ಪೋಷಕರು 1ನೇ ತರಗತಿಯಿಂದಲೇ ಶಾಲೆ ಆರಂಭಿಸಲು ಹೇಳ್ತಿದ್ದಾರೆ : ಬಿ.ಸಿ.ನಾಗೇಶ್

Public TV
1 Min Read

ಹಾವೇರಿ: ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಪೋಷಕರು ಒಂದನೇ ತರಗತಿಗಳಿಂದಲೇ ಶಾಲೆ ಆರಂಭ ಮಾಡುವಂತೆ ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವಂತೆ ಹೇಳುತ್ತಿದ್ದಾರೆ. ಆನ್‍ಲೈನ್ ಕ್ಲಾಸ್‍ಗಳಲ್ಲಿ ಸರಿಯಾದ ಸಂವಹನ ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಶಾಲೆಗಳಿಗೆ ಭೇಟಿಯ ವೇಳೆ ತಿಳಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, 9,10,11 ಮತ್ತು 12 ತರಗತಿಗಳನ್ನು ತಜ್ಞರ ಸಲಹೆಯಂತೆ ಪ್ರಾರಂಭ ಮಾಡಿದ್ದೇವೆ. ಆಗಸ್ಟ್ 23,2021ರಿಂದ ಶಾಲೆಗಳನ್ನು ಆರಂಭ ಮಾಡಿದ್ದೇವೆ. ಇನ್ನೊಂದಿಷ್ಟು ದಿನಗಳ ಕಾಲ ನೋಡುತ್ತೇವೆ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದಷ್ಟು, ಅವರ ಆರೋಗ್ಯಕ್ಕೂ ಒತ್ತು ನೀಡುತ್ತೇವೆ. ಸರ್ಕಾರದ ವ್ಯವಸ್ಥೆ ಮೀರಿ ಕೆಲಸ ಮಾಡಿದ ಶಿಕ್ಷಕರು ನಮ್ಮಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಇಚ್ಛೆಯಂತೆ ಒಂದರಿಂದ ಐದನೇ ತರಗತಿವರೆಗೆ ಶಾಲೆ ಆರಂಭ ಮಾಡುವ ಬಗ್ಗೆ ಚಿಂತನೆ. ಎಲ್ಲ ಶಾಲೆಗಳಿಗೂ ಕುಡಿಯೋ ನೀರಿನ ವ್ಯವಸ್ಥೆ ಮಾಡಿದ್ದೇವೆ.

ಶಾಲಾ ಕೊಠಡಿಗಳ ವಿಷಯದಲ್ಲಿ ಹಣಕಾಸಿನ ಕೊರತೆ ಇದೆ. ಶಾಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಶೌಚಾಲಯಗಳ ಸಮಸ್ಯೆ ನಿವಾರಣೆ ಆಗಿದೆ. ಶೌಚಾಲಯಗಳು ಇಲ್ಲದ ಕಡೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದನ್ನೂ ಓದಿ:ಇನ್‍ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?

ನೌಕರಿ ಸಂಪಾದನೆಗೆ ಮಾತ್ರ ಓದುವುದಲ್ಲ. ಜ್ಞಾನ ಸಂಪಾದನೆಗೆ ಓದು. ಹೊಸ ಶಿಕ್ಷಣ ನೀತಿ ಜಾರಿ ಬಗ್ಗೆ ಏಳು ವರ್ಷಗಳಲ್ಲಿ ಅನೇಕ ಸೆಮಿನಾರ್, ಚರ್ಚೆಗಳ ಮುಖಾಂತರ ಎಲ್ಲೂ ಲೋಪ ಆಗದಂತೆ ಕ್ರಮ ವಹಿಸಲಾಗಿದೆ. ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರು, ಶಿಕ್ಷಣ ತಜ್ಞರ ಜೊತೆಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಎನ್‍ಇಪಿಯಲ್ಲಿ ಮಾತೃಭಾಷೆಗೆ ಕೊಟ್ಟಿರುವ ಆದ್ಯತೆ ಬೇರೆ ಭಾಷೆಗೆ ಕೊಟ್ಟಿಲ್ಲ. ಒಂದರಿಂದ ಐದರವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ. ಅದಾದ ಮೇಲೂ ಪದವಿಯವರೆಗೂ ಮಾತೃಭಾಷೆ ಒಂದು ವಿಷಯವಾಗಿದೆ.ಸೋಮವಾರದಿಂದ ಆರರಿಂದ ಎಂಟನೇ ತರಗತಿವರೆಗೆ ಶಾಲೆಗಳನ್ನು ಆರಂಭ ಮಾಡುತ್ತಿದ್ದೇವೆ ಹೇಳಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನು ಕೊಲೆ ಮಾಡಿ, ಹೂತು ಹಾಕಿದ ಕಿರಾತಕರು

Share This Article
Leave a Comment

Leave a Reply

Your email address will not be published. Required fields are marked *