BBK 11: ಮೊದಲ ವಾರವೇ ಯಾರಿಗೆ ಗೇಟ್‌ ಪಾಸ್?- ದೊಡ್ಮನೆಯಲ್ಲಿ ನಾಮಿನೇಷನ್ ಕಿಡಿ

Public TV
1 Min Read

ಪ್ರೇಕ್ಷಕರು ಕಾಯುತ್ತಿದ್ದ ಕಿರುತೆರೆಯ ಅತೀ ದೊಡ್ಮ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada 11) ಅದ್ಧೂರಿಯಾಗಿ ಚಾಲನೆ ಸಿಕ್ಕಾಗಿದೆ. 17 ಸ್ಪರ್ಧಿಗಳ ನಡುವೆ ಈಗಾಗಲೇ ಗೆಲುವಿಗಾಗಿ ಪೈಪೋಟಿ ಶುರುವಾಗಿದೆ. ಹೀಗಿರುವಾಗ ಮೊದಲ ವಾರವೇ ಅರ್ಧಕರ್ಧ ಜನ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಇದನ್ನೂ ಓದಿ:ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

ಬಿಗ್ ಬಾಸ್ ಮನೆಗೆ ಸಿನಿಮಾ, ಸೀರಿಯಲ್, ರಂಗಭೂಮಿ, ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದವರು ಬಂದಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರೋರು ಬಿಗ್ ಬಾಸ್‌ನಲ್ಲೂ ಸದ್ದು ಮಾಡೋಕೆ ಎಂಟ್ರಿ ಕೊಟ್ಟಿದ್ದಾರೆ. ಆಟ ಶುರುವಾದ ಮೂರೇ ದಿನಕ್ಕೆ ಈಗ ದೊಡ್ಮನೆಯಲ್ಲಿ ನಾಮಿನೇಷನ್ ಕಿಡಿ ಹೊತ್ತಿಕೊಂಡಿದೆ. ತಮ್ಮ ಉಳಿವಿಗಾಗಿ ಇನ್ನೊಬ್ಬರನ್ನು ಹರಿಕೆಯ ಕುರಿ ಮಾಡೋಕೆ ಪಣ ತೊಟ್ಟಿದ್ದಾರೆ.

ದೊಡ್ಮನೆ ಆಟದಲ್ಲಿ ಮೊದಲ ವಾರದ ಎಲಿಮಿನೇಷನ್ ಕತ್ತಿ ಇದೀಗ ಗೌತಮಿ ಜಾದವ್ (Gouthami Jadav), ಶಿಶಿರ್, ಉಗ್ರಂ ಮಂಜು, ಯಮುನಾ, ಹಂಸ, ಭವ್ಯಾ, ಮೋಕ್ಷಿತಾ ಪೈ (Mokshitha Pai), ಮಾನಸಾ, ಚೈತ್ರಾ ಕುಂದಾಪುರ (Chaithra Kundapura) ಮೇಲೆ ತೂಗುತ್ತಿದೆ. ಇವರೆಲ್ಲರೂ ನಾಮಿನೇಟ್ ಆಗಿದ್ದಾರೆ. ಹಾಗಾದ್ರೆ ಬಿಗ್ ಬಾಸ್ ಮನೆಯ ಆಟದಲ್ಲಿ ಮೊದಲ ವಾರ ಔಟ್ ಆಗೋದು ಯಾರು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಯಾರಿಗೆ ಮೊದಲ ವಾರವೇ ಬಿಗ್ ಬಾಸ್ ಅಂತ್ಯವಾಗುತ್ತದೆ ಎಂದು ಕಾದುನೋಡಬೇಕಿದೆ. ಇಡೀ ಮನೆ ಚೈತ್ರಾ ಕುಂದಾಪುರ ಆಟಕ್ಕೆ ಕತ್ತಿ ಮಸೆಯಲು ಶುರು ಮಾಡಿದ್ದಾರೆ. ಯಮುನಾ ಮಾತಿನ ವರಸೆಗೆ ಕಿಡಿಕಾರುತ್ತಿದ್ದಾರೆ. ಇತ್ತ ಮೋಕ್ಷಿತಾ, ಗೌತಮಿ, ಹಂಸ ಸೈಲೆಂಟ್ ಆಗಿದ್ರೆ, ಶಿಶಿರ್ ಮತ್ತು ಮಾನಸಾ ಸಂದರ್ಭಕ್ಕೆ ತಕ್ಕಂತೆ ಎದುರಾಳಿಯ ಮಾತಿಗೆ ಮಾತು, ಏಟಿಗೆ ಏದುರೇಟು ಕೊಡುತ್ತಿದ್ದಾರೆ. ಇನ್ನೇನು ಈ ವಾರಾಂತ್ಯ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ಸ್ಪರ್ಧಿಗೆ ಗೇಟ್ ಪಾಸ್ ಸಿಗುತ್ತೆ ಎಂಬುದಕ್ಕೆ ಉತ್ತರ ಸಿಗಲಿದೆ.

Share This Article