BBK 12 | ಧ್ರುವಂತ್‌ ಔಟ್‌ – Top 6 ಸ್ಪರ್ಧಿಯಾಗಿ ಕಾವ್ಯ ಸೇಫ್‌

0 Min Read

– ಫಿನಾಲೆಗೆ ಎಂಟ್ರಿಕೊಟ್ಟ ರಕ್ಷಿತಾ, ಗಿಲ್ಲಿ, ಅಶ್ವಿನಿ, ರಘು, ಧನುಷ್‌ ಹಾಗೂ ಕಾವ್ಯ 

ಬಿಗ್‌ಬಾಸ್‌ ಸೀಸನ್‌ 12ರ ಫಿನಾಲೆ ವಾರಕ್ಕೂ ಮುನ್ನ ನಡೆದ ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಧ್ರುವಂತ್‌ ಮನೆಯಿಂದ ಹೊರಹೋಗಿದ್ದು, Top 6 ಸ್ಪರ್ಧಿಯಾಗಿ ಕಾವ್ಯ ಸೇಫ್‌ ಆಗಿದ್ದಾರೆ.

ಮನೆಯಲ್ಲಿದ್ದ ಏಳು ಜನರ ಪೈಕಿ ಧನುಷ್‌ ಈಗಾಗಲೇ ಫಿನಾಲೆ ತಲುಪಿದ್ದಾರೆ. ಇನ್ನುಳಿದಂತೆ ಗಿಲ್ಲಿ, ರಘು, ಅಶ್ವಿನಿ, ರಕ್ಷಿತಾ, ಕಾವ್ಯ ಹಾಗೂ ಧ್ರುವಂತ್‌ ನಾಮಿನೇಟ್‌ ಆಗಿದ್ದರು. ಈ ಕುರಿತು ಭಾನುವಾರದ ಎಪಿಸೋಡ್‌ನಲ್ಲಿಯೇ ಕಿಚ್ಚ ಸುದೀಪ್‌ ಮಾಹಿತಿ ನೀಡಿದ್ದರು. ಇದನ್ನೂ ಓದಿ: Bigg Boss: ಇಂದು ಮಿಡ್‌ ವೀಕ್‌ ಎಲಿಮಿನೇಷನ್‌ – ಮನೆಯಿಂದ ಹೊರ ಹೋಗೋದ್ಯಾರು?

ಮಿಡ್‌ ವೀಕ್‌ ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ ಆ್ಯಕ್ಟಿವಿಡಿ ರೂಮ್‌ನಿಂದ ಒಬ್ಬೊಬ್ಬರನ್ನೇ ಹೊರಗೆ ಕಳುಹಿಸಲಾಗುತ್ತದೆ. ಹೊರಕಳುಹಿಸಲ್ಪಡುವ ಸದಸ್ಯರ ಪೈಕಿ ಮನೆಯ ಒಳಗಡೆ ಮರಳಿ ಬರುವವರು ಸೀಸನ್‌ 12ರ ಫಿನಾಲೆ ತಲುಪುತ್ತಾರೆ ಎಂದು ಬಿಗ್‌ಬಾಸ್‌ ತಿಳಿಸಿರುತ್ತಾರೆ. ಅದರಂತೆ ರಕ್ಷಿತಾ, ಗಿಲ್ಲಿ, ಅಶ್ವಿನಿ, ರಘು ಒಬ್ಬೊಬ್ಬರಾಗಿ ಮನೆಯ ಒಂದೊಂದು ದ್ವಾರಗಳ ಮೂಲಕ ಮನೆಗೆ ವಾಪಸ್ಸಾಗುತ್ತಾರೆ.

ಕೊನೆಯದಾಗಿ ಉಳಿಯುವ ಧ್ರುವಂತ್‌ ಹಾಗೂ ಕಾವ್ಯ ಸ್ವಲ್ಪ ಸಮಯದ ಅಂತರದಲ್ಲಿ ಒಟ್ಟಾಗಿ ಆಚೆ ಬರುತ್ತಾರೆ. ಅದರಂತೆ ಕಾವ್ಯ ಮುಖ್ಯ ದ್ವಾರದ ಮೂಲಕ ಮನೆಗೆ ಮರಳಿದರೆ, ಧ್ರುವಂತ್‌ ಬಿಗ್‌ಬಾಸ್‌ ಪ್ರಯಾಣ ಇಲ್ಲಿಗೆ ಕೊನೆಯಾಗಿದೆ.

ಬಿಗ್‌ಬಾಸ್‌ ಸೀಸನ್‌ 12ರ Top 6 ಸ್ಪರ್ಧಿಗಳಾಗಿ ರಕ್ಷಿತಾ, ಗಿಲ್ಲಿ, ಅಶ್ವಿನಿ, ರಘು, ಧನುಷ್‌ ಹಾಗೂ ಕಾವ್ಯ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಇದನ್ನೂ ಓದಿ: ರಾಶಿಕಾ ಹೇಳೋ ಆ 5 ಫೈನಲಿಸ್ಟ್‌ಗಳ್ಯಾರು?

Share This Article