ಬಲರಾಮನ ಅಡ್ಡಾಗೆ ಖಡಕ್ ಎಂಟ್ರಿ ಕೊಟ್ಟ ‘ಬಿಗ್ ಬಾಸ್’ ವಿನಯ್ ಗೌಡ

Public TV
1 Min Read

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 10) ಕಳೆದ 10ನೇ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಮಾಡಿತ್ತು. ಅದರಲ್ಲಿ ವಿನಯ್ ಗೌಡ (Vinay Gowda) ಅಂತೂ ಕಾರ್ತಿಕ್ ಮಹೇಶ್‌ಗೆ (Karthik Mahesh) ಪ್ರತಿಸ್ಪರ್ಧಿಯಾಗಿ ಠಕ್ಕರ್ ಕೊಟ್ಟಿದ್ದರು. ಈಗ ಅವರು ಹೊಸ ಸಿನಿಮಾದ ಅಪ್‌ಡೇಟ್ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ವಿನೋದ್ ಪ್ರಭಾಕರ್ ಬಲರಾಮನಾಗಿ ನಟಿಸುತ್ತಿರುವ ಸಿನಿಮಾದಲ್ಲಿ ವಿನಯ್ ಗೌಡ ಖಡಕ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಲರಾಮನ ದಿನಗಳು’ ಸಿನಿಮಾಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರದ ಲುಕ್‌ ಹೇಗಿರಲಿದೆ ಎಂಬುದು ಅನಾವರಣ ಆಗಿದೆ. ಚಿತ್ರದ ಪೋಸ್ಟರ್‌ ರಿವೀಲ್ ಆಗಿದೆ. ಇದನ್ನೂ ಓದಿ:ಜಯಮಾಲಾ ಮಗಳ ಹಳದಿ ಸಂಭ್ರಮ- ಸ್ಯಾಂಡಲ್‌ವುಡ್ ಸ್ಟಾರ್ಸ್ ಭಾಗಿ

ಬನಿಯನ್ ಧರಿಸಿ, ಮೇಲೊಂದು ಶರ್ಟ್, ಕುತ್ತಿಗೆಯಲ್ಲಿ ಎರಡು ಚಿನ್ನದ ಚೈನ್, ಕೈಬೆರಳಲ್ಲಿ ಉಂಗುರಗಳು, ಉದ್ದವಾದ ಕೂದಲು, ಕೈಯಲ್ಲಿ ಚಾಕು ಹಿಡಿದು ವಿನಯ್ ಗೌಡ ಪೋಸ್ ಕೊಟ್ಟಿದ್ದಾರೆ. ಸದ್ಯ ವಿನಯ್ ಗೌಡ ಲುಕ್ ವೈರಲ್ ಆಗುತ್ತಿದೆ. ವಿನಯ್ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇನ್ನೂ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲೂ ಅವರಿಗೆ ಅವಕಾಶ ಸಿಕ್ಕಿದೆ. ಸಿನಿಮಾ ಶೂಟಿಂಗ್ ಅವರು ಎದುರು ನೋಡ್ತಿದ್ದಾರೆ.

Share This Article