ಕಾಂಗ್ರೆಸ್‌ನವರ ಹೃದಯ ಬಗೆದ್ರೆ ರಾಹುಲ್ ಗಾಂಧಿ, ಪಾಕ್ ಪ್ರಧಾನಿ ಬಿರಿಯಾನಿ ತಿನ್ನೋದು ಕಾಣುತ್ತೆ: ಬಿ.ಸಿ ಪಾಟೀಲ್ ವ್ಯಂಗ್ಯ

By
1 Min Read

– ಸರ್ಕಾರ ಜನರ ಮೇಲೆ ಲೀಗಲ್ ಡಕಾಯಿತಿ ಮಾಡ್ತಿದೆ

ಹಾವೇರಿ: ಕಾಂಗ್ರೆಸ್‌ನವರ ಹೃದಯ ಬಗೆದರೆ ರಾಹುಲ್ ಗಾಂಧಿ, ಪಾಕಿಸ್ತಾನದ ಪ್ರಧಾನಿ ಬಿರಿಯಾನಿ ತಿನ್ನೋದು ಕಾಣುತ್ತದೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್(B C Patil) ವ್ಯಂಗ್ಯ ಮಾಡಿದರು.

ಹಾವೇರಿಯ(Haveri) ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆಂಜನೇಯನ ಹೃದಯ ಬಗೆದು ತೋರಿಸಿದಾಗ ರಾಮ ಸೀತೆ ಕಂಡಿದ್ದರೋ, ಹಾಗೆ ಕಾಂಗ್ರೆಸ್‌ನವರ(Congress) ಹೃದಯ ಬಗೆದರೆ ಪಾಕಿಸ್ತಾನ(Pakistan) ಕಾಣುತ್ತೆ. ನಿನ್ನೆನೇ ಇದು ಸಾಬೀತಾಗಿದೆ. ಖರ್ಗೆಯವರು ನಮ್ಮ ಪಾಕಿಸ್ತಾನ ಎಂದಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕ್ಯಾಬ್‌ ಸೇವೆಗೆ ಮುನ್ನ ಟಿಪ್ಸ್‌ ಪಡೆದರೆ ಕಟ್ಟುನಿಟ್ಟಿನ ಕ್ರಮ: ಪ್ರಹ್ಲಾದ್‌ ಜೋಶಿ ಎಚ್ಚರಿಕೆ

ನಮ್ಮ ಆಡಳಿತಾವಧಿಯಲ್ಲಿ ಜನನ ಪ್ರಮಾಣ ಪತ್ರ ಕೊಡೋಕೆ 5 ರೂ. ಇತ್ತು. ಈಗ ಇವರು 50 ರೂ. ಮಾಡಿದ್ದಾರೆ. ಹುಟ್ಟಿದವರಿಂದ ಹಿಡಿದು ಸಾಯೋರವರೆಗೂ ವಸೂಲಿ ಮಾಡ್ತಾ ಇದ್ದಾರೆ. ಜನರ ಮೇಲೆ ಲೀಗಲ್ ಡಕಾಯಿತಿ ಮಾಡ್ತಾ ಇದ್ದಾರೆ. ರೈತರ ಮಕ್ಕಳ ವಿದ್ಯಾನಿಧಿ ಬಂದ್ ಮಾಡಿದರು. ರೈತರ ಮಕ್ಕಳ ಹೊಟ್ಟೆ ಮೇಲೆ ಹೊಡೆದಿದ್ದು ಇವರ ಮೊದಲ ಸಾಧನೆ ಎಂದು ಟೀಕಿಸಿದರು. ಇದನ್ನೂ ಓದಿ: ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟೀಸರ್ ಔಟ್- ಸಾಥ್ ಕೊಟ್ಟ ನಟ ಶರಣ್

ಸರ್ಕಾರದ ಸಮಾವೇಶದಲ್ಲಿ ರಾಹುಲ್ ಗಾಂಧಿ(Rahul Gandhi) ಮತ್ತು ಖರ್ಗೆ ಫೋಟೋ ಹಾಕಿದ್ದಾರೆ. ಖರ್ಗೆ, ರಾಹುಲ್ ಗಾಂಧಿ ಫೋಟೋ ಯಾಕೆ ಹಾಕಿದ್ದು? ಇದು ಶಿಷ್ಟಾಚಾರದ ಉಲ್ಲಂಘನೆ ಆಗುತ್ತದೆ. ಜನರ ತೆರಿಗೆ ಹಣದಲ್ಲಿ ಸರ್ಕಾರದ ಸಮಾವೇಶ ಮಾಡಿದಾಗ ರಾಜಕೀಯ ನಾಯಕರ ಫೋಟೋ ಯಾಕೆ ಹಾಕಿದ್ರು ಎಂದು ವಾಗ್ದಾಳಿ ನಡೆಸಿದರು.

Share This Article