ಮುದ್ದಿನ ನಾಯಿಗೋಸ್ಕರ ಪವಿ ಪೂವಪ್ಪ ಲವ್ ಬ್ರೇಕಪ್ – ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

Public TV
2 Min Read

‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ಪವಿ ಪೂವಪ್ಪ (Pavi Poovappa) ಅವರು ಮೊದಲ ಬಾರಿಗೆ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಾಯಿ ವಿಚಾರಕ್ಕೆ ಬಾಯ್‌ಫ್ರೆಂಡ್ ಡಿಜೆ ಮ್ಯಾಡಿ ಅವರೊಂದಿಗೆ ಬ್ರೇಕಪ್ (Breakup) ಮಾಡಿಕೊಂಡಿದ್ದರ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

‘ಭರ್ಜರಿ ಬ್ಯಾಚುಲರ್ 2’ ಕಾರ್ಯಕ್ರಮದಲ್ಲಿ ಬ್ರೇಕಪ್ ಸ್ಟೋರಿಯನ್ನು ಹೇಳುತ್ತಾ ಪವಿ ಪೂವಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾವು ಐದು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ವಿ. ಅವರು ನಾರ್ಥ್ ಇಂಡಿಯನ್ ನಾನು ಸೌತ್ ಇಂಡಿಯನ್. ನನಗೆ ನನ್ನ ನಾಯಿ ಅಂದರೆ ಪಂಚಪ್ರಾಣ. ನನ್ನ ಹುಟ್ಟುಹಬ್ಬಕ್ಕೆ ಆ ನಾಯಿಯನ್ನು ಅವರೇ ಉಡುಗೊರೆಯಾಗಿ ನೀಡಿದ್ದರು. ಆದರೆ ನನ್ನನ್ನು ಬಿಟ್ಟು ಹೋಗಲು ನಾಯಿ ಕಾರಣವನ್ನು ಕೊಟ್ಟರು. ನಾಯಿಯನ್ನು ಮಾರಿಬಿಡು ಆಗಲೇ ನಿನ್ನನ್ನು ಮನೆಗೆ ಸೇರಿಸಿಕೊಳ್ಳುವುದು ಅಂತೆಲ್ಲಾ ಹೇಳಿದ್ದರು. ಇಲ್ಲ ಅಂದ್ರೆ ಮದುವೆ ಆಗಲ್ಲ ಎಂದು ಹೇಳಿದ್ದರು. ಆ ನಾಯಿ ನನಗೆ ಎಷ್ಟು ಇಷ್ಟ ಅನ್ನೋದು ಅವರಿಗೂ ಚೆನ್ನಾಗಿ ಗೊತ್ತಿತ್ತು. ಈಗಲೂ ಅವನು ನನ್ನನ್ನು ಬಿಟ್ಟು ಇರೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

 

View this post on Instagram

 

A post shared by Zee Kannada (@zeekannada)

ಬ್ರೇಕಪ್ ಮಾಡಿಕೊಳ್ಳುವ ಉದ್ದೇಶದಿಂದಲೇ ನಾಯಿ ವಿಚಾರ ಹೇಳಿ ಹೀಗೆ ಮಾಡಿದರಬಹುದು. ಬಹುಶಃ ಅವರಿಗೆ ಮದುವೆ ಆದಮೇಲೆ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಹಾಗಾಗಿ ನಾಯಿ ಕಾರಣ ಕೊಟ್ಟು ಬ್ರೇಕಪ್ ಮಾಡಿಕೊಂಡಿದ್ದಾರೆ. ಇದಾಗಿ 8 ತಿಂಗಳುಗಳಾಗಿದೆ. ಎರಡು ದಿನದ ಹಿಂದೆ ನಾನು ಅವರನ್ನು ನೋಡಿದೆ ಎನ್ನುತ್ತಾ ಪವಿ ಪೂವಪ್ಪ ಗಳಗಳನೆ ಅತ್ತಿದ್ದಾರೆ. ಆಗ `ಭರ್ಜರಿ ಬ್ಯಾಚುಲರ್ಸ್‌’ ತಂಡದವರು ಅವರನ್ನು ಸಂತೈಸಿದ್ದಾರೆ.

‘ಬಿಗ್ ಬಾಸ್’ ಕನ್ನಡ 10ರಲ್ಲಿ ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಕೆಲವೇ ದಿನ ಇದ್ದರೂ ಜನರ ಮನಗೆದ್ದಿದ್ದರು. ಇದೀಗ ‘ಭರ್ಜರಿ ಬ್ಯಾಚುಲರ್ 2’ ಉಲ್ಲಾಸ್‌ಗೆ ಪವಿ ಮೆಂಟರ್ ಆಗಿದ್ದಾರೆ.

Share This Article