ಚಿನ್ನದ ನಾಡು ಕೆಜಿಎಫ್‌ನ ಬಿಜಿಎಂಎಲ್ ಪ್ರದೇಶದಲ್ಲಿ ಕಸ ಸುರಿಯಲು ಬಿಬಿಎಂಪಿ ಪ್ಲಾನ್!

Public TV
4 Min Read

– ಜಾಗ ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚನೆ, ಸ್ಥಳೀಯರ ವಿರೋಧ
– 300 ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿಗೆ ಬಿಬಿಎಂಪಿ ಪ್ಲ್ಯಾನ್

ಕೋಲಾರ : ಅದು ವಿಶ್ವಕ್ಕೆ ಚಿನ್ನವನ್ನು ಬೆಳೆದು ಕೊಟ್ಟ ಚಿನ್ನದ ನೆಲ, ಅಲ್ಲಿ ಚಿನ್ನ ಬೆಳೆಯೋದು ನಿಂತು 2 ದಶಕಗಳೇ ಕಳೆದ ಹಿನ್ನೆಲೆ ಚಿನ್ನದ ಗಣಿ ಪ್ರದೇಶದಲ್ಲಿ ಬೆಂಗಳೂರಿನ (Bengaluru) ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ.

ಹೌದು ಮತ್ತೊಮ್ಮೆ ಬೆಂಗಳೂರು ಮಹಾನಗರದ ಘನ ತ್ಯಾಜ್ಯವನ್ನು ಚಿನ್ನದ ನಾಡಿನಲ್ಲಿ ವಿಲೇವಾರಿ ಮಾಡುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಈ ಮೊದಲು 2015 ರಲ್ಲಿ ಇದೇ ರೀತಿ ಪ್ರಸ್ತಾಪವೊಂದು ಮಾಡಲಾಗಿತ್ತು, ಬಿಬಿಎಂಪಿ(BBMP) ತ್ಯಾಜ್ಯವನ್ನು ಚಿನ್ನದ ಗಣಿ ಗುಂಡಿಗಳಲ್ಲಿ ಸುರಿಯುವ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರಸ್ತಾಪ ಕೈಬಿಡಲಾಗಿತ್ತು. ಈಗ ಮತ್ತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರದ ಘನ ತ್ಯಾಜ್ಯವನ್ನು ಚಿನ್ನದ ಗಣಿ ಪ್ರದೇಶದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯೋಜನೆಯೊಂದರ ಪ್ರಸ್ತಾಪ ಶುರುವಾಗಿದೆ. ಕೆಜಿಎಫ್(Kolar Gold Fields) ತಾಲ್ಲೂಕಿನಲ್ಲಿ ಚಿನ್ನದ ಗಣಿಗೆ ಸೇರಿದ ಸುಮಾರು 12,500 ಎಕರೆ ಪ್ರದೇಶವಿದೆ. ಸದ್ಯ ಚಿನ್ನದ ಗಣಿಗಾರಿಕೆ ಸ್ಥಗಿತವಾಗಿ 23 ವರ್ಷಗಳು ಕಳೆದಿದೆ ಹಾಗಾಗಿ ಕೇಂದ್ರ ಸರ್ಕಾರ ಚಿನ್ನದ ಗಣಿಯನ್ನು ಪುನರಾರಂಭ ಮಾಡುವುದಿಲ್ಲ ಅನ್ನೋದನ್ನ ಸ್ಪಷ್ಟ ಪಡಿಸಿದೆ. ಇದನ್ನೂ ಓದಿ: ಭ್ರಷ್ಟಾಚಾರದ ವಿರುದ್ಧ ಸಮರ – ಉ.ಪ್ರದೇಶದ 13 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಿಗಳಿಗೆ ಆಗಸ್ಟ್‌ ಸಂಬಳ ಸಿಗಲ್ಲ

