ಬೆಂಗಳೂರು: ಈಗ ಇರುವ ಬಿಬಿಎಂಪಿ (BBMP) ವ್ಯಾಪ್ತಿಯೇ ಗ್ರೇಟರ್ ಬೆಂಗಳೂರಿಗೂ ಇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಹಾಸನದಲ್ಲಿ ಮಾತ್ರ ಹಾರ್ಟ್ ಅಟ್ಯಾಕ್ ಕೇಸ್ ಜಾಸ್ತಿ ಆಗಿಲ್ಲ, ಇಡೀ ದೇಶದಲ್ಲಿ ಆಗ್ತಿದೆ: ಎ.ಮಂಜು
ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಸಂಬಂಧ ವಿಧಾನಸೌಧದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಯಾವ ರೀತಿ ವಿಭಜನೆ ಆಗಬೇಕು ಎಂದು ಫೈನಲ್ ರಿಪೋರ್ಟ್ ಕೊಟ್ಟಿದ್ದಾರೆ. ವಿಪಕ್ಷ ನಾಯಕರ ಜೊತೆಯೂ ನಾನು ಮಾತನಾಡಬೇಕಿತ್ತು. ಆದರೆ ಆ ದಿನ ಅವರು ಇರಲಿಲ್ಲ. ರಿಪೋರ್ಟ್ ಕೊಟ್ಟಿರುವವರು ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದೆಲ್ಲವೂ ಆದ ಮೇಲೆ ಇದನ್ನು ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗ್ತೀನಿ. ಈಗ ಇರುವ ಬಿಬಿಎಂಪಿ ವ್ಯಾಪ್ತಿಯೇ ಗ್ರೇಟರ್ ಬೆಂಗಳೂರಿಗೂ ಇರಲಿದೆ. ಮುಂದೆ ಹೊಸ ವ್ಯಾಪ್ತಿಯನ್ನು ಸೇರಿಸುವ ನಿರ್ಧಾರ ಮಾಡ್ತೀವಿ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕುರಿತು ಗೃಹ ಸಚಿವರಾದ ಜಿ.ಪರಮೇಶ್ವರ, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ರಿಜ್ವಾನ್ ಅರ್ಷದ್ ಹಾಗೂ ಜಿಬಿಎ ಅಧಿಕಾರಿಗಳು, ತಜ್ಞರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಲಾಯಿತು. pic.twitter.com/kpljiHSPsA
— DK Shivakumar (@DKShivakumar) July 7, 2025
ಈಗ ಎಲ್ಲವನ್ನೂ ಸಮಾನವಾಗಿ ವಿಂಗಡಿಸಲಾಗಿದೆ. ಹೊಸ ವ್ಯಾಪ್ತಿ ಸೇರಿಸುವ ಬಗ್ಗೆ ಮುಂದೆ ನೋಡೋಣ. ಈ ರಿಪೋರ್ಟ್ ಮುಂದಿನ ಕ್ಯಾಬಿನೆಟ್‌ನಲ್ಲಿ ತಂದು ಎಲೆಕ್ಷನ್ ಮಾಡುವ ಬಗ್ಗೆ ತೀರ್ಮಾನ ಮಾಡ್ತೀವಿ. ಮುಂದೆ ಹೊಸ ವ್ಯಾಪ್ತಿಯನ್ನು ಸೇರಿಸಬೇಕಾಗುತ್ತದೆ. ಸದ್ಯಕ್ಕೆ ಹೊಸ ವ್ಯಾಪ್ತಿ ಸೇರಿಸುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಹಿಮಾಚಲಪ್ರದೇಶ: 17 ದಿನದಲ್ಲಿ 19 ಬಾರಿ ಮೇಘಸ್ಫೋಟ – 82 ಸಾವು, ಬದರೀನಾಥ ಮಾರ್ಗ ಬಂದ್