ಬೆಂಗಳೂರು: ಇಂದು ಗಣೇಶ ಚತುರ್ಥಿ. ಹಲವರು ಗಣೇಶನನ್ನು ಕೂರಿಸಿದ ದಿನವೇ ವಿಸರ್ಜನೆ ಮಾಡುತ್ತಾರೆ. ಈ ಹಿನ್ನೆಲೆ ಬಿಬಿಎಂಪಿ (BBMP) 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ ಮಾಡಿಕೊಂಡಿದೆ.
ಬಿಬಿಎಂಪಿ ನಗರದ ಪ್ರಮುಖ ಕೆರಗಳ ಕಲ್ಯಾಣಿಯಲ್ಲಿ ವಿಸರ್ಜನೆಗೆ ಸಿದ್ಧತೆ ಮಾಡಿಕೊಂಡಿದ್ದು, 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ತಾತ್ಕಾಲಿಕ ಸಂಚಾರಿ ಕಲ್ಯಾಣಿಗಳ ವ್ಯವಸ್ಥೆ ಮಾಡಿಕೊಂಡಿದೆ.ಇದನ್ನೂ ಓದಿ: ಗಣೇಶ ಹಬ್ಬದಂದು ಚಂದ್ರನನ್ನು ನೋಡಬಾರದು ಯಾಕೆ?
ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳಲ್ಲಿಯೂ ಸಂಚಾರಿ ಕಲ್ಯಾಣಿ ವ್ಯವಸ್ಥೆ ಮಾಡಿಕೊಂಡಿದ್ದು, ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ಕೆರೆಗಳ ಕಲ್ಯಾಣಿ ಸುತ್ತ, ಬ್ಯಾರಿಕೇಡ್ ಹಾಕಿದ್ದು, ಕಲ್ಯಾಣಿಗಳಲ್ಲಿ ವಿಸರ್ಜನೆಗಾಗಿ ಸಿಬ್ಬಂದಿಯನ್ನು ನೇಮಿಸಿದೆ. ಜೊತೆಗೆ ಕಲ್ಯಾಣಿ ಬಳಿ ಮುಳುಗು ತಜ್ಞರ ನೇಮಕ ಮಾಡಿದ್ದು, ಸರತಿ ಸಾಲಿನಲ್ಲಿ ಬಂದು ಗಣೇಶ ವಿಸರ್ಜನೆ ಮಾಡುವಂತೆ ಕ್ರಮ ಕೈಗೊಂಡಿದ್ದಾರೆ. ಅದಲ್ಲದೇ ರಸ್ತೆಗೂ ಬ್ಯಾರಿಕೇಡ್ ಹಾಕಿ ಸಿದ್ಧತೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಯಾವುದೇ ಗೊಂದಲ ಆಗದಂತೆ ಪೊಲೀಸರ ನಿಯೋಜನೆ ಮಾಡಲಾಗಿದೆ.ಇದನ್ನೂ ಓದಿ: 5.71 ಲಕ್ಷ ನೀಡಿ ಮಾಳಿಂಗರಾಯ ಗದ್ದುಗೆಯ ತೆಂಗಿನಕಾಯಿ ಪಡೆದ ಭಕ್ತ