ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ – ಎಲ್ಲಿ, ಯಾವಾಗ?

3 Min Read

ನವದೆಹಲಿ: ಐಪಿಎಲ್ 2026ರ ಆವೃತ್ತಿ ಆರಂಭದಿಂದ ಮೊದಲ ಮೂರು ವಾರಾಂತ್ಯಗಳಲ್ಲಿ ನಡೆಯುವ ಫ್ಯಾನ್ ಪಾರ್ಕ್ (Fan Park) ಈವೆಂಟ್‌ನ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ತುಮಕೂರು, ಮೈಸೂರು ಸೇರಿ ದೇಶದ 15 ನಗರಗಳಲ್ಲಿ ಫ್ಯಾನ್ ಪಾರ್ಕ್ ನಡೆಯಲಿದೆ.

ಕ್ರೀಡಾಂಗಣದ ಹೊರತಾಗಿ ಐಪಿಎಲ್ ಅನುಭವ ನೀಡುವ ಉದ್ದೇಶದೊಂದಿಗೆ ಈ ಫ್ಯಾನ್ ಪಾರ್ಕ್ ನಡೆಯಲಿದ್ದು, ಲೈವ್ ಗೇಮಿಂಗ್, ಆಹಾರ ಮಳಿಗೆ, ಮಕ್ಕಳ ಆಟೋಟದ ಕೇಂದ್ರಗಳು ಇರಲಿದೆ. ಮಾ.28ರಿಂದ ಮೂರು ವಾರಾಂತ್ಯಗಳಲ್ಲಿ 11 ರಾಜ್ಯಗಳ 15 ನಗರಗಳಲ್ಲಿ ಈ ಫ್ಯಾನ್ ಪಾರ್ಕ್ ಈವೆಂಟ್ ನಡೆಯಲಿದ್ದು, ಬಿಸಿಸಿಐ ಆಯೋಜಿಸುತ್ತಿದೆ. ಇದನ್ನೂ ಓದಿ: ಐಪಿಎಲ್ ಟಿಕೆಟ್ ಮಾರಾಟಕ್ಕೆ ಆರ್‌ಸಿಬಿ ಸಜ್ಜು – ಇನ್ನೆರೆಡು ದಿನದಲ್ಲಿ ಮಾರಾಟ ಪ್ರಕ್ರಿಯೆ ಶುರು

ಏನೆಲ್ಲಾ ಇರಲಿದೆ?
ಫ್ಯಾನ್ ಪಾರ್ಕ್‌ನಲ್ಲಿ ವರ್ಚುವಲ್ ಕ್ರಿಕೆಟ್ ಪಂದ್ಯಗಳು, ಬೌಲಿಂಗ್ ನೆಟ್, ಸಂಗೀತ, ಮನರಂಜನೆ, ಆಹಾರ ಮಳಿಗೆ, ಮಕ್ಕಳಿಗೆ ಆಟೋಟದ ಕೇಂದ್ರಗಳು, ಫೇಸ್ ಪೇಂಟಿಂಗ್, 360-ಡಿಗ್ರಿ ಫೋಟೋ ಬೂತ್ ಸೇರಿದಂತೆ ವಿವಿಧ ಚಟುವಟಿಕೆಗಳು ಇರಲಿವೆ. 2015ರಿಂದ ಫ್ಯಾನ್ ಪಾರ್ಕ್ ನಡೆಯುತ್ತಿದ್ದು, ವಿವಿಧ ನಗರಗಳಲ್ಲಿನ ಅಭಿಮಾನಿಗಳು ಒಟ್ಟಿಗೆ ಸೇರಲು ಅನುವು ಮಾಡಿಕೊಡುತ್ತದೆ.

