ಫೋನ್ ಬಳಸಿ ಸಿಕ್ಕಿಬಿದ್ದ ಆರ್‌ಆರ್ ವ್ಯವಸ್ಥಾಪಕನಿಗೆ 1 ಲಕ್ಷ ದಂಡ – ಬಿಸಿಸಿಐ ವಾರ್ನಿಂಗ್

2 Min Read

ನವದೆಹಲಿ: ಪಂದ್ಯದ ವೇಳೆ ಮೊಬೈಲ್ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಆರ್‌ಆರ್ (RR) ಫ್ರಾಂಚೈಸಿ ವ್ಯವಸ್ಥಾಪಕ ರೋಮಿ ಭಿಂದರ್‌ಗೆ (Romi Bhinder) ಬಿಸಿಸಿಐ (BCCI) 1 ಲಕ್ಷ ದಂಡ ವಿಧಿಸಿ, ವಾರ್ನಿಂಗ್ ನೀಡಿದೆ.

- Advertisement -

ಏ.10ರಂದು ಗುವಾಹಟಿಯಲ್ಲಿ (Guwahati) ಆರ್‌ಆರ್ (RR) ಹಾಗೂ ಆರ್‌ಸಿಬಿ (RCB) ನಡುವೆ ಪಂದ್ಯ ನಡೆದಿತ್ತು. ಈ ವೇಳೆ ರೋಮಿ ಮೊಬೈಲ್ ಬಳಸುತ್ತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಬಿಸಿಸಿಐ ವಿರೋಧಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿತ್ತು. ಇದನ್ನೂ ಓದಿ: ಫೋನ್‌ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ರೋಮಿ – RR ವ್ಯವಸ್ಥಾಪಕನಿಗೆ ಬಿಸಿಸಿಐ ನೋಟಿಸ್‌; ಕಾಡ್ತಿದೆಯಾ ಬ್ಯಾನ್‌ ಭೀತಿ?

- Advertisement -

- Advertisement -

ಈ ಘಟನೆ ಬಗ್ಗೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ತನಿಖೆ ನಡೆಸಿತ್ತು. ಈ ವೇಳೆ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಇರುವ ಪ್ರದೇಶದಲ್ಲಿ ಮೊಬೈಲ್ ಬಳಸಬಾರದು ಎನ್ನುವ ನಿಯಮವನ್ನು ಬಿಂಧರ್ ಮುರಿದಿರುವುದು ಕಂಡುಬಂದಿದೆ. ಹೀಗಾಗಿ ಅವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಆದರೆ ಭಿಂದರ್ ಮೊಬೈಲ್ ಬಳಸುವಾಗ ದಿಟ್ಟಿಸುತ್ತಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಅಪ್ರಾಪ್ತರಾಗಿರುವ ಕಾರಣಕ್ಕೆ ಬಿಸಿಸಿಐ ಅವರಿಗೆ ಶಿಕ್ಷೆ ನೀಡಿಲ್ಲ.

- Advertisement -

ಏನಾಗಿತ್ತು?
ಏಪ್ರಿಲ್ 10 ರಂದು ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಜಯ ಸಾಧಿಸಿತ್ತು. ಆದ್ರೆ ಪಂದ್ಯದ ವೇಳೆ ತನ್ನ ಬ್ಯಾಟಿಂಗ್ ಮುಗಿಸಿದ್ದ ವೈಭವ್ ಸೂರ್ಯವಂಶಿ ಜೊತೆಗೆ ಡಗೌಟ್‌ನಲ್ಲಿ ಕುಳಿತಿದ್ದಾಗ ಭಿಂದರ್ ತನ್ನ ಫೋನ್ ಬಳಸುತ್ತಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮೊಬೈಲ್ ಬಳಸಲು ಅನುಮತಿ ಕೊಟ್ಟಿದ್ಯಾರು ಅಂತ ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಐಪಿಎಲ್ ಮಂಡಳಿಯ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೂಡ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕ್ರಮಕ್ಕೆ ಮುಂದಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ, ಭಿಂದರ್ ಆರೋಗ್ಯೆ ಸಮಸ್ಯೆಗೆ ಸಂಬಂಧಿಸಿದ ವಿಚಾರಕ್ಕೆ ಫೋನ್ ಬಳಸಿರಬಹುದು ಎಂದು ತಿಳಿದುಬಂದಿದೆ. ಏಕೆಂದ್ರೆ ಫ್ರಾಂಚೈಸಿಯ ವ್ಯವಸ್ಥಾಪಕರು ಈ ಹಿಂದೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅದರಿಂದ 10 ಕೆಜಿಗಿಂತ ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದಾಗಿ ಅವರನ್ನು ದೀರ್ಘಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ದರಿಂದ ವೈದ್ಯಕೀಯ ಕಾರಣಗಳಿಗಾಗಿ ಭಿಂದರ್‌ಗೆ ಡಗೌಟ್‌ಗೆ ಫೋನ್ ಕೊಂಡೊಯ್ಯಲು ಅನುಮತಿಸಲಾಗುತ್ತಿತ್ತು. ಆದ್ರೆ ಅಲ್ಲಿ ಕುಳಿತಿರುವಾಗ ಫೋನ್ ಬಳಕೆಗೆ ವಿಶೇಷ ಅನುಮತಿ ಇರಲಿಲ್ಲ ಎಂದು ಹೇಳಲಾಗ್ತಿದೆ. ಇನ್ನೂ ಭಿಂದರ್, ಬಾಲಕ ವೈಭವ್ ಸೂರ್ಯವಂಶಿ ಪಕ್ಕದಲ್ಲಿ ಕುಳಿತಾಗ ಫೋನ್ ತೆಗೆದ್ದು, ಮತ್ತೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಪ್ರಶ್ನೆಗಳು ಕೇಳುವಂತೆ ಮಾಡಿದೆ.

ಮ್ಯಾಚ್ ಫಿಕ್ಸಿಂಗ್‌ನಿಂದ 2 ವರ್ಷ ಬ್ಯಾನ್ ಆಗಿದ್ದ ಆರ್‌ಆರ್
ರಾಜಸ್ಥಾನ್ ರಾಯಲ್ಸ್ (ಖಖ) ತಂಡವು 2013ರ ಐಪಿಎಲ್ ಸ್ಪಾಟ್-ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಕಾರಣ 2016 ಮತ್ತು 2017ರ ಅವಧಿಗೆ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿತ್ತು.

ಐಪಿಎಲ್ ನಿಯಮ ಹೇಳೋದೇನು?
ಐಪಿಎಲ್ ಮಾರ್ಗಸೂಚಿಗಳ ಪ್ರಕಾರ, ಭ್ರಷ್ಟಾಚಾರ ತಡೆಗಟ್ಟಲು ಡಗೌಟ್ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರು ಮತ್ತು ತಂಡದ ಸಿಬ್ಬಂದಿಗೆ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಇದನ್ನೂ ಓದಿ: RCB ವಿರುದ್ಧ ಗೆದ್ದ RRಗೆ ಬಿಗ್ ಶಾಕ್ – ತಂಡದ ಮೇಲೆ ಶಿಸ್ತುಕ್ರಮದ ತೂಗುಗತ್ತಿ

Share This Article