ಮಳೆಗಾಲ ಮುಗಿಯೋವರೆಗೆ ಬೆಂಗ್ಳೂರಿನಲ್ಲಿ ಅಂಡರ್‌ಪಾಸ್ ಬಂದ್..?

Public TV
1 Min Read

– ಹುಟ್ಟೂರಿನಲ್ಲಿ ಮೇ 23ರಂದು ಟೆಕ್ಕಿ ಬಾನುರೇಖಾ ಅಂತ್ಯಕ್ರಿಯೆ
– ರಾಜ್ಯದ ಹಲವೆಡೆ ಮತ್ತೆ ಮಳೆ.. ಇರಲಿ ಎಚ್ಚರಿಕೆ

ಬೆಂಗಳೂರು: ನಗರದ ಕೆ.ಆರ್ ಸರ್ಕಲ್ ಅಂಡರ್‌ಪಾಸ್ ದುರಂತಕ್ಕೆ (Flooded UnderPass) ನಿರ್ಲಕ್ಷ್ಯವೇ ಕಾರಣ ಎಂದು ಹೈಕೋರ್ಟ್ (HighCourt) ಅಭಿಪ್ರಾಯಪಟ್ಟಿದ್ದು, ಬೆಂಗಳೂರಿನ (Bengaluru) ಅಂಡರ್‌ಪಾಸ್‌ಗಳ ಸ್ಥಿತಿಗತಿಯ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.

ಮಳೆ ಅನಾಹುತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ (BBMP) ಮಳೆಗಾಲ ಮುಗಿಯುವವರೆಗೆ ಸಮಸ್ಯೆಗಳು ಇರುವ ಎಲ್ಲಾ ಅಂಡರ್‌ಪಾಸ್ ಬಂದ್ ಮಾಡುವ ನಿರ್ಣಯಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ನಗರದ ಯಾವ್ಯಾವ ಅಂಡರ್‌ಪಾಸ್ ಸುರಕ್ಷತೆಯಿಂದ ಕೂಡಿಲ್ಲ. ಅವುಗಳ ಬಗ್ಗೆ ವರದಿ ನೀಡುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದೆ. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

ನಗರದಲ್ಲಿ 20ಕ್ಕೂ ಹೆಚ್ಚು ಅಂಡರ್‌ಪಾಸ್‌ಗಳು ನಿರ್ವಹಣೆ ಕೊರತೆಯಿಂದ ಡೇಂಜರ್ ಜೋನ್‌ನಲ್ಲಿವೆ. ಸಣ್ಣ ಮಳೆ ಬಂದರೂ ಅಂಡರ್‌ಪಾಸ್‌ಗಳು ಕೆರೆಯಂತಾಗುತ್ತಿವೆ. ಸದ್ಯ ವಿಂಡ್ಸರ್ ಮ್ಯಾನರ್ ಬಳಿಯ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದು, ಇಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

ನಗರದ ಎಲ್ಲಾ ಅಂಡರ್‌ಪಾಸ್‌ಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಮಧ್ಯೆ, ಹಿರಿಯ ಐಎಎಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಮೊದಲ ಸಭೆ ನಡೆಸಿದ್ದು, ಮುಂಗಾರುಪೂರ್ವ ಮಳೆ ಅವಾಂತರಗಳ ಬಗ್ಗೆ ಮಾಹಿತಿ ಪಡೆದು, ಹಲವು ಸಲಹೆ ಸೂಚನೆಗಳನ್ನ ಕೊಟ್ಟಿದ್ದಾರೆ.

ಬಿಬಿಎಂಪಿ ಹೇಳಿದ್ದೇನು?
ಕೆಆರ್ ವೃತ್ತದ ಅಂಡರ್‌ಪಾಸ್‌ನಲ್ಲಿ ಸಾಮಾನ್ಯವಾಗಿ ನೀರು ನಿಲ್ಲಲ್ಲ. ಎಲೆಗಳ ಕಾರಣದಿಂದ ನಿನ್ನೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ರಸ್ತೆಯಲ್ಲಿ ಬಿದ್ದಿದ್ದ ಎಲೆಗಳು ಕೊಚ್ಚಿಹೋಗಿ ನೀರಿನ ಕೊಳವೆಗೆ ಸಿಲುಕಿವೆ. ಇದರಿಂದ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಮುಂದಿನ ದಿನಗಳಲ್ಲಿ ಹೀಗೆ ಆಗದ ಹಾಗೆ ನೋಡಿಕೊಳ್ತೀವಿ ಎಂದು ಬಿಬಿಎಂಪಿ ಹೇಳಿದೆ.

Share This Article