ ಪ್ರಕಟ – ಕನ್ನಡಿಗ ಕೆ.ಎಲ್‌ ರಾಹುಲ್‌ಗೆ ಸ್ಥಾನ

ಟೀಂ ಇಂಡಿಯಾ ಸೇರಿದಂತೆ ಮಹತ್ವದ ಪಂದ್ಯಗಳ ಟಿಕೆಟ್ ಮಾರಾಟ ಮಾಡುವುದಾಗಿ ಬಿಸಿಸಿಐ ತಿಳಿಸಿದೆ. ಯಾವ್ಯಾವ ಪಂದ್ಯಗಳ ಟಿಕೆಟ್‌ಗಳು ಖರೀದಿಗೆ ಲಭ್ಯವಿರಲಿವೆ ಎನ್ನುವ ಮಾಹಿತಿಯನ್ನ ಶುಕ್ರವಾರ ಸ್ಪಷ್ಟಪಡಿಸುವುದಾಗಿ ತಿಳಿಸಿದೆ. ಈ ಹಂತದಲ್ಲಿ ಲಭ್ಯವಿರುವ ಎಲ್ಲಾ ಟಿಕೆಟ್‌ಗಳು ಮಾರಾಟವಾದ ಬಳಿಕ ಅಭಿಮಾನಿಗಳಿಂದ ಬೇಡಿಕೆ ನೋಡಿಕೊಂಡು ಮತ್ತೊಂದು ಹಂತದಲ್ಲಿ ಆನ್‌ಲೈನ್ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡುವುದಾಗಿಯೂ ಬಿಸಿಸಿಐ ಭರವಸೆ ನೀಡಿದೆ. ಇದರಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ICC WorldCup 2023: ಭಾರತ-ಪಾಕಿಸ್ತಾನ ಮ್ಯಾಚ್‌ ದುಬಾರಿ – ಒಂದು ಟಿಕೆಟ್‌ 56 ಲಕ್ಷ ರೂ.ವರೆಗೆ ಮಾರಾಟ

ಅಭಿಮಾನಿಗಳು ಸಿಟ್ಟಾಗಿದ್ದೇಕೆ?
ಬಿಸಿಸಿಐ ಹಾಗೂ ಐಸಿಸಿ, ಬಹುತೇಕ ಪಂದ್ಯಗಳ ಕೆಲವೇ ಕೆಲವು ಟಿಕೆಟ್‌ಗಳನ್ನ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯಗೊಳಿಸಿದ್ದವು. ಉದಾಹರಣೆಗೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಅಂದಾಜು 10,000 ಟಿಕೆಟ್‌ಗಳಷ್ಟೇ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಕ್ರೀಡಾಂಗಣ 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿದೆ. ಹೀಗಾಗಿ, ಅಭಿಮಾನಿಗಳು ಬಿಸಿಸಿಐ ಯನ್ನ ಸಾಮಾಜಿಕ ತಾಣಗಳಲ್ಲಿ ಕಟುವಾಗಿ ಟೀಕಿಸಿದ್ದರು, ಈವರೆಗೆ ಎಷ್ಟು ಟಿಕೆಟ್‌ಗಳು ಮಾರಾಟವಾಗಿದೆ ಎಂಬ ಮಾಹಿತಿ ಬಹಿರಂಗಪಡಿಸಿವಂತೆ ಒತ್ತಾಯಿಸಿದ್ದರು. ವೆಂಕಟೇಶ್ ಪ್ರಸಾದ್ ಸೇರಿ ಇನ್ನೂ ಹಲವು ಮಾಜಿ ಕ್ರಿಕೆಟಿಗರು ಸಹ ಅಭಿಮಾನಿಗಳಿಗೆ ಅನ್ಯಾಯ ವಾಗದಂತೆ ಬಿಸಿಸಿಐ ನೋಡಿಕೊಳ್ಳಬೇಕು ಎಂದು ಟ್ವಿಟ್ ಮಾಡಿದ್ದರು. ಇದರಿಂದ ಅಭಿಮಾನಿಗಳ ಒತ್ತಡಕ್ಕೆ ಮಣಿದ ಬಿಸಿಸಿಐ ಹೆಚ್ಚುವರಿ ಟಿಕೆಟ್‌ ಮಾರಾಟ ಮಾಡೋದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರ
ಏಕದಿನ ವಿಶ್ವಕಪ್‌ ಟೂರ್ನಿಗೆ ಬ್ಲಾಕ್‌ ಮಾರ್ಕೆಟ್‌ನಲ್ಲಿ ಮಾರಾಟ ಮಾಡಲಾಗುತ್ತಿರುವ ಟಿಕೆಟ್‌ ದರಗಳು ಲಕ್ಷ ಲಕ್ಷ ದಾಟಿವೆ. ಆನ್‌ಲೈನ್ ಸ್ಫೋರ್ಟ್ಸ್‌ ಟಿಕೆಟ್ ಪ್ಲಾಟ್‌ಫಾರ್ಮ್ ವಿಯಾಗೊದಲ್ಲಿ ಒಂದು ಟಿಕೆಟ್‌ 56 ಲಕ್ಷ ರೂ.ವರೆಗೂ ಮಾರಾಟವಾಗಿದೆ.

ಟಿಕೆಟ್‌ ಖರೀದಿ ಭರಾಟೆ ಜೋರಾಗಿದ್ದು 1.5 ಲಕ್ಷ ರೂ.ನಿಂದ ಆರಂಭಗೊಂಡು 15 ಲಕ್ಷ ರೂ.ಗಳಿಗೆ ಮಾರಾಟವಾಗ್ತಿದೆ. ಅಲ್ಲದೇ ಟೀಂ ಇಂಡಿಯಾದ ಎಲ್ಲ ಪಂದ್ಯಗಳಿಗೂ ಟಿಕೆಟ್‌ ಬೇಡಿಕೆ ದರ ಹೆಚ್ಚಾಗಿದೆ. ಚೆನ್ನೈನ ಚಿದರಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಟಿಕೆಟ್‌ಗಳು 2.85 ಲಕ್ಷ ರೂ.ವರೆಗೆ, ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರೋ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದ ಟಿಕೆಟ್‌ 2.35 ಲಕ್ಷ ರೂ.ವರೆಗೆ ಹಾಗೂ ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಪಂದ್ಯದ ಟಿಕೆಟ್‌ 2.35 ಲಕ್ಷ ರೂ.ವರೆಗೆ ಮಾರಾಟವಾಗ್ತಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್