ಮೊದಲ ಮೂರು ವಾರಾಂತ್ಯಗಳೆಂದರೆ ಇದೇ ಮಾರ್ಚ್ 28 ಮತ್ತು 29, ಏಪ್ರಿಲ್ 4 ಮತ್ತು 5, ಏಪ್ರಿಲ್ 11 ಮತ್ತು 12 ರಂದು ಫ್ಯಾನ್ ಪಾರ್ಕ್ ನಡೆಯಲಿದೆ. ಮೂರು ವಾರಾಂತ್ಯಗಳಲ್ಲಿ ಐಪಿಎಲ್‌ ಪಂದ್ಯ ನಡೆಯಲಿದ್ದು, ಮಾ.28ರಂದು RCB ಹಾಗೂ SRH ಮುಖಾಮುಖಿಯಾಗಲಿವೆ. ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ – IPL ಟಿಕೆಟ್‌ ಇದ್ರೆ ಮೆಟ್ರೋ ಪ್ರಯಾಣ ಉಚಿತ

ಯಾವಾಗ ಮತ್ತು ಎಲ್ಲಿ ನಡೆಯಲಿದೆ?
ಮಾರ್ಚ್ 28 & 29ರಂದು:

  • ಹರಿಯಾಣ               – ರೋಹ್ಟಕ್‌ನಲ್ಲಿರುವ ಛೋಟು ರಾಮ್ ಪಾಲಿಟೆಕ್ನಿಕ್ ಮೈದಾನ
  • ಮಧ್ಯಪ್ರದೇಶ           – ಭೋಪಾಲ್‌ನಲ್ಲಿರುವ ಸರ್ಕಾರಿ ಎಂವಿಎಂ ಕಾಲೇಜು ಮೈದಾನ
  • ಮಹಾರಾಷ್ಟ್ರ            – ನಾಗ್ಪುರದಲ್ಲಿರುವ ಮೆಕೋಸಾಬಾಗ್ ಮೆಥೋಡಿಸ್ಟ್ ಹೈಸ್ಕೂಲ್ ಮೈದಾನ
  • ಕರ್ನಾಟಕ               – ತುಮಕೂರಿನಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ
  • ಪಶ್ಚಿಮ ಬಂಗಾಳ      – ಕೃಷ್ಣನಗರದಲ್ಲಿರುವ ಡಿಎಲ್ ರಾಯ್ ಕ್ರೀಡಾಂಗಣ

ಏಪ್ರಿಲ್ 4 & 5ರಂದು:

  • ಉತ್ತರ ಪ್ರದೇಶ    – ಮಥುರಾದಲ್ಲಿರುವ ಅಮರನಾಥ ವಿದ್ಯಾ ಆಶ್ರಮ
  • ರಾಜಸ್ಥಾನ          – ಜೋಧಪುರದಲ್ಲಿರುವ ಬರ್ಕತುಲ್ಲಾ ಖಾನ್ ಕ್ರೀಡಾಂಗಣ
  • ತೆಲಂಗಾಣ         – ನಿಜಾಮಾಬಾದ್‌ನಲ್ಲಿರುವ ಮಹಿಳಾ ಶೈಕ್ಷಣಿಕ ಸೊಸೈಟಿ ಮೈದಾನ
  • ಕರ್ನಾಟಕ          – ಮೈಸೂರಿನಲ್ಲಿರುವ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು
  • ಒಡಿಶಾ             – ಭುವನೇಶ್ವರ್‌ದಲ್ಲಿರುವ ಕೆಐಟಿಎಸ್ ವಿಶ್ವವಿದ್ಯಾಲಯ ಕ್ರೀಡಾಂಗಣ

ಏಪ್ರಿಲ್ 11 ಮತ್ತು 12ರಂದು:

  • ಉತ್ತರ ಪ್ರದೇಶ  – ಮೀರತ್‌ನಲ್ಲಿರುವ ಭೈನಸಾಲಿ ಮೈದಾನ
  • ಗುಜರಾತ್‌         – ನಾಡಿಯಾಡ್‌ನಲ್ಲಿರುವ ರಾಧೆ ಫಾರ್ಮ್
  • ಮಹಾರಾಷ್ಟ್ರ      –  ರತ್ನಗಿರಿಯಲ್ಲಿರುವ ಸ್ವರ್ಗೀಯ ಪ್ರಮೋದ್ ಮಹಾಜನ್ ಕ್ರೀಡಾ ಸಂಕುಲ
  • ತಮಿಳುನಾಡು   –  ಕೊಯಮತ್ತೂರಿನಲ್ಲಿರುನ ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ & ಸೈನ್ಸ್
  • ಒಡಿಶಾ            – ರೂರ್ಕೆಲಾನಲ್ಲಿರುವ ಸೆಕ್ಟರ್ 17 ಗ್ರೌಂಡ್

Share This Article