ಪರಿಣಾಮ ಚಿನ್ನದ ಗಣಿಗೆ ಸೇರಿದ 300 ಎಕರೆ ಪ್ರದೇಶವನ್ನು ಬಿಬಿಎಂಪಿ ಖರೀದಿ ಮಾಡಿ, ಅದರಲ್ಲಿ ನೂರು ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿ, ಅದರ ಸುತ್ತಲೂ 200 ಎಕರೆ ಪ್ರದೇಶದಲ್ಲಿ ದಟ್ಟವಾದ ಕಾಡು ಬೆಳೆಸಿ ಬಯೋ ಫೆನ್ಸಿಂಗ್ ನಿರ್ಮಾಣ ಮಾಡುವುದು ಯೋಜನೆಯ ಪ್ಲಾನ್. ಸದ್ಯ ಜಿಲ್ಲಾಡಳಿತ ಗುರುತು ಮಾಡಿರುವ ಪ್ರದೇಶದ ಸುತ್ತಮುತ್ತ ಯಾವುದೇ ಹಳ್ಳಿ ಇಲ್ಲ, ಜೊತೆಗೆ ಇದು ಹೊಸದಾಗಿ ನಿರ್ಮಾಣವಾಗಿರುವ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ಹೈವೇಗೆ ಹೊಂದಿಕೊಂಡಂತೆ ಇರುವ ಜಾಗ ಅನ್ನೋ ಕಾರಣಕ್ಕೆ ಈ ಪ್ರದೇಶ ಸೂಕ್ತ ಎಂದು ಹೇಳಲಾಗುತ್ತಿದೆ. ಆದರೆ ಬೆಂಗಳೂರು ನಗರದಿಂದ ಬರೊಬ್ಬರಿ 100 ಕಿ.ಮೀ. ಆಗುವುದರಿಂದ ಸಾಗಾಣಿಕಾ ವೆಚ್ಚ ಹೆಚ್ಚಾಗುತ್ತದೆ ಅನ್ನೋ ಆತಂಕವೂ ಇದೆ. ಇದನ್ನೂ ಓದಿ: ಅರ್ಹತೆ ಹೊಂದಿರದ ಸಿಬ್ಬಂದಿ ಬಳಕೆ – ಏರ್ ಇಂಡಿಯಾಗೆ 90 ಲಕ್ಷ ರೂ. ದಂಡ

ಇನ್ನೂ ಜಿಲ್ಲಾಡಳಿತ ಗುರುತು ಮಾಡಿರುವ ಪ್ರದೇಶ ಚಿನ್ನದ ಗಣಿಗೆ ಸೇರಿದ ಜಾಗ ಮೊದಲು ಕೇಂದ್ರ ಸರ್ಕಾರದಿಂದ ಈ ಜಾಗವನ್ನು ಬಿಬಿಎಂಪಿ ಖರೀದಿ ಮಾಡಬೇಕಿದೆ. ಆ ನಂತರ ಈ ಪ್ರದೇಶದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದ ರೀತಿ, ಸುತ್ತಮುತ್ತ ಬರುವ ಜನವಸತಿ ಪ್ರದೇಶಗಳಿಗೆ ಯಾವ ಹಾನಿಯಾಗದ ರೀತಿ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ವಿಲೇವಾರಿ ಮಾಡುವುದರಿಂದ ಅಲ್ಲಿ ವಿದ್ಯುತ್ ಹಾಗೂ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕೋಲಾರ(Kolar) ಜಿಲ್ಲೆಯ ಕಸವನ್ನು ಇಲ್ಲೇ ವಿಲೇವಾರಿ ಮಾಡಲು ಅನುಕೂಲ ಅನ್ನೋ ಹಲವು ಉದ್ದೇಶ ಇಟ್ಟುಕೊಂಡು ಯೋಜನೆ ಸಿದ್ಧವಾಗುತ್ತಿದೆ. ಇದನ್ನೂ ಓದಿ: ಮುಡಾ ಹಗರಣಕ್ಕೆ ಅಧಿಕಾರಿ ಕಾರಣವೇ ಹೊರತು ಪ್ರಾಧಿಕಾರ ಸಮಿತಿಯಲ್ಲ – ರಮೇಶ ಬಂಡಿಸಿದ್ದೇಗೌಡ

