ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

Public TV
1 Min Read

ಬೆಂಗಳೂರು: ಒತ್ತುವರಿ ಕಾರಣದಿಂದಾಗಿ ರಾಜಧಾನಿ ಬೆಂಗಳೂರು ಮಳೆಗಾಲದಲ್ಲಿ (Bengaluru Rain) ನಾನಾ ಅವಾಂತರಗಳನ್ನು ಎದುರಿಸಿತು. ಈ ಬಗ್ಗೆ ವಿಪಕ್ಷಗಳು ಹಾಗೂ ಜನರ ಟೀಕಾಪ್ರಹಾರದಿಂದ ಎಚ್ಚೆತ್ತ ಸರ್ಕಾರ, ಕೊನೆಗೂ ʼಆಪರೇಷನ್‌ ಬುಲ್ಡೋಜರ್‌ʼ (Operation Bulldozer) ಪ್ರಾರಂಭಿಸಿದೆ. ಆದರೆ ಪ್ರಭಾವಿಗಳ ಒತ್ತುವರಿ ಬಿಲ್ಡಿಂಗ್‌ ತೆರವಿಗೆ ಮಾತ್ರ ಮೀನಾಮೇಷ ಎಣಿಸುತ್ತಿದೆ.

ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ ಬಿಬಿಎಂಪಿ (BBMP) ಹಿಂದೇಟು ಹಾಕುತ್ತಿದ್ದು, ಅದಕ್ಕೆ ನಾನಾ ಕಾರಣಗಳನ್ನು ನೀಡುತ್ತಿದೆ. ನಮ್ಮ ಬಳಿ ಜೆಸಿಬಿ, ಬ್ರೇಕರ್‌ ಕೊರತೆ ಇದೆ ಎಂದು ಕಾರಣಗಳನ್ನು ನೀಡುತ್ತಿದೆ. ಹ್ಯಾರಿಸ್‌ ಮಾಲೀಕತ್ವದ ನಲಪಾಡ್‌ ಅಕಾಡೆಮಿಯ (Nalapad Academy) ಕೆಲ ಭಾಗಗಳಿಂದ ರಾಜಕಾಲುವೆ ಒತ್ತುವರಿಯಾಗಿತ್ತು. ಇದರ ತೆರವು ಕಾರ್ಯಾಚರಣೆಗೂ ಬೆಳಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯಾಚರಣೆ ಮಾತ್ರ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಳಿದರೆ, ತೆರವು ಕಾರ್ಯಾಚರಣೆಗೆ ಮೆಟಿರಿಯಲ್ಸ್‌ ಕೊರತೆ ಇದೆ ಎಂದು ಬಿಬಿಎಂಪಿ ಕಾರಣ ನೀಡುತ್ತಿದೆಯೆಂದು ಸ್ಥಳೀಯರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 2ನೇ ದಿನ – ಇಂದು ಪ್ರಭಾವಿಗಳ ಕಟ್ಟಡ ಕೆಡವುತ್ತಾ ಪಾಲಿಕೆ?

ನಾವು ಏಳು ಗಂಟೆಯಿಂದ ಸ್ಥಳದಲ್ಲಿ ಕಾಯ್ತಾ ಇದ್ದೀವಿ. ದೊಡ್ಡವರ ಅಖಾಡಕ್ಕೆ ಜೆಸಿಬಿ ಹೋಗೋದೆ ಇಲ್ಲ. ಆದರೆ ಬಡವರ ಮನೆಗೆ ಮಾತ್ರ ಬೇಗ ಹೋಗುತ್ತೆ. ಹ್ಯಾರಿಸ್ ಮಾಲೀಕತ್ವ ಅಂತಾ ಟಚ್ ಮಾಡೋಕೆ ಹಿಂದೇಟು ಹಾಕ್ತಾ ಇದ್ದಾರೆ ಎಂದು ಅಧಿಕಾರಿಗಳಿಗೆ ಫೋನ್‌ ಕರೆ ಮಾಡಿ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಲ್ಲಘಟ್ಟದ ನಲಪಾಡ್ ಅಕಾಡೆಮಿಯ ಒತ್ತುವರಿ ಜಾಗ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿತ್ತು. ಈ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿದ್ದಂತೆ ಎಚ್ಚೆತ್ತು, ಕೊನೆಗೂ ನಲಪಾಡ್ ಅಕಾಡೆಮಿ ಸ್ಥಳಕ್ಕೆ ಅಧಿಕಾರಿಗಳ ನೇತೃತ್ವದಲ್ಲಿ ಜೆಸಿಬಿ ಧಾವಿಸಿದೆ. ಇದನ್ನೂ ಓದಿ: ಮಂಡ್ಯದ ಇಬ್ಬರು ಹಾಲಿ, ಓರ್ವ ಮಾಜಿ ಶಾಸಕರಿಗೆ ಸಂಕಷ್ಟ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *