ಮಾ.27ಕ್ಕೆ ಬಿಬಿಎಂಪಿ ಬಜೆಟ್ – ಡಿಕೆಶಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Public TV
2 Min Read

ಬೆಂಗಳೂರು: ಮಾರ್ಚ್ 27ಕ್ಕೆ ಬಿಬಿಎಂಪಿ ಬಜೆಟ್ (BBMP Budget) ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.

ಸಭೆ ಮುಗಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ನಗರದ ಶಾಸಕರು, ಸಂಸದರು ಸೇರಿದಂತೆ ಚುನಾಯಿತ ಸದಸ್ಯರ ಸಲಹೆ ಪಡೆದಿದ್ದೇವೆ. ಬಜೆಟ್ ಗಾತ್ರದ ಬಗ್ಗೆ ಅನೇಕರು ಸಲಹೆ ಕೊಟ್ಟಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದಿದ್ದೇನೆ. ಇಂಡಿಪೆಂಡೆಂಟ್ ಆಗಿ ಕಮಿಷನರ್ ಬಜೆಟ್ ಮಂಡನೆ ಮಾಡುತ್ತಾರೆ ಎಂದರು. ಇದನ್ನೂ ಓದಿ: Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಏನು ಹೇಳಿಲ್ಲ. ಬಿಜೆಪಿ ಅವರು ತಿರುಚುತ್ತಿದ್ದಾರೆ. ನನ್ನ ಹೇಳಿಕೆ ಬೇಕಿದ್ರೆ ತೆಗೆದು ನೋಡಿ. ನಾನು ಅಸೆಂಬ್ಲಿಗೆ ಬಂದು 36 ವರ್ಷಗಳು ಆಗಿವೆ. ನನ್ನ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪ ಮಾಡಿರೋರಿಗೆ ಪಾಪ ಅರ್ಥ ಆಗಿಲ್ಲ ಅನ್ನಿಸುತ್ತದೆ. ನನ್ನ ಭಾಷೆ, ನನ್ನ ಮಾತು, ನನ್ನ ವಿಚಾರ ನಾನು ಅಸೆಂಬ್ಲಿಯಲ್ಲೇ ಇರಲಿಲ್ಲ. ಬಿಲ್ ಮಂಡನೆ ಮಾಡಿದಾಗ ನಾನು ಅಸೆಂಬ್ಲಿಯಲ್ಲಿ ಇರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಚಿವರು, ಶಾಸಕರಿಂದ ಫೋನ್ ಟ್ಯಾಪಿಂಗ್ ಆರೋಪ, ಸಿಎಂಗೆ ದೂರು – ನನಗೆ ಗೊತ್ತಿಲ್ಲ: ಪರಮೇಶ್ವರ್

ಸಭೆ ಅಲ್ಲದೆ ಹೊರಗಡೆಯೂ ನಾನು ಎಲ್ಲೂ ಹೇಳಿಕೆ ಕೊಡಲಿಲ್ಲ. ರಾಷ್ಟ್ರೀಯ ಮಾಧ್ಯಮದಲ್ಲಿ ಭಾಗವಹಿಸಿದ ವೇಳೆಯೂ ನಾನು ಬದಲಾವಣೆ ಬಗ್ಗೆ ಮಾತನಾಡಿಲ್ಲ. 4% ಮೀಸಲಾತಿ ವಿಚಾರ ನಾನು ಪ್ರಸ್ತಾಪ ಮಾಡಿಯೇ ಇಲ್ಲ. ಸಂವಿಧಾನ ತಂದಿರೋರು ನಾವು, ಸಂವಿಧಾನ ರಕ್ಷಣೆ ಮಾಡೋರು ನಾವು. ಎಲ್ಲರಿಗೂ ನ್ಯಾಯ ಒದಗಿಸುವ ಬದ್ಧತೆ ನಮಗೆ ಇದೆ. ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ, ಬೇಸಿಗೆಯಲ್ಲೂ ತೊಂದರೆಯಾಗಲ್ಲ: ಕೆಪಿಟಿಸಿಎಲ್ ಎಂಡಿ

ಈ ಹೇಳಿಕೆ ಬಗ್ಗೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಮ್ಮ ಪಾರ್ಟಿ ಅವರು ಕೇಳಿದ್ದಾರೆ. ನಾನು ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಟ್ವೀಟ್ ಕೂಡಾ ಮಾಡಿದ್ದೇನೆ. ಅದಕ್ಕೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಬಿಜೆಪಿ ಅವರು ಏನಾದರೂ ಹೇಳೋದು ಇದ್ದರೆ ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ದೂರು ಕೊಡಲಿ ಎಂದರು. ಇದನ್ನೂ ಓದಿ: IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

Share This Article