ಅದಕ್ಕೂ ಮೊದಲು ಸ್ಥಳೀಯರ ಅಭಿಪ್ರಾಯ ಸಂಗ್ರಹದ ನಂತರವೇ ಯೋಜನೆ ಅನುಷ್ಠಾನ ಮಾಡುತ್ತೇವೆ ಅನ್ನೋದು ಅಧಿಕಾರಿಗಳ ಮಾತು. ಆದರೆ ಇನ್ನು ಈ ಯೋಜನೆ ಕುರಿತು ಪ್ರಸ್ತಾಪ ಶುರುವಾಗುತ್ತಿದ್ದಂತೆ ಈಗಾಗಲೇ ಕೆಜಿಎಫ್ ಭಾಗದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ದೇಶದಲ್ಲೇ ಅಪರೂಪ ಎನ್ನಲಾಗುವ ಕೃಷ್ಣಮೃಗ, ಚಿರತೆ, ಜಿಂಕೆ, ನವಿಲು, ಸೇರಿದಂತೆ ಪ್ರಾಣಿ ಸಂಕುಲ ಈ ಪ್ರದೇಶದಲ್ಲಿ ವಾಸವಾಗಿವೆ, ಇಲ್ಲಿನ ಪ್ರಾಣಿ ಸಂಕುಲ ನಶಿಸಿಹೋಗುತ್ತವೆ. ಇದನ್ನೂ ಓದಿ: ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ

ಸರ್ಕಾರ ಜೀವ ಪಣಕ್ಕಿಟ್ಟು ಚಿನ್ನ ಕೊಟ್ಟ ಕೆಜಿಎಫ್ ಜನರಿಗೆ ಕಸ ಕೊಟ್ಟು, ಜನರ ಆರೋಗ್ಯವನ್ನು ಕಿತ್ತುಕೊಳ್ಳುವ ಯೋಜನೆ ರೂಪಿಸುತ್ತಿದೆ. ಹೊಸ ಕೈಗಾರಿಕಾ ವಲಯ ಸ್ಥಾಪನೆ ಮಾಡುತ್ತೇವೆಂದು ಹೇಳಿ ಇಂಥ ಯೋಜನೆ ತರುತ್ತಿದ್ದೀರಿ, ಐಟಿ ಕಂಪನಿಗಳನ್ನು ಸ್ಥಾಪನೆ ಮಾಡುವುದಾಗಿ ಭರವಸೆ ಕೊಟ್ಟು ಬೆಂಗಳೂರಿನ ಕಸ ತಂದು ಸುರಿದು ಕೆಜಿಎಫ್ ಜನರ ಮೇಲೆ ನಿಮ್ಮ ಕಾಳಜಿಯನ್ನು ಪ್ರದರ್ಶನ ಮಾಡುತ್ತಿದ್ದೀರಿ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಕಳೆದ 10 ವರ್ಷದಿಂದ ನೀರಿನ ದರ ಏರಿಸಿಲ್ಲ, ಈಗ ಏರಿಕೆ ಮಾಡೋದ್ರಲ್ಲಿ ತಪ್ಪಿಲ್ಲ: ಸಚಿವ ರಾಮಲಿಂಗಾರೆಡ್ಡ

ಒಟ್ಟಿನಲ್ಲಿ ಚಿನ್ನದ ನಾಡು ಕೆಜಿಎಫ್‌ನಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಪ್ರಸ್ತಾಪ ಬಹುದೊಡ್ಡ ಚರ್ಚೆಯಾಗುತ್ತಿದೆ. ಸರ್ಕಾರ ಬೆಂಗಳೂರು ತ್ಯಾಜ್ಯ, ಕೆ.ಸಿ.ವ್ಯಾಲಿ ಕೊಟ್ಟು ನೀರು, ಮಣ್ಣು ಕಲುಷಿತವಾಗಿದೆ, ಈಗ ಕಸ ಹಾಕಿ ಗಾಳಿಯನ್ನೂ ಮಲೀನ ಮಾಡಲು ಮುಂದಾಗಿದೆ ಅನ್ನೋದು ಜಿಲ್ಲೆಯ ಜನರ ಮಾತಾಗಿದೆ. ಇದನ್ನೂ ಓದಿ: ಮಂಕಿಪಾಕ್ಸ್ ಕಾಯಿಲೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾದಲ್ಲಿ 50 ಬೆಡ್ ಮೀಸಲು – ಶರಣ ಪ್ರಕಾಶ್ ಪಾಟೀಲ್

Share This Article