– ಹಳಸಿದ ವರದಿ ಹಿಡಿದುಕೊಂಡು ಬಂದು ಜಾತಿಗಣತಿ ಎನ್ನುತ್ತಾರೆ; ವಾಗ್ದಾಳಿ
– ಇದ್ದಷ್ಟು ದಿನ ದೋಚಿಕೊಂಡು ಹೋಗುವ ಮನಸ್ಥಿತಿ ಈ ಸರ್ಕಾರದ್ದು
ಹಾವೇರಿ: 136 ಸೀಟು ಬಂದ ಮೇಲೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಕಾಮಾಲೆ ಕಣ್ಣು ಹಳದಿ ಎನ್ನುವಂತಾಗಿದೆ. ಈಗ ಅವರಿಗೆ ಏನೂ ಕಾಣುವುದಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ (B C Patil) ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ 65 ಲಕ್ಷ ಲಿಂಗಾಯತರು ಇರಲು ಸಾಧ್ಯನಾ? ಕೇವಲ 67 ಸಾವಿರ ಸಾದರು ಇದ್ದಾರೆ ಎಂದು ಹೇಳುತ್ತಾರೆ. ಹಿರೇಕೆರೂರು ತಾಲೂಕು ಒಂದರಲ್ಲೇ 50 ಸಾವಿರ ಜನ ಸಾದರಿದ್ದಾರೆ. ಹೀಗಾಗಿ ಹಳಸಿದ ವರದಿ ಹಿಡಿದುಕೊಂಡು ಬಂದು ಜಾತಿಗಣತಿ ಎನ್ನುತ್ತಾರೆ. ಸಿದ್ದರಾಮಯ್ಯನವರ ಕುರ್ಚಿ ಅಲುಗಾಡಿದಾಗೊಮ್ಮೆ ಜಾತಿಗಣತಿ ಎನ್ನುತ್ತಾರೆ. ಕಾಂಗ್ರೆಸ್ ಶಾಸಕರಿಗೆ ಸಮಪಾಲು, ಸಮಬಾಳು ಎನ್ನುವುದು ಬಂದಿದ್ದನ್ನು ಹಂಚಿಕೊಳ್ಳುವುದರಲ್ಲಿ ಮಾತ್ರ ಇರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಿನ್ ಜೊತೆ ಮಲ್ಕೋಬೇಕು ಬಾ – ಟೀಂ ಇಂಡಿಯಾ ಮಾಜಿ ಆಟಗಾರ ಬಂಗಾರ್ ಪುತ್ರಿಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ
ಬಿಜೆಪಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಹೇಳಿದೊಂದು, ಮಾಡುವುದೊಂದು ಆಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಚನಗಳಿಲ್ಲ ಎಂಬಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲದರ ಬೆಲೆಗಳನ್ನು ಏರಿಸಿದ್ದಾರೆ. ಕಾಂಗ್ರೆಸ್ ಯಾವಾಗ ತೊಲಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಹೆಣ್ಮಕ್ಕಳು ಮಾಂಗಲ್ಯ ಉಳಿಸಿ ಎಂದು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಗನನ್ನ ಸಿಎಂ ಮಾಡೋಕೆ ಖರ್ಗೆಯವರೇ ಸರ್ಕಾರ ಬೀಳಿಸುತ್ತಾರೆ: ಶ್ರೀರಾಮುಲು
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ (Corruption) ಮುಳುಗಿದ್ದು, ರಾಜ್ಯ, ಜಿಲ್ಲೆಯಲ್ಲಿ ಸಂಪೂರ್ಣ ಆಡಳಿತ ಭ್ರಷ್ಟವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಒಬ್ಬ ರೈತ ತನ್ನ ಜಮೀನಿಗೆ ಮಣ್ಣು ಹಾಕಿಸಿಕೊಂಡರೆ ಜಿಲ್ಲಾಧಿಕಾರಿಗಳು ಆತನಿಗೆ 30 ಸಾವಿರ ದಂಡ ಹಾಕಿಸಿದ್ದಾರೆ. ಮರಳು ಕಳ್ಳ ಸಾಗಾಣಿಕೆ ನಡೀತಿದೆ. ಪೊಲೀಸ್ ಠಾಣೆಗಳು ಅಕ್ರಮ ದಂಧೆಗಳಿಗೆ ಆಶ್ರಯ ನೀಡುವ ತಾಣಗಳಾಗಿವೆ ಎಂದು ಗುಡುಗಿದರು. ಇದನ್ನೂ ಓದಿ: ಜನಿವಾರದಿಂದ ನೇಣು ಹಾಕೊಂಡ್ರೆ ಏನ್ ಮಾಡೋದು – ವಿದ್ಯಾರ್ಥಿಗೆ ಉಡಾಫೆಯಾಗಿ ಪ್ರಶ್ನಿಸಿದ್ದ ಕಾಲೇಜು ಸಿಬ್ಬಂದಿ
ಭ್ರಷ್ಟ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಸರ್ಕಾರಕ್ಕೆ ರೈತ ಮೇಲೆ ಕಾಳಜಿ ಇಲ್ಲ. ಹಿಂದುಳಿದವರು, ದೀನದಲಿತರ ಬಗ್ಗೆಯೂ ಕಾಳಜಿ ಇಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರದಿಂದ ನೊಂದ ಪ್ರತಿಯೊಬ್ಬರು ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು. ಇದನ್ನೂ ಓದಿ: PublicTV Explainer: ರೈಲಿಗೂ ಬಂತು ATM; ಇನ್ಮುಂದೆ ರೈಲಲ್ಲೇ ಹಣ ಡ್ರಾ ಸಾಧ್ಯ – ಕರ್ನಾಟಕಕ್ಕೂ ಬರುತ್ತಾ?
ರಾಜ್ಯದಲ್ಲಿ ಅತ್ಯಾಚಾರ, ದರೋಡೆ, ಕಳ್ಳತನ ಮಾಮೂಲಾಗಿವೆ. ಅತ್ಯಾಚಾರಗಳು ಇಂತಹ ದೊಡ್ಡ ಪಟ್ಟಣದಲ್ಲಿ ನಡೆಯುವುದು ಸಹಜ ಎಂದು ಗೃಹಮಂತ್ರಿಗಳು ಹೇಳಿದ್ದಾರೆ. ಯಾವ ಗೃಹಮಂತ್ರಿ ಇವೆಲ್ಲವನ್ನೂ ನಿಯಂತ್ರಣ ಮಾಡಬೇಕೋ, ಅವರೇ ಹೀಗೆ ಹೇಳಿದರೇ ರಕ್ಷಣೆ ಮಾಡುವವರು ಯಾರು? ಇದ್ದಷ್ಟು ದಿನ ದೋಚಿಕೊಂಡು ಹೋಗಬೇಕು ಎನ್ನುವ ಮನಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದು ಕಿಡಿಕಾರಿದರು.